ಕ್ರಿಕೆಟ್ ಮ್ಯಾಚ್ ನಡೆಯುವಾಗ ಗ್ಯಾಲರಿಯಲ್ಲಿ ಕುಳಿತಿರುವ ಪ್ರೇಕ್ಷಕರು ತಾವೊಮ್ಮೆ ಕ್ಯಾಮೆರಾದಲ್ಲಿ ಕಾಣಿಸಿಕೊಂಡರೆ ಸಾಕಪ್ಪ ಎಂದು ಏನೇನೋ ಪ್ರಯತ್ನಗಳನ್ನು ಮಾಡುವುದನ್ನು ನೋಡಿದ್ದೇವೆ. ವಿಚಿತ್ರವಾಗಿ ಡ್ರೆಸ್ ಮಾಡಿಕೊಂಡು ಬರುವುದು, ತಮ್ಮ ಮೆಚ್ಚಿನ ಕ್ರಿಕೆಟಿಗನ ಹೇರ್ಸ್ಟೈಲ್ ಮಾಡಿಕೊಳ್ಳುವುದು, ಅವರ ಫೋಟೋವನ್ನು ಮುಖದ ಮೇಲೆ ಪೇಂಟ್ ಮಾಡಿಸಿಕೊಳ್ಳುವುದು ಇನ್ನೂ ನಾನಾ ರೀತಿಯ ಜನರನ್ನು ಕ್ರಿಕೆಟ್ ಪಂದ್ಯದ ವೇಳೆ ನೋಡುತ್ತಿರುತ್ತೇವೆ. ಅವರಲ್ಲಿ ಸಾಕಷ್ಟು ಜನರು ಹೈಲೈಟ್ ಕೂಡ ಆಗುತ್ತಾರೆ. ಆದರೆ, ತಮ್ಮ ಮೇಲೆ ಒಮ್ಮೆ ಕ್ಯಾಮೆರಾ ಕಣ್ಣು ಬಿದ್ದರೆ ಸಾಕಪ್ಪಾ ಎಂದು ಹಾತೊರೆಯುವವರ ನಡುವೆ ಇಲ್ಲೊಬ್ಬಳು ಮಹಿಳೆ ಫುಟ್ಬಾಲ್ ಲೈವ್ ಪಂದ್ಯದ ವೇಳೆ ಕ್ಯಾಮೆರಾದಲ್ಲಿ ಸೆರೆಯಾಗಿ ಮುಜುಗರಕ್ಕೀಡಾಗಿದ್ದಾಳೆ. ಇದೇನಪ್ಪಾ ಹೊಸ ವಿಚಾರ ಅಂತೀರಾ?
ಅಮೆರಿಕದಲ್ಲಿ ನಡೆಯುತ್ತಿದ್ದ ಮೇಜರ್ ಲೀಗ್ ಸಾಕರ್ (MLS) ಪಂದ್ಯದ ವೇಳೆ ಇದ್ದಕ್ಕಿದ್ದಂತೆ 2 ವರ್ಷದ ಬಾಲಕನೊಬ್ಬ ಪ್ರೇಕ್ಷಕರ ಗ್ಯಾಲರಿಯಿಂದ ಮೈದಾನಕ್ಕೆ ಓಡಿದ್ದಾನೆ. ಮಗ ತನ್ನ ಕೈತಪ್ಪಿಸಿಕೊಂಡು ಲೈವ್ ಮ್ಯಾಚ್ ಓಡಿಹೋಗಿದ್ದನ್ನು ನೋಡಿ ಗಾಬರಿಯಿಂದ ಆತನ ಹಿಂದೆಯೇ ಮೈದಾನಕ್ಕೆ ನುಗ್ಗಿದ ಆತನ ತಾಯಿ ಮಗನನ್ನು ಗಟ್ಟಿಯಾಗಿ ಹಿಡಿದುಕೊಂಡು ವಾಪಾಸ್ ಬರಲು ನೋಡಿದ್ದಾಳೆ. ಗಾಬರಿಯಿಂದ ಮಗನನ್ನು ಎತ್ತಿಕೊಂಡ ಆಕೆ ಅಷ್ಟರಲ್ಲೇ ಕಾಲು ಜಾರಿ ಕೆಳಗೆ ಬಿದ್ದಿದ್ದಾಳೆ. ಸುತ್ತಲೂ ಇದ್ದ ಸೆಕ್ಯುರಿಟಿಗಳು ಹಾಗೂ ಎಂಎಲ್ಸಿ ಪಂದ್ಯ ಆಯೋಜಕ ತಂಡದ ಸಿಬ್ಬಂದಿ ಓಡಿಬಂದಿದ್ದಾರೆ. ತಾನೇ ಸಾವರಿಸಿಕೊಂಡು ಎದ್ದುನಿಂತ ಆ ಮಹಿಳೆ ಮಗನನ್ನು ಎತ್ತಿಕೊಂಡು ಪ್ರೇಕ್ಷಕರ ಗ್ಯಾಲರಿಯತ್ತ ಓಡಿಹೋಗಿದ್ದಾಳೆ.
We hope this mother and her young pitch invader are having a great day. ?
pic.twitter.com/hKfwa6wyWI— Major League Soccer (@MLS) August 9, 2021
ಈ ಘಟನೆ ನಡೆದಿರುವುದು ಫುಟ್ಬಾಲ್ ಲೈವ್ ಮ್ಯಾಚ್ ನಡೆಯುತ್ತಿದ್ದಾಗ. ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ವಿಶ್ವಾದ್ಯಂತ ನೇರಪ್ರಸಾರವಾಗಿದೆ. ಈ ಒಂದು ವಿಡಿಯೋ ಜಗತ್ತಿನಾದ್ಯಂತ ವೈರಲ್ ಆಗಿದ್ದು, ಮಗು ಮಾಡಿದ ಅವಾಂತರದ ವಿಡಿಯೋ ನೋಡಿದರೆ ನಗದೇ ಇರಲು ಸಾಧ್ಯವೇ ಇಲ್ಲ. ಮಗುವನ್ನು ಹಿಡಿಯಲು ಮೈದಾನದಲ್ಲಿ ಓಡಿದ ಅಮ್ಮ ಜಾರಿ ಬಿದ್ದಿರುವ ವಿಡಿಯೋವನ್ನು ಮೇಜರ್ ಲೀಗ್ ಸಾಕರ್ ಅಧಿಕೃತ ಟ್ವಿಟ್ಟರ್ ಪೇಜಿನಲ್ಲಿ ಕೂಡ ಶೇರ್ ಮಾಡಲಾಗಿದೆ.
ಆ ತಾಯಿ ಹಾಗೂ ಆಕೆಯ ಪಿಚ್ ಇನ್ವೇಡರ್ ಫುಟ್ಬಾಲ್ ಪಂದ್ಯವನ್ನು ಎಂಜಾಯ್ ಮಾಡಿದರೆಂದು ಭಾವಿಸುತ್ತೇವೆ ಎಂದು ತಮಾಷೆಯಾಗಿ ಎಂಎಲ್ಸಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ.
A young pitch invader was quickly scooped up by their own personal security detail without incident. #FCCincy #mls pic.twitter.com/gK2bzgNdas
— Sam Greene (@SGdoesit) August 8, 2021
ಮಗುವನ್ನು ಎತ್ತಿಕೊಂಡು ಮೈದಾನದಿಂದ ಓಡಿಹೋಗುತ್ತಿರುವ ತಾಯಿಯ ಫೋಟೋಗಳು ಕೂಡ ವೈರಲ್ ಆಗಿದ್ದು, ಹಲವು ಮೇಮ್ಗಳನ್ನು ಕೂಡ ಮಾಡಲಾಗಿದೆ.
ಇದನ್ನೂ ಓದಿ: Viral Video: ಸೀರೆಯುಟ್ಟು ಸ್ಟಂಟ್ ಮಾಡಿದ ಯುವತಿ ವಿಡಿಯೋ ವೈರಲ್; ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿ ಎಂದ ನೆಟ್ಟಿಗರು
Viral News: ತಾಳಿ ಕಟ್ಟುವ ಹೊತ್ತಲ್ಲಿ ಮದುವೆ ಬೇಡವೆಂದ ವಧು; ಕಾರಣ ಕೇಳಿದ್ರೆ ಶಾಕ್ ಆಗ್ತೀರ
(2 Year Old Boy Pitch Invader Run into Field during Football Match Mother Cases Son in Funny Video)