Viral Video : ಯಾರ್ಯಾರಿಗೆ ಯಾವ್ಯಾವುದರಲ್ಲಿ ಆಸಕ್ತಿ ಇದೆಯೋ ಮತ್ತದು ಜಗತ್ತಿಗೆ ಉಪಕಾರಿ ಎನ್ನಿಸುತ್ತದೆಯೋ ಅಂಥ ಚಟುವಟಿಕೆಗಳಲ್ಲಿ ತೀವ್ರವಾಗಿ ತೊಡಗಿಕೊಳ್ಳುತ್ತಾ ಹೋದಾಗ ಅದು ದಾಖಲೆಯಾಗಿ ಮಾರ್ಪಾಡಾಗುವ ಸಾಧ್ಯತೆ ಇರುತ್ತದೆ. 2021ರಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆಂಟೋಯಿನ್ ಮೋಸೆಸ್ ಎಂಬ 23 ವರ್ಷದ ಮ್ಯಾರಥಾನರ್ 24 ಗಂಟೆಗಳಲ್ಲಿ 23,060 ಸಸಿಗಳನ್ನು ನೆಟ್ಟು ವಿಶ್ವದಾಖಲೆ ನಿರ್ಮಿಸಿದ್ದಾರೆ.
WOW!
A 23-year-old tree planter from Quebec ?? set a new world record by planting 23,060 trees in 24 hours. ಇದನ್ನೂ ಓದಿAntoine Moses says he can plant 16 trees per minute, or one every 3.75 seconds..
? IG: antoine_moses
— Erik Solheim (@ErikSolheim) November 9, 2022
ನಾರ್ವೆಯ ಹವಾಮಾನ ಮತ್ತು ಪರಿಸರ ಇಲಾಖೆಯ ಮಾಜಿ ಸಚಿವ ಎರಿಕ್ ಸೋಲ್ಹೇಮ್ ಈ ವಿಡಿಯೋ ಹಂಚಿಕೊಂಡಿದ್ದಾರೆ. 15 ಸೆಕೆಂಡುಗಳ ಈ ವಿಡಿಯೋ ಯಾರನ್ನೂ ಯೋಚಿಸುವಂತೆ ಮಾಡುತ್ತದೆ. ‘ಅದ್ಭುತ! ಈ ವ್ಯಕ್ತಿಯ ಕಾರ್ಯ. ಒಂದು ನಿಮಿಷಕ್ಕೆ 16 ಸಸಿಗಳನ್ನು ಈತ ನೆಟ್ಟಿದ್ದಾನೆ. ಪ್ರತೀ ಸಸಿಗೆ ಈತ ತೆಗೆದುಕೊಂಡ ಸಮಯ 3.75 ಸೆಕೆಂಡುಗಳು’ ಎಂದು ನೋಟ್ ಬರೆಯಲಾಗಿದೆ.
ಕೆನಡಾದ ಈ ಮ್ಯಾರಥಾನರ್, ಹವಾಮಾನ ವೈಪರೀತ್ಯಗಳ ಪರಿಣಾಮವನ್ನು ತಗ್ಗಿಸುವ ಪ್ರಯತ್ನವನ್ನು ಈ ಮೂಲಕ ಮಾಡಿದ್ದಾನೆ. ಕೆನಡಾದ ಕಾಡು ಮತ್ತೆ ನಳನಳಿಸುವಂತಾಗಬೇಕು ಎನ್ನುವ ಆಸೆ ಇವನದು.
ನೆಟ್ಟಿಗರು ಇವನ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅನೇಕರು ಪ್ರಭಾವಿತಗೊಂಡು ತಾವೂ ಈ ಚಟುವಟಿಕೆಯನ್ನು ಅಳವಡಿಸಿಕೊಳ್ಳುವುದಾಗಿ ಹೇಳಿದ್ದಾರೆ. ಈ ವಿಡಿಯೋ ಅನ್ನು 1.7 ಮಿಲಿಯನ್ ಜನರು ನೋಡಿದ್ದಾರೆ. 2,000ಕ್ಕಿಂತಲೂ ಹೆಚ್ಚು ಜನರು ಪ್ರತಿಕ್ರಿಯಸಿದ್ದಾರೆ. ನಿಮ್ಮ ಪ್ರಯತ್ನ ಅದ್ಭುತ ಮತ್ತು ಸ್ತುತ್ಯಾರ್ಹ. ಮುಂದಿನ ದಿನಗಳಲ್ಲಿ ನಮಗೆ ಇನ್ನೂ ಹೆಚ್ಚಿನ ಮರಗಳ ಅವಶ್ಯಕತೆ ಇರುತ್ತದೆ ಎಂದಿದ್ದಾರೆ.
ಹವಾಮಾನದ ಏರುಪೇರಿನಿಂದ ಉಂಟಾಗುವ ಸಮಸ್ಯೆಗಳಿಗೆ ಇದು ಸೂಕ್ತ ಮಾರ್ಗ. ವಿಶ್ವ ಶೃಂಗಸಭೆಗಳಲ್ಲಿ ಮಾಡುವ ಭಾಷಣಗಳಿಂದ ಏನೂ ಪ್ರಯೋಜನವಿಲ್ಲ. ಜನರನ್ನು ಇಂಥ ಚಟುವಟಿಕೆಗಳಿಗೆ ಪ್ರೇರೇಪಿಸಬೇಕು ಎಂದಿದ್ದಾರೆ ಇನ್ನೂ ಒಬ್ಬರು.
ಇದನ್ನು ನೋಡಲು ಓದಲು ಅದ್ಭುತವಾಗಿದೆ. ಆದರೆ ಹೀಗೆ ಬೀಜಗಳನ್ನು ನೆಟ್ಟ ನಂತರ ಎಷ್ಟು ಸಸಿಗಳು ಬದುಕುಳಿಯುತ್ತವೆ ಎಂಬುದನ್ನು ನಿಗಾವಹಿಸಬೇಕು ಎಂದು ಮತ್ತೊಬ್ಬರು ಹೇಳಿದ್ಧಾರೆ.
ನಿಮಗೇನು ಅನ್ನಿಸುತ್ತಿದೆ ಈ ವಿಡಿಯೋ ನೋಡಿದ ನಂತರ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:20 pm, Fri, 11 November 22