ಚುನಾವಣಾ ಸಮಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು ನಡುವೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ 30 ಮೇಕೆಗಳು ಪತ್ತೆಯಾಗಿವೆ. ಅಕ್ರಮವಾಗಿ ಮೇಕೆ ಸಾಗಾಟ ನಡೆಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು,ಈ ಘಟನೆ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ. ಮಾರುತಿ ಸುಜುಕಿ ಸ್ವಿಫ್ಟ್ ಕಾರಿನೊಳಗೆ ಮೇಕೆಗಳು ಮತ್ತು ಕುರಿಗಳನ್ನು ತುಂಬಿಸಲಾಗಿತ್ತು. ಕಾರಿನೊಳಗೆ ಮೇಕೆ, ಕುರಿಗಳನ್ನು ತುಂಬಿ ಬಚ್ಚಿಟ್ಟಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ಲಭಿಸಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೇಕೆ, ಕುರಿಗಳನ್ನು ಕಾರಿನಿಂದ ರಕ್ಷಿಸಿದ್ದಾರೆ.
ವರದಿಗಳ ಪ್ರಕಾರ, ಪೊಲೀಸರು ಪಿಸಿಆರ್ ಕರೆಯನ್ನು ಸ್ವೀಕರಿಸಿದರು, ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಬೂದು ಬಣ್ಣದ ಸ್ವಿಫ್ಟ್ ಕಾರಿನೊಳಗೆ ಹೆಚ್ಚಿನ ಸಂಖ್ಯೆಯ ಮೇಕೆಗಳನ್ನು ಇರಿಸಲಾಗಿದೆ ಎಂದು ಮಾಹಿತಿ ಸಿಕ್ಕಿತ್ತು. ನಂತರ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ: ಕೆಸರಿನಲ್ಲಿ ಸಿಲುಕಿಕೊಂಡು ಒದ್ದಾಡಿದ ಪುಟ್ಟ ಆನೆ, ಇವರ ಮಾನವೀಯತೆಗೆ ಒಂದು ಸಲಾಂ
ಪೊಲೀಸರು ಎಲ್ಲಾ ಮೇಕೆಗಳು ಮತ್ತು ಕಾರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಪ್ರಾಣಿಗಳನ್ನು ಕಾರಿನೊಂದಿಗೆ ಡಿಎಸ್‌ಪಿಸಿಎ, ಟಿಸ್ ಹಜಾರಿಯಲ್ಲಿ ಠೇವಣಿ ಮಾಡಿದ್ದಾರೆ ಮತ್ತು ಈ ವಿಷಯದ ಕುರಿತು ಮುಂದಿನ ಅಗತ್ಯ ಕ್ರಮವನ್ನು ಪ್ರಾರಂಭಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ