ಭೋಪಾಲ್: ಮಧ್ಯಪ್ರದೇಶದ (Madhya Pradesh) ಸಿಂಗ್ರೌಲಿ ಜಿಲ್ಲೆಯಲ್ಲಿ 6 ವರ್ಷದ ಬಾಲಕ ತನ್ನ ರೋಗಪೀಡಿತ ತಂದೆಯನ್ನು ಮರದಿಂದ ಮಾಡಿದ ತಳ್ಳುಗಾಡಿಯಲ್ಲಿ ತಳ್ಳಿಕೊಂಡು ಆಸ್ಪತ್ರೆಗೆ ಸಾಗಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಅಪ್ಪನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿರುವ ಬಾಲಕನ ಹೃದಯ ವಿದ್ರಾವಕ ವಿಡಿಯೋವನ್ನು ಮಧ್ಯಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ.
ಶನಿವಾರ ಕೆಲವು ಸ್ಥಳೀಯರು ಬಾಲಕ ತನ್ನ ತಾಯಿಯೊಂದಿಗೆ ಅಪ್ಪನನ್ನು ಮಲಗಿಸಿದ ಮರದ ಗಾಡಿಯನ್ನು ತಳ್ಳುತ್ತಿರುವುದನ್ನು ಗಮನಿಸಿ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಇದಾದ ನಂತರ ಈ ವಿಷಯ ಬಯಲಿಗೆ ಬಂದಿದೆ. ಸಿಂಗ್ರೌಲಿ ಜಿಲ್ಲೆಯ ಬಲಿಯಾರಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಆ ಬಾಲಕ ಹಾಗೂ ಆತನ ತಾಯಿ 1 ಗಂಟೆಗೂ ಹೆಚ್ಚು ಕಾಲ ಆ್ಯಂಬುಲೆನ್ಸ್‌ಗಾಗಿ ಕಾದಿದ್ದರು. ಆದರೆ ಆ್ಯಂಬುಲೆನ್ಸ್ ಬರಲು ತಡವಾದ ಕಾರಣ ಆ ಬಾಲಕ ತನ್ನ ತಂದೆಯನ್ನು ಮರದ ಗಾಡಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದ. ಆತನಿಗೆ ಆತನ ತಾಯಿಯೂ ಸಹಾಯ ಮಾಡಿದಳು.
ಇದನ್ನೂ ಓದಿ: ಮಧ್ಯಪ್ರದೇಶ: ಗರ್ಭಿಣಿ ಪತ್ನಿಯನ್ನು ತಳ್ಳುವ ಗಾಡಿಯಲ್ಲಿರಿಸಿ ಆಸ್ಪತ್ರೆಗೆ ಸಾಗಿಸಿದ ಪತಿ, ವಿಡಿಯೊ ವೈರಲ್
ವೈರಲ್ ಆಗಿರುವ ವಿಡಿಯೋದಲ್ಲಿ ಟಿ-ಶರ್ಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಧರಿಸಿರುವ 6 ವರ್ಷದ ಬಾಲಕ 3 ಕಿಲೋಮೀಟರ್‌ಗಳಷ್ಟು ದೂರ ತಳ್ಳಿಕೊಂಡು ಹೋಗಿರುವುದನ್ನು ಕಾಣಬಹುದು. ಆ ಗಾಡಿಯ ಇನ್ನೊಂದು ತುದಿಯನ್ನು ಆತನ ತಾಯಿ ತಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
शायद मध्य प्रदेश की एंबुलेंस गरीबों के लिए नहीं है,
इसलिए मरीज़ को ठेले पर लिटाकर अस्पताल ले जाया जा रहा है!!वीडियो मे मरीज़ की पत्नी और बेटे ठेले को धक्का लगाकर ले जा रहे है!#MadhyaPradesh #सिंगरौलीhttps://t.co/7uIlBCDFZq pic.twitter.com/VD6N5nSUow
— Sadaf Afreen صدف (@s_afreen7) February 11, 2023
ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ, ಸಿಂಗ್ರೌಲಿ ಜಿಲ್ಲಾಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಶನಿವಾರ ಸಂಜೆಯ ನಂತರ ಈ ವಿಷಯದ ಬಗ್ಗೆ ತನಿಖೆಗೆ ಆದೇಶಿಸಿದೆ.