ಮಧ್ಯಪ್ರದೇಶ: ಗರ್ಭಿಣಿ ಪತ್ನಿಯನ್ನು ತಳ್ಳುವ ಗಾಡಿಯಲ್ಲಿರಿಸಿ ಆಸ್ಪತ್ರೆಗೆ ಸಾಗಿಸಿದ ಪತಿ, ವಿಡಿಯೊ ವೈರಲ್

ಮಂಗಳವಾರ ದಾಮೋಹ್ ಜಿಲ್ಲಾ ಕೇಂದ್ರದಿಂದ 60 ಕಿಮೀ ದೂರದಲ್ಲಿರುವ ರಾಣೆಹ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಹಿರ್ವಾಲ್ ತನ್ನ ಪತ್ನಿಯನ್ನು ತಳ್ಳುವ ಬಂಡಿಯಲ್ಲಿ ಕರೆದುಕೊಂಡು ಹೋಗುತ್ತಿರುವ ವಿಡಿಯೊ...

ಮಧ್ಯಪ್ರದೇಶ: ಗರ್ಭಿಣಿ ಪತ್ನಿಯನ್ನು ತಳ್ಳುವ ಗಾಡಿಯಲ್ಲಿರಿಸಿ ಆಸ್ಪತ್ರೆಗೆ ಸಾಗಿಸಿದ ಪತಿ, ವಿಡಿಯೊ ವೈರಲ್
ತಳ್ಳು ಗಾಡಿಯಲ್ಲಿ ಗರ್ಭಿಣಿ ಪತ್ನಿಯನ್ನು ಕರೆದೊಯ್ದ ಪತಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 31, 2022 | 2:11 PM

ದಾಮೋಹ್: ಆಂಬ್ಯುಲೆನ್ಸ್ ಇಲ್ಲದಿರುವ ಕಾರಣ ತನ್ನ ಗರ್ಭಿಣಿ ಪತ್ನಿಯನ್ನು ಪತಿ ತಳ್ಳುವ ಗಾಡಿಯಲ್ಲಿರಿಸಿ ಆಸ್ಪತ್ರೆಗೆ ಸಾಗಿಸುತ್ತಿರುವ ವಿಡಿಯೊ ವೈರಲ್ ಆದ ನಂತರ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ. ಮಧ್ಯಪ್ರದೇಶದ (Madhya Pradesh) ದಾಮೋಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಒಂದು ಕಿಮೀ ಪ್ರಯಾಣದ ನಂತರ ಕೈಲಾಶ್ ಅಹಿರ್ವಾಲ್ ಮತ್ತು ಅವರ ಪತ್ನಿ ಸ್ಥಳೀಯ ಸರ್ಕಾರ ನಡೆಸುವ ಆರೋಗ್ಯ ಕೇಂದ್ರಕ್ಕೆ ತಲುಪಿದಾಗ ಅಲ್ಲಿ ವೈದ್ಯರು ಅಥವಾ ನರ್ಸ್ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಮಂಗಳವಾರ ದಾಮೋಹ್ ಜಿಲ್ಲಾ ಕೇಂದ್ರದಿಂದ 60 ಕಿಮೀ ದೂರದಲ್ಲಿರುವ ರಾಣೆಹ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಹಿರ್ವಾಲ್ ತನ್ನ ಪತ್ನಿಯನ್ನು ತಳ್ಳುವ ಬಂಡಿಯಲ್ಲಿ ಕರೆದುಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಟ್ಟಾ ಬ್ಲಾಕ್‌ ಮೆಡಿಕಲ್‌ ಆಫೀಸರ್‌ ಆರ್‌ಪಿ ಕೋರಿ ಅವರು ವಿಡಿಯೋವನ್ನು ನೋಡಿದ್ದು, ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಏಕೆ ನೀಡಲಿಲ್ಲ ಎಂದು ಸಂಬಂಧಿಸಿದ ನೌಕರರಿಗೆ ನೋಟಿಸ್ ನೀಡಲಾಗುವುದು ಎಂದು ಅವರು ಹೇಳಿದರು.

ಮಂಗಳವಾರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡ ನಂತರ 108 ಸರ್ಕಾರಿ ಆಂಬ್ಯುಲೆನ್ಸ್ ಸೇವೆಗೆ ಕರೆ ಮಾಡಿದೆ.ಆದರೆ ಎರಡು ಗಂಟೆಗಳ ಕಾಲ ಯಾವುದೇ ಆಂಬ್ಯುಲೆನ್ಸ್ ಬರಲಿಲ್ಲ. ನಂತರ ಆಕೆಯನ್ನು ತಳ್ಳುವ ಗಾಡಿಯಲ್ಲಿ ಕೂರಿಸಿ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಾಗ ಅಲ್ಲಿ ಯಾವುದೇ ನರ್ಸ್ ಅಥವಾ ವೈದ್ಯರು ಇರಲಿಲ್ಲ.

ನಂತರ ಆಕೆಯನ್ನು ಸರ್ಕಾರಿ ಆಂಬ್ಯುಲೆನ್ಸ್ ಮೂಲಕ ಹಟ್ಟಾಗೆ ಸ್ಥಳಾಂತರಿಸಲಾಯಿತು, ಆದರೆ ಅಲ್ಲಿ ಸರಿಯಾದ ಚಿಕಿತ್ಸೆ ಸಿಗದ ನಂತರ, ಆಕೆಯನ್ನು ದಾಮೋಹ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿಆಕೆ  ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಅಹಿರ್ವಾಲ್ ಹೇಳಿದ್ದಾರೆ.

Published On - 1:41 pm, Wed, 31 August 22