Viral Video: ಅಪ್ಪನ ಸಾವಿನ ಬಳಿಕ ಜೊಮ್ಯಾಟೋ ಡೆಲಿವರಿ ಬಾಯ್ ಆದ 7 ವರ್ಷದ ಬಾಲಕ; ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Aug 05, 2022 | 12:02 PM

7 ವರ್ಷದ ಹುಡುಗ ತನ್ನ ತಂದೆ ಅಪಘಾತಕ್ಕೆ ಒಳಗಾದ ನಂತರ ಜೊಮ್ಯಾಟೋ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡಬೇಕಾಯಿತು. ಈ ಹುಡುಗ ಬೆಳಿಗ್ಗೆ ತನ್ನ ಶಾಲೆಗೆ ಹೋಗಿ, ಸಂಜೆಯ ನಂತರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾನೆ.

Viral Video: ಅಪ್ಪನ ಸಾವಿನ ಬಳಿಕ ಜೊಮ್ಯಾಟೋ ಡೆಲಿವರಿ ಬಾಯ್ ಆದ 7 ವರ್ಷದ ಬಾಲಕ; ವಿಡಿಯೋ ವೈರಲ್
ಜೊಮ್ಯಾಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಬಾಲಕ
Image Credit source: NDTV
Follow us on

ಕೆಲವೊಮ್ಮೆ ಇದ್ದಕ್ಕಿದ್ದಂತೆ ಎದುರಾಗುವ ಅನಿವಾರ್ಯತೆಗಳು ನಮ್ಮಿಂದ ಏನೇನೋ ಕೆಲಸಗಳನ್ನು ಮಾಡಿಸುತ್ತವೆ. ಪ್ರೀತಿಯಿಂದ ಮಗ, ಹೆಂಡತಿಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ್ದ. ಅಪ್ಪನ ಸಾವಿನಿಂದ ಕಂಗೆಟ್ಟಿದ್ದ 7 ವರ್ಷದ ಪುಟ್ಟ ಹುಡುಗನಿಗೆ ಮನೆಯ ಜವಾಬ್ದಾರಿ ಹೊರಬೇಕಾದ ಅನಿವಾರ್ಯತೆ ಎದುರಾಗಿತ್ತು. ಹೀಗಾಗಿ, ಈ ಬಾಲಕ ಜೊಮ್ಯಾಟೋ ಡೆಲಿವರಿ ಬಾಯ್ (Zomato Delivery Boy) ಆಗಿ ಕೆಲಸ ಮಾಡುತ್ತಿದ್ದಾನೆ.

7 ವರ್ಷದ ಬಾಲಕನೊಬ್ಬ ಚಾಕೊಲೇಟ್ ಬಾಕ್ಸ್ ಹಿಡಿದಿರುವ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಟ್ವಿಟರ್ ಬಳಕೆದಾರರಾದ ರಾಹುಲ್ ಮಿತ್ತಲ್ ಅವರು “ಈ 7 ವರ್ಷದ ಹುಡುಗ ಅಪಘಾತದಲ್ಲಿ ಸಾವನ್ನಪ್ಪಿದ ತನ್ನ ತಂದೆಯ ಕೆಲಸವನ್ನು ಮಾಡುತ್ತಿದ್ದಾನೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

7 ವರ್ಷದ ಹುಡುಗ ತನ್ನ ತಂದೆ ಅಪಘಾತಕ್ಕೆ ಒಳಗಾದ ನಂತರ ಜೊಮ್ಯಾಟೋ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡಬೇಕಾಯಿತು. ಈ ಹುಡುಗ ಈಗ ಸಂಜೆ 6ರ ನಂತರ ಗ್ರಾಹಕರಿಗೆ ಆಹಾರವನ್ನು ತಲುಪಿಸುವ ಕೆಲಸ ಮಾಡುತ್ತಾನೆ. ಬೆಳಿಗ್ಗೆ ತನ್ನ ಶಾಲೆಗೆ ಹೋಗಿ, ಸಂಜೆಯ ನಂತರ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾನೆ.

ಇದನ್ನೂ ಓದಿ: ಬೆಂಗಳೂರಲ್ಲಿ ಜೊಮ್ಯಾಟೋ ಡೆಲಿವರಿ ಹುಡುಗರು ಮತ್ತು ಕೇರಳ ಮೂಲದ ಹೋಟೆಲ್ ಸಿಬ್ಬಂದಿ ನಡುವೆ ರಂಪಾಟ

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಗ್ರಾಹಕ ಮತ್ತು ಹುಡುಗನ ನಡುವಿನ ಸಂಭಾಷಣೆ ರೆಕಾರ್ಡ್​ ಆಗಿದೆ. 7 ವರ್ಷದ ಬಾಲಕ ತನ್ನ ತಂದೆಯ ಫೋನ್ ನಂಬರ್​ಗೆ ಬುಕಿಂಗ್‌ಗಳು ಬರುತ್ತವೆ. ಅಪ್ಪನ ಸಾವಿನ ನಂತರ ಆ ಬಾಲಕ ತನ್ನ ತಂದೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಾನೆ ಎಂದು ಆತ ಹೇಳುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಜೊಮ್ಯಾಟೋ ಸಿಬ್ಬಂದಿ ಆ ಬಾಲಕನ ವಯಸ್ಸು 14 ವರ್ಷ ಎಂದು ಹೇಳಿದೆ. ಈ ವಿಡಿಯೋ 40,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಸುಮಾರು 30 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಬೆಳಿಗ್ಗೆ ಶಾಲೆ ಮುಗಿಸಿದ ನಂತರ ಆಹಾರವನ್ನು ತಲುಪಿಸಲು ಸಂಜೆ 6ರಿಂದ 11 ಗಂಟೆಯವರೆಗೆ ಮನೆ-ಮನೆಗೆ ಸೈಕಲ್ ಓಡಿಸುತ್ತೇನೆ ಎಂದು ಆ ಬಾಲಕ ಹೇಳಿದ್ದಾನೆ. ಈ ವಿಡಿಯೋ ನೋಡಿದ ಕೆಲವು ಬಳಕೆದಾರರು ಭಾವುಕರಾಗಿ ಆತನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಜೊಮ್ಯಾಟೋ, ಸ್ವಿಗ್ಗಿಯಲ್ಲಿ ತಾಂತ್ರಿಕ ದೋಷ; ಆ್ಯಪ್​ನಲ್ಲಿ ಫುಡ್ ಆರ್ಡರ್ ಮಾಡಲಾಗದೆ ಗ್ರಾಹಕರ ಪರದಾಟ

ಜೊಮ್ಯಾಟೋ ಫ್ಯೂಚರ್ ಫೌಂಡೇಶನ್ ಮೂಲಕ ನಾವು ಈ ಬಾಲಕನ ಶಿಕ್ಷಣವನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ. ತಂದೆಯ ಅಪಘಾತದ ನಂತರ ಆತ ಜೊಮ್ಯಾಟೊದಲ್ಲಿ ಕೆಲಸ ಮಾಡುತ್ತಿದ್ದಾನೆ. ನಾವು ಆತನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಿದ್ದೇವೆ ಎಂದು ಜೊಮ್ಯಾಟೋ ಹೇಳಿದೆ.

Published On - 12:02 pm, Fri, 5 August 22