Sign In

By signing in or creating an account, you agree with Associated Broadcasting Company's Terms & Conditions and Privacy Policy.

Trending : ಬಕ್ಸಾ ಕಾಡಿನ ಕ್ಯಾಮೆರಾದಲ್ಲಿ ಸೆರೆಬಿದ್ದ ಕ್ಲೌಡೆಡ್​ ಲೆಪರ್ಡ್​

Clouded Leopard : ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯು ಕ್ಲೌಡೆಡ್ ಲೆಪರ್ಡ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಇದು ಅತ್ಯಂತ ಪುರಾತನ ದೊಡ್ಡಬೆಕ್ಕಿನ ವಂಶಕ್ಕೆ ಸೇರಿದ ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದೆ.    

Trending : ಬಕ್ಸಾ ಕಾಡಿನ ಕ್ಯಾಮೆರಾದಲ್ಲಿ ಸೆರೆಬಿದ್ದ ಕ್ಲೌಡೆಡ್​ ಲೆಪರ್ಡ್​
ಬಕ್ಸಾ ಅರಣ್ಯದಲ್ಲಿ ಪತ್ತೆಯಾದ ಕ್ಲೌಡೆಡ್​ ಲೆಪರ್ಡ್
Follow us
TV9 Web
| Updated By: ಶ್ರೀದೇವಿ ಕಳಸದ

Updated on: Aug 05, 2022 | 2:13 PM

Trending news : ಎಷ್ಟೊಂದು ವೈವಿಧ್ಯಮಯ ಜೀವಜಗತ್ತು ನಮ್ಮನ್ನು ಸುತ್ತುವರಿದಿದೆ. ದಿನಕ್ಕೊಂದಾದರೂ ಅಪರೂಪದ ಜೀವಿಗಳು ಕಣ್ಣಿಗೆ ಬೀಳುತ್ತಲೇ ಇರುತ್ತವೆ. ನಿನ್ನೆಯಷ್ಟೇ ಸೀ ಕುಕುಂಬರ್​ ನ ವಿಡಿಯೋ ನೋಡಿದಿರಿ. ಇಂದು ಪಶ್ಚಿಮ ಬಂಗಾಳದ ಬಕ್ಸಾ ಹುಲಿ ಸಂರಕ್ಷಣಾ ಅರಣ್ಯದ ಕ್ಯಾಮೆರಾದಲ್ಲಿ ಸೆರೆಬಿದ್ದ ಕ್ಲೌಡೆಡ್​ ಲೆಪರ್ಡ್ (Clouded Leopard) ಅನ್ನು ನೋಡಿ. ಆಗಸ್ಟ್ 4, ಇಂಟರ್ನ್ಯಾಷನಲ್ ಕ್ಲೌಡ್​ ಲೆಪರ್ಡ್​ ಡೇ ನಿಮಿತ್ತ ತನ್ನ ಫೇಸ್‌ಬುಕ್ ಪುಟದಲ್ಲಿ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯು ಈ ಫೋಟೋ ಪೋಸ್ಟ್ ಮಾಡಿದೆ. ಇವುಗಳ ಸಂತತಿ ಬಹಳ ಕ್ಷೀಣಿಸಿದ್ದು ಸದ್ಯ 10,000 ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ವಾಸಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಆದ್ದರಿಂದ IUCN ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಈ ಪ್ರಾಣಿಯನ್ನೂ ಸೇರಿಸಿದೆ.

ಕ್ಲೌಡೆಡ್ ಲೆಪರ್ಡ್ (ನಿಯೋಫೆಲಿಸ್ ನೆಬುಲೋಸಾ) ಭಾರತದಲ್ಲಿರುವ ದೊಡ್ಡ ಬೆಕ್ಕಿನ ಜಾತಿ. ದಟ್ಟಕಾಡುಗಳಲ್ಲಿ ಮಾತ್ರ ಇವುಗಳನ್ನು ಕಾಣಬಹುದಾಗಿದೆ.  ಬಕ್ಸಾ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಈ ಪ್ರಾಣಿಯ ಅನೇಕ ಚಿತ್ರಗಳು ಸೆರೆಯಾಗಿವೆ. ಅವುಗಳ ಪೈಕಿ ಸ್ಪಷ್ಟವಾದ ಚಿತ್ರವನ್ನು ಇಲಾಖೆಯು ಈಗ ಹಂಚಿಕೊಂಡಿದೆ.

20 ನೇ ಶತಮಾನದ ದ್ವಿತೀಯಾರ್ಧದಲ್ಲಿ ಬೇಟೆ ಮತ್ತು ಅರಣ್ಯನಾಶದ ಪರಿಣಾಮದಿಂದಾಗಿ ಇವುಗಳ ಸಂಖ್ಯೆ ಕುಸಿತ ಕಂಡಿದೆ. ನಿಶಾಚರಿಗಳಾದ ಇವು ಮರಗಳಲ್ಲಿ ವಾಸಿಸುತ್ತವೆ ಮತ್ತು ಸಣ್ಣ ಸಸ್ತನಿಗಳು ಇವುಗಳ ಆಹಾರ. ದೊಡ್ಡಗಾತ್ರದ, ಆಕರ್ಷಕವಾಗಿರುವ ಈ ಕ್ಲೌಡೆಡ್ ಲೆಪರ್ಡ್​ನ ಫೋಟೋವನ್ನು ಅನೇಕರು ಸಾಮಾಜಿಕ ತಾಣಗಳಲ್ಲಿ ಮೆಚ್ಚಿ ಹಂಚಿಕೊಂಡಿದ್ದಾರೆ. ಐಎಫ್​ಎಸ್​ ಅಧಿಕಾರಿ ಪರ್ವೀನ್ ಕಸ್ವಾನ್ ಅವರೂ ಕೂಡ. ಅನೇಕರು ಈ ಅಪರೂಪದ ಪ್ರಾಣಿಯನ್ನು ನೋಡಿ ಅದ್ಭುತ ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Image
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Image
Trending : ಐಶ್ವರ್ಯ ಆಮ್​, ಸಚಿನ್ ಆಮ್​ ನಂತರ ಸುಷ್ಮಿತಾ ಆಮ್​ ಮತ್ತು ಅಮಿತ್ ಷಾ ಆಮ್
Image
Trending : ಕದ್ದು ತಿನ್ನೋ ರುಚಿ ನಿಮಗಿಂತ ಮೊದಲು ನಮಗೇ ಗೊತ್ತು!
Image
Trending: ಮದ್ಯ ಸೇವನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅಗ್ರಸ್ಥಾನ, ಜಿಲ್ಲೆಯಲ್ಲಿ ಮದ್ಯದ ಅಂಗಡಿ ಸಂಖ್ಯೆಯಲ್ಲೂ ಹೆಚ್ಚಳ

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, ಬಕ್ಸಾ ಹುಲಿ ಸಂರಕ್ಷಿತ ಪ್ರದೇಶವು 1983ರಲ್ಲಿ ರೂಪುಗೊಂಡಿದೆ. 1992 ರಲ್ಲಿ ಇದಕ್ಕೆ ರಾಷ್ಟ್ರೀಯ ಉದ್ಯಾನವನದ ಸ್ಥಾನಮಾನ ಒದಗಿತು. 759 ಚದರ ಕಿ.ಮೀ ಪ್ರದೇಶವು ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಬಕ್ಸಾ ಎನ್ನುವುದು ಅಲ್ಲಿರುವ ಕೋಟೆಯ ಹೆಸರು. ಅದೇ ಹೆಸರಿನಿಂದಲೇ ಈ ಅರಣ್ಯಪ್ರದೇಶಕ್ಕೆ ಹೆಸರಿಡಲಾಗಿದೆ. ಅನೇಕ ಜೀವವೈವಿಧ್ಯವು ಇಲ್ಲಿ ಸಮೃದ್ಧವಾಗಿದೆ. ಅಪರೂಪದ ಆರ್ಕಿಡ್, ಔಷಧೀಯ ಸಸ್ಯಗಳಿವೆ. ಮನುಷ್ಯರು ಪ್ರವೇಶಿಸಲು ಸಾಧ್ಯವಾಗದಂಥ ಭೂಪ್ರದೇಶಗಳು ಇಲ್ಲಿವೆ. ಹಾಗಾಗಿ ಸಿಂಚುಲಾ ಶ್ರೇಣಿಯ ಬಕ್ಸಾದ ಕೆಲ ಬೆಟ್ಟಗಳ ಕುರಿತು ಯಾವುದೇ ಸಂಶೋಧನೆ ಸಾಧ್ಯವಾಗಿಲ್ಲ. ಇಲ್ಲಿರುವ ವೈವಿಧ್ಯಮಯ ಜೀವಪರಿಸರ ವಿಶೇಷ ಗಮನ ಸೆಳೆಯುತ್ತದೆ. 230ಕ್ಕೂ ಹೆಚ್ಚು ಜಾತಿಯ ವೈವಿಧ್ಯಮಯ ಪ್ರಾಣಿಗಳು, 67 ಸಸ್ತನಿಗಳು, 36 ಸರೀಸೃಪಗಳು ಮತ್ತು ವಲಸೆ ಬಂದ ಅನೇಕ ಪಕ್ಷಿಗಳು, ಸ್ಥಳೀಯ ಜೀವವೈವಿಧ್ಯವು ಇಲ್ಲಿಯ ಅರಣ್ಯ ಶ್ರೀಮಂತಿಕೆಗೆ ಸಾಕ್ಷಿ.

ವನ್ಯಜಗತ್ತಿನ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್