Viral Video: ಯುವತಿಯರೂ ನಾಚುವಂತೆ ಡ್ಯಾನ್ಸ್ ಮಾಡುವ 78ರ ಅಜ್ಜಿಯ ವಿಡಿಯೋ ವೈರಲ್; ಈಕೆ ಈಗ ಟಿಕ್ ಟಾಕ್ ಸ್ಟಾರ್!

TikTok Videos: ನೇಪಾಳದ 78 ವರ್ಷದ ಕೃಷ್ಣಾಕುಮಾರಿ ತಿವಾರಿ ಎಂಬ ಈ ಅಜ್ಜಿ ಈಗ ಟಿಕ್ ಟಾಕ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇವರ ಟಿಕ್ ಟಾಕ್ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.

Viral Video: ಯುವತಿಯರೂ ನಾಚುವಂತೆ ಡ್ಯಾನ್ಸ್ ಮಾಡುವ 78ರ ಅಜ್ಜಿಯ ವಿಡಿಯೋ ವೈರಲ್; ಈಕೆ ಈಗ ಟಿಕ್ ಟಾಕ್ ಸ್ಟಾರ್!
ಟಿಕ್ ಟಾಕ್ ಮೂಲಕ ಫೇಮಸ್ ಆದ ಅಜ್ಜಿ
Updated By: ಸುಷ್ಮಾ ಚಕ್ರೆ

Updated on: Jul 29, 2021 | 8:46 PM

ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಕೆಲವೊಂದು ವಿಡಿಯೋಗಳನ್ನು ನೋಡಿದಾಗ ನಾವು ನಗುತ್ತೇವೆ, ಇನ್ನು ಕೆಲವನ್ನು ಕಂಡಾಗ ಎಮೋಷನಲ್ ಆಗುತ್ತೇವೆ. 20 ವರ್ಷದ ಯುವತಿಯರೂ ನಾಚುವಂತೆ ಡ್ಯಾನ್ಸ್ ಮಾಡಿರುವ ಈ 78 ವರ್ಷದ ಅಜ್ಜಿಯನ್ನು ಕಂಡಾಗ ನೀವು ಅಚ್ಚರಿ ಪಡದಿರಲು ಸಾಧ್ಯವೇ ಇಲ್ಲ. ರಾಮಾ.. ಕೃಷ್ಣಾ… ಎಂದು ಜಪ ಮಾಡಿಕೊಂಡಿರಬೇಕಾದ ಈ ವಯಸ್ಸಿನಲ್ಲಿ ಈ ಅಜ್ಜಿ ಗುಡ್ಡದ ಮೇಲೆ ನಿಂತು ಕೃಷ್ಣನ ಹಾಡಿಗೆ ಮೈಮರೆತು ಡ್ಯಾನ್ಸ್ ಮಾಡಿದ್ದಾರೆ. ಈಕೆಯ ಟಿಕ್ ಟಾಕ್ ವಿಡಿಯೋಗಳಿಗೆ ಸಾವಿರಾರು ಜನ ಅಭಿಮಾನಿಗಳಿದ್ದಾರೆ. 

ಆ ಅಜ್ಜಿಯ ಜೊತೆಗೆ ಆಕೆಯ ಮೊಮ್ಮಗನೂ ಡ್ಯಾನ್ಸ್ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಹಳ್ಳಿ ಸ್ಟೈಲ್​ನಲ್ಲಿ ಸೀರೆಯುಟ್ಟು, ಮೊಮ್ಮಗನ ಜೊತೆ ಸೊಂಟ ಬಳುಕಿಸುತ್ತಾ ಡ್ಯಾನ್ಸ್ ಮಾಡಿರುವ ಅಜ್ಜಿಯ ಉತ್ಸಾಹಕ್ಕೆ ಈ ವಿಡಿಯೋ ನೋಡಿದವರು ಅಬ್ಬಾ! ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

78 ವರ್ಷದ ಕೃಷ್ಣಾಕುಮಾರಿ ತಿವಾರಿ ಎಂಬ ಅಜ್ಜಿಯ ಡ್ಯಾನ್ಸ್ ನೋಡಿದವರು ಸಾಕಷ್ಟು ಮಂದಿ ಆಕೆಗೆ ಫಿದಾ ಆಗಿದ್ದಾರೆ. ಬಾಲ್ಯದಿಂದಲೂ ಡ್ಯಾನ್ಸ್ ಎಂದರೆ ಈ ಅಜ್ಜಿಗೆ ಬಹಳ ಇಷ್ಟವಂತೆ. ಆದರೆ, ಮನೆಯಲ್ಲಿದ್ದ ಮಡಿವಂತಿಕೆಗೆ ಹೆದರಿ ಆಕೆ ಎಲ್ಲೂ ಹೊರಗೆ ಡ್ಯಾನ್ಸ್ ಮಾಡುತ್ತಿರಲಿಲ್ಲವಂತೆ. ಈಗ ಮೊಮ್ಮಕ್ಕಳ ಒತ್ತಾಯಕ್ಕೆ ಆಕೆ ಕ್ಯಾಮೆರಾ ಮುಂದೆ ಮನಸೋಇಚ್ಛೆ ಡ್ಯಾನ್ಸ್ ಮಾಡಿದ್ದಾರೆ.

ನೇಪಾಳದ ಈ ಅಜ್ಜಿ ಈಗ ಟಿಕ್ ಟಾಕ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇವರ ಟಿಕ್ ಟಾಕ್ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ತನ್ನ ನೃತ್ಯವನ್ನು ನೋಡಿ ಬಹಳಷ್ಟು ಜನ ಹೊಗಳುವುದಕ್ಕೆ ಅಜ್ಜಿಗೂ ಬಹಳ ಖುಷಿಯಾಗುತ್ತಿದೆಯಂತೆ. ನೀವು ಇನ್ನೂ ಆಕೆಯ ವಿಡಿಯೋ ನೋಡಿಲ್ಲದಿದ್ದರೆ ಖಂಡಿತ ಮಿಸ್ ಮಾಡಿಕೊಳ್ಳಬೇಡಿ.

ಇದನ್ನೂ ಓದಿ: Viral Video: ಸೀರೆಯುಟ್ಟು ರೈಲಿನ ಕಿಟಕಿಯಲ್ಲೇ ಒಳನುಗ್ಗಿದ ಮಹಿಳೆ!; ಎಮರ್ಜೆನ್ಸಿ ಎಂಟ್ರಿಯ ವಿಡಿಯೋ ವೈರಲ್

Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!

(Viral Video: 78 Year Old Grandma Dancing Video Viral Krishna Kumari Daadi Became TikTok Star now)