Viral Video : ಕಹಿನ್ ಪ್ಯಾರ್ ನಾ ಹೋ ಜಾಯೆ ಹಾಡಿಗೆ ಧ್ವನಿಯಾದ 8 ವರ್ಷದ ಬಾಲಕಿ!
Viral Video : ಬಾಲಕಿಯೊಬ್ಬಳು ಇದೀಗ ತನ್ನ ಸುಮಧುರ ಕಂಠದಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ. IPS ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾನ ಎನ್ನುವುದು ಎಷ್ಟೊಂದು ಪ್ರಭಾವಿತ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ, ಇಡೀ ದೇಶದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ. ಹೌದು ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆದ ಛತ್ತೀಸ್‌ಗಢದ 10 ವರ್ಷದ ಬಾಲಕ ಸಹದೇವ್ ದಿರ್ಡೋ ನೆನಪಿದೆಯೇ? ಛತ್ತೀಸ್‌ಗಢವು ಸಹದೇವ್ ಅವರಂತಹ ಪ್ರತಿಭಾವಂತ ಸ್ಫೂರ್ತಿಯು ಈ 8 ವರ್ಷದ ಬಾಲಕಿಯ ಮೇಲೆ ಪ್ರಭಾವವನ್ನು ಬೀರಿದೆ ಎಂದು ಅನ್ನಿಸುತ್ತದೆ. ಹೌದು ಬಾಲಕಿಯೊಬ್ಬಳು ಇದೀಗ ತನ್ನ ಸುಮಧುರ ಕಂಠದಿಂದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದಾರೆ. IPS ಅಧಿಕಾರಿ ಅವನೀಶ್ ಶರಣ್ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮುರಿ ಮುರಾಮಿ ಎಂಬ ಪುಟ್ಟ ಹುಡುಗಿಯು ಹಿಂದೆ ಸಿನಿಮಾದ ಸೂಪರ್ ಹಿಟ್ ಹಾಡನ್ನು ಹಾಡಿದ್ದಾಳೆ. ಈಕೆ ಸಲ್ಮಾನ್ ಖಾನ್-ರಾಣಿ ಮುಖರ್ಜಿ ಅಭಿನಯದ ಚಲನಚಿತ್ರದ ಕಹಿನ್ ಪ್ಯಾರ್ ನಾ ಹೋ ಜಾಯೆ ಹಾಡನ್ನು ಹಾಡಿದ್ದಾರೆ.
ಮೂಲತಃ ಟ್ರೈಬಲ್ ಆರ್ಮಿ ಹೆಸರಿನ ಟ್ವಿಟರ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ, ಮುರಿ ದಂತೇವಾಡ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಳೆ. ಈ ವಿಡಿಯೋ 67,700 ವೀಕ್ಷಣೆಗಳು ಮತ್ತು ಪ್ರತಿಕ್ರಿಯೆಗಳನ್ನು ಗಳಿಸಿದೆ. ಜನಪ್ರಿಯ ಹಾಡಿನ ಮುರಿಯ ಸುಂದರ ನಿರೂಪಣೆಯನ್ನು ಜನರು ಇಷ್ಟಪಟ್ಟಿದ್ದಾರೆ. ಈಕೆಯ ಪ್ರತಿಭೆ ಮುಂದೊಂದು ದಿನ ಆಕೆಯನ್ನು ದೊಡ್ಡ ತಾರೆಯನ್ನಾಗಿ ಮಾಡುತ್ತದೆ ಎಂದು ಕೆಲವರು ಬರೆದುಕೊಂಡಿದ್ದಾರೆ.
What a lovely voice.❤️pic.twitter.com/MwcWeG15Ac
— Awanish Sharan (@AwanishSharan) April 2, 2022
ಕಹಿನ್ ಪ್ಯಾರ್ ನಾ ಹೋ ಜಾಯೆ ಹಾಡನ್ನು ಅಲ್ಕಾ ಯಾಗ್ನಿಕ್ ಮತ್ತು ಕುಮಾರ್ ಸಾನು ಹಾಡಿದ್ದಾರೆ. ಹಿಮೇಶ್ ರೇಶಮಿಯಾ ಅವರು ಸಂಯೋಜಿಸಿ ನಿರ್ದೇಶಿಸಿದ ಈ ಹಾಡು 90 ರ ದಶಕದಿಂದಲೂ ಸೂಪರ್‌ಹಿಟ್ ಆಗಿ ಮುಂದುವರೆದಿದೆ.