Viral Video: ಟೆಂಪೋದಲ್ಲಿ ಆನೆ ಸವಾರಿ; ವಿಡಿಯೋ ನೋಡಿ ಮಿಸ್ಟೇಕ್ ಕಂಡು ಹಿಡಿದ ನೆಟ್ಟಿಗರು

|

Updated on: Jan 18, 2024 | 1:10 PM

ಗಜರಾಜನನ್ನು ಹೊತ್ತು 80 ರಿಂದ 90 ರ ವೇಗದಲ್ಲಿ ಟೆಂಪೋ ಹೋಗುತ್ತಿರುವುದನ್ನು ಕಂಡು ಈ ವಿಡಿಯೋ ಅಸಲಿಯೋ ಅಥವಾ ನಕಲಿಯೋ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿದೆ.

Viral Video: ಟೆಂಪೋದಲ್ಲಿ ಆನೆ ಸವಾರಿ; ವಿಡಿಯೋ ನೋಡಿ ಮಿಸ್ಟೇಕ್ ಕಂಡು ಹಿಡಿದ ನೆಟ್ಟಿಗರು
Viral Video
Image Credit source: instagram
Follow us on

ಚಿಕ್ಕ ಟೆಂಪೋದಲ್ಲಿ ಗಜರಾಜನನ್ನು ಕರೆದುಕೊಂಡು ಹೋಗುತ್ತಿರುವ ವೀಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​​ ಆಗಿದೆ. ವಿಡಿಯೋದಲ್ಲಿ ಚಿಕ್ಕ ಟೆಂಪೋದ ಹಿಂಭಾಗದಲ್ಲಿ ಆನೆಯೊಂದು ನಿಂತಿರುವುದು ಕಂಡು ಬಂದಿದೆ. ಇದಲ್ಲದೇ 80 ರಿಂದ 90 ರ ವೇಗದಲ್ಲಿ ಟೆಂಪೋ ಹೋಗುತ್ತಿರುವುದು ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ವೈರಲ್ ವೀಡಿಯೊವನ್ನು @jani_saab_0288 ಎಂಬ ಇನ್ಸ್ಟಾಗ್ರಾಮ್​​​​​ ಹಂಚಿಕೊಳ್ಳಲಾಗಿದ್ದು, ಭಾರೀ ವೈರಲ್​​ ಆಗಿದೆ. ಜನವರಿ 8ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಇಲ್ಲಿಯವರೆಗೆ 145,382 ಲೈಕುಗಳನ್ನು ಪಡೆದುಕೊಂಡಿದೆ. ಗಜರಾಜನನ್ನು ಹೊತ್ತು 80 ರಿಂದ 90 ರ ವೇಗದಲ್ಲಿ ಟೆಂಪೋ ಹೋಗುತ್ತಿರುವುದನ್ನು ಕಂಡು ಈ ವಿಡಿಯೋ ಅಸಲಿಯೋ ಅಥವಾ ನಕಲಿಯೋ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿದೆ.

ಇದನ್ನೂ ಓದಿ: ಆಫ್ರಿಕಾದಲ್ಲಿ ಶ್ರೀರಾಮ ಘೋಷ; ಅಯೋಧ್ಯೆಗೆ ಭೇಟಿ ನೀಡಲು ಉತ್ಸುಕರಾದ ಕಿಲಿ ಪೌಲ್

ವಿಡಿಯೋ ಸಂಬಂಧಿಸಿದಂತೆ “ಇದು ಜೀವಂತ ಆನೆಯಲ್ಲ, ಆನೆಯ ಆಕಾರದಲ್ಲಿ ತಯಾರಿಸಲಾದ ಗೊಂಬೆ” ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ