ಚಿಕ್ಕಗಾತ್ರದ ಈ ವಿಮಾನ ಬ್ಯೂಸಿಯಾಗಿದ್ದ ಕ್ಯಾಲಿಫೋರ್ನಿಯಾದ ಹೆದ್ದಾರಿಯ ಮೇಲೆ ಅಪ್ಪಳಿಸಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 13, 2022 | 2:19 PM

ಕೊರೋನಾದ ಅಗ್ನಿಶಾಮಕ ಇಲಾಖೆಯು ಫೇಸ್ ಬುಕ್ ನಲ್ಲಿ ಮಾಡಿರುವ ಪೋಸ್ಟ್ ಪ್ರಕಾರ ವಿಮಾನದಲ್ಲಿದ್ದ ಇಬ್ಬರು ಪತನಗೊಂಡ ವಿಮಾನದ ಅವಶೇಷಗಳಿಂದ ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಯಾರಿಗೂ ಗಾಯವಾಗಿಲ್ಲ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ಚಿಕ್ಕಗಾತ್ರದ ಈ ವಿಮಾನ ಬ್ಯೂಸಿಯಾಗಿದ್ದ ಕ್ಯಾಲಿಫೋರ್ನಿಯಾದ ಹೆದ್ದಾರಿಯ ಮೇಲೆ ಅಪ್ಪಳಿಸಿತು!
ಪತನಗೊಂಡ ನಂತರ ಹೊತ್ತಿಯುರಿದ ವಿಮಾನ
Follow us on

ಚಿಕ್ಕ ಗಾತ್ರದ ವಿಮಾನವೊಂದು ಅಮೆರಿಕ ಕ್ಯಾಲಿಫೋರ್ನಿಯಾ (California) ನಗರದ ದಕ್ಷಿಣ ಭಾಗದಲ್ಲಿ ವಾಹನಗಳು ಸಂಚರಿಸುತ್ತಿರುವ ರಸ್ತೆಯ ಮೇಲೆ ಅಪ್ಪಳಿಸಿ ಹೊತ್ತಿಯುರಿದ ವಿಡಿಯೋವೊಂದು ಇಂಟರ್ನೆಟ್ ನಲ್ಲಿ ಗೋಚರಿಸಿದೆ. ಎಬಿಸಿ ನ್ಯೂಸ್ ಇನ್ಸ್ಡಾಗ್ರಾಮ್ ನಲ್ಲಿ ಶೇರ್ ಮಾಡಿರುವ ವಿಡಿಯೋ ಕ್ಲಿಪ್ ನಲ್ಲಿ ವಿಮಾನವು ಬ್ಯೂಸಿ ಹೆದ್ದಾರಿಯ (highway) ಮೇಲೆ ಪತನಗೊಳ್ಳುವುದು ಕಾಣಿಸುತ್ತದೆ. ಅಪ್ಪಳಿಸಿದ ಬಳಿಕ ಅದು ಬೆಂಕಿ ಹೊತ್ತಿಕೊಂಡು ಉರಿಯುವ ದೃಶ್ಯದ ಜೊತೆಗೆ ದಟ್ಟ ಹೊಗೆಯನ್ನು (smoke) ನೋಡಬಹುದು.

ಸದರಿ ಘಟನೆಯು ಎರಡು ದಿನಗಳ ಹಿಂದೆ ಕೊರೋನಾದ ಲಿಂಕನ್ ಅವೆನ್ಯೂ ಹತ್ತಿರ ಮಧ್ಯಾಹ್ನ ಸುಮಾರು 12.30ಕ್ಕೆ ಸಂಭವಿಸಿದೆ ಎಂದು ಎನ್ ಬಿಸಿ ವರದಿ ಮಾಡಿದೆ.

ಕೊರೋನಾದ ಅಗ್ನಿಶಾಮಕ ಇಲಾಖೆಯು ಫೇಸ್ ಬುಕ್ ನಲ್ಲಿ ಮಾಡಿರುವ ಪೋಸ್ಟ್ ಪ್ರಕಾರ ವಿಮಾನದಲ್ಲಿದ್ದ ಇಬ್ಬರು ಪತನಗೊಂಡ ವಿಮಾನದ ಅವಶೇಷಗಳಿಂದ ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಯಾರಿಗೂ ಗಾಯವಾಗಿಲ್ಲ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

‘ಇಂದು ಮಧ್ಯಾಹ್ನ, ಲಿಂಕನ್ ಮತ್ತು ಮೈನ್ ನಡುವೆ ಈಸ್ಟ್‌ಬೌಂಡ್ 91 ರಲ್ಲಿ ಸಣ್ಣ ವಿಮಾನವೊಂದು ಪತನಗೊಂಡ ಬಳಿಕ ಹೊತ್ತಿ ಉರಿಯಿತು. ಇಬ್ಬರು ಪ್ರಯಾಣಿಕರು ಅವಶೇಷಗಳಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಸಿ ಹೆಚ್ ಪಿ ಪ್ರಮುಖ ಪಾತ್ರ ನಿರ್ವಹಿಸಿದೆ. ಕರೋನಾ ಫೈರ್, ಕರೋನಾ ಪಿಡಿ ಮತ್ತು ಕ್ಯಾಲ್ಟ್ರಾನ್ಸ್ ಅದಕ್ಕೆ ನೆರವು ನೀಡುತ್ತಿವೆ. ಸದರಿ ಮಾರ್ಗವು ಭಾಗಶಃ ತೆರೆದಿರುತ್ತದೆ, ಅದರೆ ವಾಹನ ಸಂಚಾರ ಹಲವಾರು ಗಂಟೆಗಳ ಕಾಲ ಸಮಸ್ಯೆಗೀಡಾಗಲಿದೆ ಎಂದು ಫೇಸ್ ಬುಕ್ ಪೋಸ್ಟ್ ಹೇಳಿದೆ.

ಎನ್ ಬಿ ಸಿ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ವಿಮಾನದ ಪೈಲಟ್ ಆಂಡ್ರ್ಯೂ ಚೋ ವಿಮಾನವನ್ನು ಒಂದು ಚಿಕ್ಕ ಪ್ರಯಾಣಕ್ಕಾಗಿ ಹತ್ತಿರದ ಕೊರೋನಾ ಮುನಿಸಿಪಲ್ ವಿಮಾನ ನಿಲ್ದಾಣದಿಂದ ಹಾರಿಸಿದ್ದಾನೆ. ಏರ್ಪೋರ್ಟ್ ಗೆ ವಾಪಸ್ಸು ಬರುವ ಸಮಯದಲ್ಲಿ ವಿಮಾನದಲ್ಲಿ ಇದ್ದಕ್ಕಿದ್ದಂತೆ ಪವರ್ ಕಡಿತಗೊಂಡಿದ್ದರಿಂದ ಹೆದ್ದಾರಿಯ ಮೇಲೆ ವಿಮಾನವನ್ನು ಲ್ಯಾಂಡ್ ಮಾಡಲು ಸುರಕ್ಷಿತ ಸ್ಥಳ ಹುಡುಕಬೇಕಾಯಿತು ಎಂದು ಅವನು ಹೇಳಿದ್ದಾನೆ.

‘ರಸ್ತೆ ಮೇಲೆ ಸಂಚರಿಸುತ್ತಿದ್ದ ಕಾರುಗಳ ಮೇಲೆ ಅಪ್ಪಳಿಸುವ ಭೀತಿ ನನ್ನಲ್ಲಿ ಉಂಟಾಗಿತ್ತು. ಆದರೆ ರಸ್ತೆಯ ಮೇಲೆ ವಾಹನಗಳಿಲ್ಲದ ದೊಡ್ಡ ಖಾಲಿ ಜಾಗ ಕಾಣಸಿತು ಮತ್ತು ಅಲ್ಲೇ ಲ್ಯಾಂಡ್ ಮಾಡಲು ವಿಮಾನವನ್ನು ಕೆಳಗಿಳಿಸಿದೆ,’ ಎಂದು ಚೋ ಲಾಸ್ ಏಂಜಲೀಸ್ ನ ಎನ್ ಬಿ ಸಿ ಸುದ್ದಿಸಂಸ್ಥೆಗೆ ಹೇಳಿದ್ದಾನೆ.