ಉದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರು ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಒಬ್ಬರು. ಆನ್ಲೈನ್ನಲ್ಲಿ ಹೆಚ್ಚು ಆಕ್ಟಿವ್ ಆಗಿರುವ ಇವರು ಸಮಾಜಮುಖಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಬಾಹ್ಯಾಕಾಶ(Space)ದಲ್ಲಿ ಒದ್ದೆಯಾದ ಟವೆಲ್ ಅನ್ನು ಹಿಂಡಿದಾಗ ಏನಾಗುತ್ತದೆ ಎಂದು ತೋರಿಸುವ ವಿಡಿಯೋ(Video)ವೊಂದನ್ನು ಹಂಚಿಕೊಂಡಿದ್ದಾರೆ.
ಭಾನುವಾರಗಳಿಗೆ ಪರಿಪೂರ್ಣ ಸಾದೃಶ್ಯ. ವಾರದ ಎಲ್ಲಾ ಒತ್ತಡವನ್ನು ಹೊರಹಾಕಿ” ಎಂದು ಶೀರ್ಷಿಕೆಯೊಂದಿಗೆ ಆನಂದ್ ಮಹೀಂದ್ರಾ ಅವರು ಬಾಹ್ಯಾಕಾಶದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆನಡಾದ ಬಾಹ್ಯಾಕಾಶ ಸಂಸ್ಥೆ (CSA)ಯ ಕ್ರಿಸ್ ಹ್ಯಾಡ್‌ಫೀಲ್ಡ್ ಎಂಬ ಗಗನಯಾತ್ರಿ ಐಎಸ್‌ಎಸ್‌ನಲ್ಲಿ ಒದ್ದೆಯಾದ ಟವೆಲ್ ಅನ್ನು ಪ್ರಯೋಗಿಸುತ್ತಿರುವುದನ್ನು ವಿಡಿಯೋ ತೋರಿಸುತ್ತದೆ. ವಿಡಿಯೋದಲ್ಲಿ ಕಾಣುವಂತೆ, ಕ್ರಿಸ್ ಅವರು ಟವೆಲ್ಗೆ ನೀರು ಹಾಕಿ ಹಿಂಡಿದಾಗ ಅದು ಗುರುತ್ವಾಕರ್ಷಣೆ ಇಲ್ಲದೆ ಅದರಲ್ಲೇ ಅಂಟಿಕೊಂಡಿರುವುದನ್ನು ಕಾಣಬಹುದು.
Perfect analogy for Sundays. Wring out all the stress of the week… but the water doesn’t spill or make a mess…the stress floats away magically.. https://t.co/yBxclMiG8y
— anand mahindra (@anandmahindra) June 26, 2022
ವಿಡಿಯೋವನ್ನು ಆರಂಭದಲ್ಲಿ 2013ರಲ್ಲಿ ಕೆನಡಾದ ಬಾಹ್ಯಾಕಾಶ ಸಂಸ್ಥೆ (CSA) ಪೋಸ್ಟ್ ಮಾಡಿತ್ತು. ‘ಐಎಸ್‌ಎಸ್‌ನಲ್ಲಿ ನೀರನ್ನು ಹಿಂಡುವುದು – ವಿಜ್ಞಾನಕ್ಕಾಗಿ!’ ಎಂಬ ಶೀರ್ಷಿಕೆಯೊಂದಿಗೆ ಏಪ್ರಿಲ್ 17, 2013 ರಂದು ಪೋಸ್ಟ್ ಮಾಡಲಾಗಿತ್ತು. ಆದರೆ ಇದೀಗ ಮತ್ತೆ ಇಂಟರ್ನೆಟ್ನಲ್ಲಿ ಮುನ್ನೆಲೆಗೆ ಬಂದು ವೈರಲ್ ಆಗಲು ಪ್ರಾರಂಭಿಸಿದೆ. ಆನಂದ್ ಮಹೀಂದ್ರಾ ಅವರು ಪೋಸ್ಟ್ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 1,100 ಕ್ಕೂ ಹೆಚ್ಚು ಲೈಕ್ಸ್ ಮತ್ತು 105ಕ್ಕೂ ಹೆಚ್ಚು ರೀಟ್ವೀಟ್‌ಗಳನ್ನು ಗಳಿಸಿದೆ. ಪೋಸ್ಟ್ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ.
ಒಂಬತ್ತು ವರ್ಷಗಳ ಹಿಂದೆ ಅಪ್‌ಲೋಡ್ ಮಾಡಿದ ನಂತರ, ಕ್ರಿಸ್ ಹ್ಯಾಡ್‌ಫೀಲ್ಡ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಪ್ರಯೋಗವನ್ನು ಮಾಡುತ್ತಿರುವ 3 ನಿಮಿಷ ಮತ್ತು 17 ಸೆಕೆಂಡುಗಳ ವಿಡಿಯೋ 19 ಲಕ್ಷ ವೀಕ್ಷಣೆಗಳನ್ನು ಸಂಗ್ರಹಿಸಲಾಗಿದೆ.
Published On - 5:14 pm, Sun, 26 June 22