Viral Video: ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾತ್ರಿಗಳಿಗೆ ಹೇಗೆ ಹೇರ್​ಕಟ್ ಮಾಡ್ತಾರೆ ಗೊತ್ತಾ?; ಇಲ್ಲಿದೆ ವಿಡಿಯೋ

ಗಗನಯಾತ್ರಿ ಮಥಿಯಾಸ್ ಮೌರೆರ್ ಅವರು ಟ್ವಿಟರ್‌ನಲ್ಲಿ ಹೊಸ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಬಾಹ್ಯಾಕಾಶ ನೌಕೆಯೊಳಗೆ ಸಹೋದ್ಯೋಗಿಯಿಂದ ಹೇರ್​ಕಟ್ ಮಾಡಿಸಿಕೊಳ್ಳುವುದನ್ನು ನೋಡಬಹುದು.

Viral Video: ಬಾಹ್ಯಾಕಾಶ ಕೇಂದ್ರದಲ್ಲಿ ಗಗನಯಾತ್ರಿಗಳಿಗೆ ಹೇಗೆ ಹೇರ್​ಕಟ್ ಮಾಡ್ತಾರೆ ಗೊತ್ತಾ?; ಇಲ್ಲಿದೆ ವಿಡಿಯೋ
ಬಾಹ್ಯಾಕಾಶ ಕೇಂದ್ರದಲ್ಲಿ ಹೇರ್​ಕಟ್
Edited By:

Updated on: Dec 23, 2021 | 2:10 PM

ಕೆಲವೊಂದು ವಿಡಿಯೋಗಳನ್ನು ನೋಡಿದರೆ ರೋಮಾಂಚನವಾಗುತ್ತದೆ. ಬಾಹ್ಯಾಕಾಶವೆಂಬುದು ಜನಸಾಮಾನ್ಯರಿಗೆ ಒಂದು ಅಚ್ಚರಿಯ ಜಗತ್ತು. ಸಾಮಾನ್ಯ ಮಿತಿಗಳನ್ನು ಮೀರುವ ಮನುಷ್ಯ ತನ್ನ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಹೊಸ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಾಹ್ಯಾಕಾಶದಲ್ಲಿ ಬೇರೆಲ್ಲ ಜನರಂತೆ ಮನುಷ್ಯರಿಗೆ ಬದುಕಲು ಸಾಧ್ಯವಿಲ್ಲ. ಅಲ್ಲಿ ದಿನ ಕಳೆಯುವುದು ಬಹಳ ಕಷ್ಟಕರವಾದ ವಿಷಯ. ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇಗಿರುತ್ತಾರೆ ಎಂಬ ಕುತೂಹಲಕ್ಕೆ ಉತ್ತರವಾಗಿ ವಿಡಿಯೋವೊಂದು ವೈರಲ್ ಆಗಿದೆ.

ಗಗನಯಾತ್ರಿ ಮಥಿಯಾಸ್ ಮೌರೆರ್ ಅವರು ಟ್ವಿಟರ್‌ನಲ್ಲಿ ಹೊಸ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಬಾಹ್ಯಾಕಾಶ ನೌಕೆಯೊಳಗೆ ಸಹೋದ್ಯೋಗಿಯಿಂದ ಹೇರ್​ಕಟ್ ಮಾಡಿಸಿಕೊಳ್ಳುವುದನ್ನು ನೋಡಬಹುದು. ಬಾಹ್ಯಾಕಾಶ ಸಲೂನ್‌ಗೆ ಹೋಗಿ, ಅಲ್ಲಿ ರಾಜ ಎಂಬ ವ್ಯಕ್ತಿ ಹೇರ್​ಕಟ್ ಮಾಡುತ್ತಾರೆ. ರಾಜ ಒಂದೇ ಒಂದು ಕೂದಲು ಕೆಳಗೆ ಬೀಳದಂತೆ ಸ್ಪೇಸ್ ಸ್ಟೇಷನ್​ನಲ್ಲಿ ಹೇರ್​ಕಟ್ ಮಾಡುತ್ತಾರೆ.

ಈ ಹಿಂದೆ ಕೂಡ ಬಾಹ್ಯಾಕಾಶ ನಿಲ್ದಾಣದಲ್ಲಿ ಪಿಜ್ಜಾ ತಿನ್ನುವ, ತಲೆಗೆ ಸ್ನಾನ ಮಾಡುವ ವಿಡಿಯೋಗಳನ್ನು ಗಗನಯಾತ್ರಿಗಳು ಹಂಚಿಕೊಂಡಿದ್ದರು. ಬಾಹ್ಯಾಕಾಶ ಕೇಂದ್ರದಲ್ಲಿ ಗುರುತ್ವಾಕರ್ಷಣ ಶಕ್ತಿ ಇರದ ಕಾರಣ ಕೂದಲೆಲ್ಲ ಹೇಗೆ ಬೇಕೆಂದರೆ ಹಾಗೆ ಹಾರುತ್ತಿರುತ್ತದೆ. ಅಲ್ಲಿ ಯಾವ ವಸ್ತುವೂ ಇಟ್ಟ ಜಾಗದಲ್ಲಿ ಇರುವುದಿಲ್ಲ. ಬಾಹ್ಯಾಕಾಶ ನಿಲ್ದಾಣದಲ್ಲಿ ಈ ಹಿಂದೆ ಬರ್ತಡೇ ಸೆಲಬ್ರೇಟ್ ಮಾಡುವ ವಿಡಿಯೋ, ತಲೆ ಸ್ನಾನ ಮಾಡುವ ವಿಡಿಯೋಗಳು ವೈರಲ್ ಆಗಿದ್ದವು. ಅದರ ಬೆನ್ನಲ್ಲೇ ಹೇರ್ ಕಟಿಂಗ್ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಇದನ್ನೂ ಓದಿ: Viral Video: ಕುಕ್ಕರ್​ನಲ್ಲಿ ಕಾಫಿ ತಯಾರಿಸಿದ ವ್ಯಕ್ತಿ: ವೀಡಿಯೋ ವೈರಲ್​

Viral Video: ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇಗೆ ತಲೆ ಸ್ನಾನ ಮಾಡುತ್ತಾರೆ?; ವೈರಲ್ ವಿಡಿಯೋ ಇಲ್ಲಿದೆ