ಸೂರ್ಯನು ನೆತ್ತಿಯನ್ನು ಸುಡುತ್ತಿದ್ದು, ಹೊರಗಡೆ ಕಾಲಿಡುವುದಕ್ಕೂ ಕಷ್ಟ ಎನ್ನುವಂತಾಗಿದೆ. ಬಿಸಿ ಗಾಳಿಯು ಮೈಯನ್ನು ಸುಡುವಂತಹ ಅನುಭವವಾಗುತ್ತದೆ. ಹೀಗಾಗಿ ಹೆಚ್ಚಿನವರಿಗೆ ಫ್ಯಾನ್ ಕೆಳಗೆ ಇರುವುದೆಂದರೆ ತುಂಬಾನೇ ಇಷ್ಟ. ಆದರೆ ಹೊರಗಡೆ ಹೋಗಿ ದುಡಿಯುವವರಿಗೆ ಬಿಸಿಲು, ಗಾಳಿ ಮಳೆಯನ್ನು ಲೆಕ್ಕಿಸದೆ ದುಡಿಯಲೇಬೇಕು. ವಿಪರೀತವಾದ ಬಿಸಿಲಿನಿಂದಪಾರಾಗಲು ಇಲ್ಲೊಬ್ಬ ಆಟೋ ಚಾಲಕ ಉಪಾಯವೊಂದನ್ನು ಕಂಡುಕೊಂಡಿದ್ದಾನೆ.
ಹೌದು, ಆಟೋದಲ್ಲಿ ಪೈಪ್ ಅನ್ನು ಎಷ್ಟು ಬುದ್ಧಿವಂತಿಕೆಯಿಂದ ಅಳವಡಿಸಲಾಗಿದೆ. ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ಹ್ಯಾಂಡಲ್ @sangeeeramez ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಆಟೋದಲ್ಲಿರುವ ಕನ್ನಡಿಯ ಪಕ್ಕದಲ್ಲಿ ಪೈಪ್ ಅಳವಡಿಸಿರುವುದನ್ನು ನೋಡಬಹುದು. ಈ ಪೈಪ್ ಅನ್ನು ಆಟೋ ಮುಂಭಾಗದ ಚಕ್ರಕ್ಕೆ ಜೋಡಿಸಲಾಗಿದೆ.
ವೆಂಚುರಿ ಎಫೆಕ್ಟ್’ ತತ್ವವನ್ನು ಆಧಾರಿಸಿ ದ್ರವವು ಕಿರಿದಾದ ಜಾಗದಲ್ಲಿ ಹಾದುಹೋದಾಗ ಅದರ ವೇಗವು ಹೆಚ್ಚಾಗಿ ಒತ್ತಡವು ಕಡಿಮೆಯಾಗುತ್ತದೆ. ಆ ವೇಳೆಯಲ್ಲಿ ಈ ಪೈಪ್ ಮಿನಿ ವೆಂಚುರಿ ಟ್ಯೂಬ್ ಆಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಹೌದು, ಈ ಸಣ್ಣ ಪೈಪ್ ಮೂಲಕ ಗಾಳಿಯು ಹಾದುಹೋಗುವಾಗ, ವೇಗವು ಹೆಚ್ಚಾಗಿ ಒತ್ತಡವು ಕಡಿಮೆಯಾಗುತ್ತದೆ. ಹೀಗಾಗಿ ತಂಪಾದ ಗಾಳಿಯು ಹೊರಬರಲು ಪ್ರಾರಂಭಿಸುತ್ತದೆ. ಈ ರೀತಿಯ ತಂತ್ರವನ್ನು ಬಳಸಿ ಚಾಲಕನು ಗಾಳಿಯು ಬರುವಂತೆ ಮಾಡಿಕೊಂಡಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಯುವತಿಯ ಕಿಡ್ನಿ ವೈಫಲ್ಯಕ್ಕೆ ಕಾರಣವಾದ ಹೇರ್ ಸ್ಟ್ರೈಟ್ನಿಂಗ್ ಟ್ರೀಟ್ಮೆಂಟ್
ಈ ವಿಡಿಯೋಗೆ ಆರು ಲಕ್ಷಕ್ಕೂ ಅಧಿಕ ಜನರು ಈ ವಿಡಿಯೋವನ್ನು ನೋಡಿ ಇಷ್ಟ ಪಟ್ಟಿದ್ದಾರೆ. ಬಳಕೆದಾರರೊಬ್ಬರು, ‘ಚಾಲಕನು ತುಂಬಾ ಯೋಚಿಸಿದ ನಂತರ ಈ ತಂತ್ರವನ್ನು ಬಳಸಿದ್ದಾನೆಯೇ ಅಥವಾ ಇದು ಕೇವಲ ಕಾಕತಾಳೀಯವೇ ಎಂದು ಹೇಳುವುದು ಕಷ್ಟ, ಆದರೆ ಈ ಕಲ್ಪನೆಯು ಅದ್ಭುತವಾಗಿದೆ’ ಎಂದಿದ್ದಾರೆ. ಮತ್ತೊಬ್ಬರು, ‘ಭೌತಶಾಸ್ತ್ರವನ್ನು ಇದಕ್ಕಿಂತ ಉತ್ತಮ ರೀತಿಯಲ್ಲಿ ಬಳಸಲಾಗುವುದಿಲ್ಲ’ ಎಂದಿದ್ದಾರೆ. ಇನ್ನೊಬ್ಬರು, ‘ಈ ಚಾಲಕ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾನೆಯೇ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ