ಕೊಳಲನೂದುತ ಮನೆಮನೆಗೆ ಬಂದ ಈ ಕಂದ; ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆ ವಿತರಿಸುತ್ತಿರುವ ಬಾಲಕ ವೈರಲ್​​

ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೂ ಮುನ್ನ ಮನೆ ಮನೆಗೆ ತೆರಳಿ ಪವಿತ್ರ ಮಂತ್ರಾಕ್ಷತೆ ನೀಡಿ, ಕೊಳಲನೂದುತ ಪ್ರೀತಿಯಿಂದ ಆಹ್ವಾನವಿತ್ತ ಪುಟ್ಟ ಬಾಲಕನ ವಿಡಿಯೋ ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ. ಇಲ್ಲಿದೆ ನೋಡಿ ವೈರಲ್​​ ವಿಡಿಯೋ

ಕೊಳಲನೂದುತ ಮನೆಮನೆಗೆ ಬಂದ ಈ ಕಂದ; ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆ ವಿತರಿಸುತ್ತಿರುವ ಬಾಲಕ ವೈರಲ್​​

Updated on: Jan 13, 2024 | 7:12 PM

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ದಿನಗಣನೆ ಆರಂಭ ಆಗಿದೆ. ಜನವರಿ 22ರಂದು ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕೆ ಅನೇಕ ಗಣ್ಯರಿಗೆ ಆಹ್ವಾನ ನೀಡಲಾಗುತ್ತಿದೆ. ಇದಲ್ಲದೇ ಭಾರತದ ಪ್ರತೀ ಮೂಲೆಯಲ್ಲಿರುವ ಶ್ರೀ ರಾಮ ಭಕ್ತರಿಗೆ ಅಯೋಧ್ಯೆಯಿಂದ ತಂದ ಅಕ್ಷತೆ ನೀಡಿ ಆಹ್ವಾನಿಸಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಇದೀಗಾ ಪುಟ್ಟ ಬಾಲಕನ ವಿಡಿಯೋವೊಂದು ನೆಟ್ಟಿಗರ ಮನಗೆದ್ದಿದೆ. ರಾಮ ಮಂದಿರ ಲೋಕಾರ್ಪಣೆಯ ಸುಸಂದರ್ಭದಲ್ಲಿ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆಯನ್ನು ಮನೆ-ಮನೆಗೆ ನೀಡಿ ಕೊಳಲನೂದುತ ಆಹ್ವಾನ ನೀಡಿರುವ ಪುಟ್ಟ ಬಾಲಕನ ವಿಡಿಯೋ ಇಲ್ಲಿದೆ ನೋಡಿ.

ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆ ವಿತರಿಸುತ್ತಿರುವ ಬಾಲಕನ ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಅಯೋಧ್ಯೆ ತಲುಪುವುದರಿಂದ ಹಿಡಿದು ಶ್ರೀರಾಮನ ದರ್ಶನದವರೆಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ

ವಿಡಿಯೋವನ್ನು @mauna_adiga ಎಂಬ ‘X’ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಇದೀಗಾಗಲೇ ಲಕ್ಷಾಂತರ ರಾಮಭಕ್ತರು ಪುಟ್ಟ ಬಾಲಕನ ಭಕ್ತಿಗೆ ಕಾಮೆಂಟ್​​​ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಈ ಬಾಲಕ ಕೊಳಲನೂದುತ ಮನೆಮನೆಗೆ ಬಂದು ಮಂತ್ರಾಕ್ಷತೆ ನೀಡಿ ಪ್ರೀತಿಯಿಂದ ಆಹ್ವಾನ ನೀಡಿರುತ್ತಿರುವುದನ್ನು ಕಾಣಬಹುದು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ