Viral Video : ಕೆನಡಾದಲ್ಲಿ ವಾಸವಾಗಿರುವ ಗುರುದೀಪ್ ಪಂಧೇರ್ ಎಂಬ ಸೋಶಿಯಲ್ ಮೀಡಿಯಾ ಇನ್ಫ್ಲ್ಯೂಯೆನ್ಸರ್ ಹಿಮದಿಂದ ಆವರಿಸಿದ ಕೆನಡಾದ ಕಾಡಿನಲ್ಲಿ ಭಾಂಗ್ರಾ ನೃತ್ಯ ಮಾಡುವುದರ ಮೂಲಕ ಕ್ರಿಸ್ಮಸ್ ಶುಭಾಶಯಗಳನ್ನು ಕೋರಿದ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಇವರ ಪೋಷಾಕನ್ನು, ಕೆನಡಾದ ಹಿಮಪರಿಸರವನ್ನು ಎಲ್ಲಕ್ಕಿಂತ ಹೆಚ್ಚಾಗಿ ಇವರ ಉತ್ಸಾಹ ಮತ್ತು ಇವರ ನೃತ್ಯವನ್ನು ಆಸ್ವಾದಿಸುತ್ತಿದ್ದಾರೆ.
From my natural habitat at -30C/-22F temperature in the Yukon, I am sending you Christmas Greetings, joy, hope and positivity!
ಇದನ್ನೂ ಓದಿWatch on YouTube: https://t.co/pQo92pduXJ pic.twitter.com/my5CJ0Zsdv
— Gurdeep Pandher of the Yukon (@GurdeepPandher) December 24, 2022
ಸಾಮಾಜಿಕ ಜಾಲತಾಣಗಳ ಮೂಲಕ ಭಾಂಗ್ರಾ ನೃತ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವಲ್ಲಿ ಇವರು ಕಾರಣಕರ್ತರಾಗಿದ್ದಾರೆ. -30 ಡಿಗ್ರಿ ಸೆಲ್ಸಿಯಸ್ ಹವಾಮಾನದಲ್ಲಿಯೂ ಇವರು ಹೀಗೆ ಉತ್ಸಾಹದಿಂದ ಹೆಜ್ಜೆ ಹಾಕಿರುವುವುದು ನೆಟ್ಟಿಗರಲ್ಲಿ ಸ್ಫೂರ್ತಿ ತುಂಬಿದೆ.
‘ಯುಕಾನ್ನ ಅರಣ್ಯದಿಂದ ನಿಮ್ಮೆಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ. ಸಂತೋಷ, ಭರವಸೆ ಮತ್ತು ಉತ್ತಮ ದಿನಗಳು ನಿಮ್ಮವಾಗಲಿ’ ಎಂಬ ಸಂದೇಶದೊಂದಿಗೆ ನೃತ್ಯ ಪ್ರದರ್ಶನ ಮಾಡಿದ್ದಾರೆ ಪಂಧೇರ್.
ಈ ವಿಡಿಯೋ ಅನ್ನು ಸುಮಾರು 2.5 ಲಕ್ಷ ಜನರು ವೀಕ್ಷಿಸಿದ್ದಾರೆ. 5,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. 500ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ನೋಡಿ : ಭಾಂಗ್ರಾ ನೃತ್ಯ ಮಾಡಿದ ರಾವಣ ನೆಟ್ಟಿಗರ ಅಚ್ಚರಿ, ವಿಡಿಯೋ ವೈರಲ್
ನಿಮ್ಮೊಳಗ ಉಕ್ಕುತ್ತಿರುವ ಸಂತೋಷ ನಮಗೆಲ್ಲ ಸ್ಫೂರ್ತಿಯಾಗಿದೆ ಎಂದಿದ್ದಾರೆ ಅನೇಕರು. ಗುರುದೀಪ್ ನೀವು ಅದ್ಭುತ, ಎಂದಿಗೂ ನೀವು ಇದೇ ರೀತಿಯಲ್ಲಿ ಯಶಸ್ವಿಯಾಗಿ ಸಂತೋಷವನ್ನು ಹಂಚುತ್ತ ಬಂದಿದ್ದೀರಿ, ನಿಮಗೂ ಶುಭಾಶಯ ಎಂದಿದ್ದಾರೆ ಕೆಲವರು. ಚಿಯರ್ಸ್! ಯಾವಾಗಲೂ ನೀವು ನಮ್ಮನ್ನು ನಗಿಸುತ್ತೀರಿ, ಪಾಸಿಟಿವ್ ವೈಬ್ಸ್ ಹರಡುತ್ತೀರಿ, ಇದು ಜಗತ್ತಿಗೆ ಬೇಕು ಎಂದಿದ್ದಾರೆ. ರಕ್ತದ ಉತ್ತಮ ಪರಿಚಲನೆಗೆ ಮತ್ತು ಅದರಿಂದ ಉಕ್ಕುವ ಸಂಭ್ರಮಕ್ಕೆ ಭಾಂಗ್ರಾಗಿಂತ ಬೇರೆ ಏನೂ ಇಲ್ಲ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:47 pm, Mon, 26 December 22