Viral Video: ಬೈಕ್ನಲ್ಲಿ ಎಂದಲ್ಲಾ, ಎರಡಲ್ಲಾ ಬರೋಬ್ಬರಿ ಒಂಭತ್ತು ಮಂದಿ ಕುಳಿತು ಹೊರಟಿದ್ದಾರೆ! ವಿಡಿಯೊ ವೈರಲ್
ಈ ವಿಡಿಯೊ ನೋಡಿದ ನೆಟ್ಟಿಗರು, ರೆಕ್ಕೆಯುಳ್ಳ ವಿಮಾನ ಆಕಾಶದಲ್ಲಿ ಹಾರಾಡಿದರೆ ಬೈಕ್ಗೆ ರೆಕ್ಕೆ ಕಟ್ಟಿ ರಸ್ತೆಯಲ್ಲಿ ಚಲಿಸುತ್ತಿದ್ದಾನೆ ಸವಾರ ಎಂಬ ಪ್ರತಿಕ್ರಿಯಿಸಿದ್ದಾರೆ. ವಿಡಿಯೊ ನೋಡಿ..
ನಿರಂತರವಾಗಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಗಳು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ಏತನ್ಮಧ್ಯೆ ಪೆಟ್ರೋಲ್, ಡೀಸೆಲ್ ಅನ್ನು ಕಡಿಮೆ ಬಳಕೆ ಮಾಡುವಂತೆ ಕೆಲವು ಪರ್ಯಾಯ ವ್ಯವಸ್ಥೆಯನ್ನು ಜನರು ಕಂಡುಹಿಡಿಯುತ್ತಿದ್ದಾರೆ. ಇದೀಗ ವೈರಲ್ ಆದ ವಿಡಿಯೊದಲ್ಲಿ ಗಮನಿಸುವಂತೆ ಒಂದೇ ರೈಡ್ನಲ್ಲಿ ಸಾಧ್ಯವಾದಷ್ಟು ಜನರನ್ನು ಕರೆದುಕೊಂಡು ಬೈಕ್ ಸವಾರ ಹೊರಟಿದ್ದಾನೆ. ಬೈಕ್ನಲ್ಲಿ ಕುಳಿತುಕೊಳ್ಳಲು ಸೀಟ್ ವ್ಯವಸ್ಥೆಯನ್ನು ಹೇಗೆ ಮಾಡಲಾಗಿದೆ ಎಂಬುದನ್ನು ವಿಡಿಯೊದಲ್ಲೇ ನೋಡಿ.
ವಿಡಿಯೊದಲ್ಲಿ ನೋಡುವಂತೆ ಬೈಕ್ ಸವಾರನು ಬೈಕ್ ಓಡಿಸುತ್ತಿದ್ದಾನೆ. ರೆಕ್ಕೆಯಂತೆ ಎರಡು ಹಲಗೆಗಳನ್ನು ಬೈಕ್ಗೆ ಜೋಡಿಸಲಾಗಿದೆ. ಆತನ ಹಿಂಬದಿಗೆ ಎರಡು ಜನ ಕುಳಿತಿದ್ದರೆ, ಜೋಡಿಸಲಾದ ಹಲಗೆಯ ಮೇಲೆ ಮತ್ತೊಂದಿಷ್ಟು ಜನರು ಕುಳಿತಿದ್ದಾರೆ. ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಒಂಭತ್ತು ಮಂದಿ ಕುಳಿತಿದ್ದಾರೆ. ರೆಕ್ಕೆಯುಳ್ಳ ವಿಮಾನ ಆಕಾಶದಲ್ಲಿ ಹಾರಾಡಿದರೆ ಬೈಕ್ಗೆ ರೆಕ್ಕೆ ಕಟ್ಟಿ ರಸ್ತೆಯಲ್ಲಿ ಚಲಿಸುತ್ತಿದ್ದಾನೆ ಸವಾರ ಎಂಬ ಪ್ರತಿಕ್ರಿಯೆ ಕೇಳಿ ಬಂದಿದೆ.
ನಾವು ವಿಡಿಯೊದಲ್ಲಿ ಗಮನಿಸಿದರೆ ಐದು ಮಹಿಳೆಯರು ಮತ್ತು ನಾಲ್ಕು ಮಕ್ಕಳು ಬೈಕ್ನಲ್ಲಿ ಚಲಿಸುತ್ತಿರುವುದು ಕಂಡು ಬರುತ್ತದೆ. ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದ್ದು ಫುಲ್ ವೈರಲ್ ಆಗಿದೆ. ನಿರಂತರ ಪೆಟ್ರೋಲ್, ಡೀಸೆಲ್ ಬೆಲೆಗಳು ಏರುತ್ತಿರುವುದರಿಂದ ಈ ರೀತಿಯ ಪರ್ಯಾಯ ವ್ಯವಸ್ಥೆ ಅನಿವಾರ್ಯವೇ ಎಂದೆನಿಸುತ್ತಿದೆ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ನಿಯಮ ಉಲ್ಲಂಘಿಸಿದ್ದಾರೆ ಮತ್ತು ಹೆಲ್ಮೆಟ್ ಇಲ್ಲದೇ ಅಷ್ಟೊಂದು ಜನ ಬೈಕ್ನಲ್ಲಿ ಸಂಚರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ನಿಧಾನವಾಗಿ ಬೈಕ್ ಓಡಿಸಿ ಹೆಚ್ಚು ಕಡಿಮೆ ಆದೀತು ಎಂದು ಕೆಲವರು ಹೇಳಿದ್ದಾರೆ. ವಿಡಿಯೋಕ್ಕೆ ನಾನಾ ಪ್ರತಿಕ್ರಿಯೆಗಳು ಕೇಳಿ ಬಂದಿವೆ. ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.
सरकार ने पेट्रोल-डीज़ल को आसमान पर पहुचाया तो जनता ने भी नया जुगाड़ हवाई जहाज बना लिया.. pic.twitter.com/YvnjzdS1uP
— Jaivardhan Singh (@JVSinghINC) October 27, 2021
ಇದನ್ನೂ ಓದಿ:
Viral Video: ಕೊಂಚ ತಡವಾಗಿದ್ದರೂ ಜಲಪಾತದಲ್ಲಿ ಕೊಚ್ಚಿ ಹೋಗುತ್ತಿದ್ದರು ತಾಯಿ-ಮಗು; ಶಾಕಿಂಗ್ ವಿಡಿಯೋ ಇಲ್ಲಿದೆ
Viral Video: ಸುಮಾರು 10 ಅಡಿ ಆಳದ ಬಾವಿಯಲ್ಲಿ ಬಿದ್ದ ಚಿರತೆ ರಕ್ಷಣೆ; ವಿಡಿಯೊ ನೋಡಿ