Viral Video: ಗೆಳತಿಯ ತಲೆಯಲ್ಲಿ ಹೇನು ತೆಗೆಯುತ್ತಿರುವ ಗೆಳೆಯ, ‘ಸಚ್ಚಾ ಪ್ಯಾರ್’ ಎಂದ ನೆಟ್ಟಿಗರು
Dating : ನಿಮ್ಮ ಗೆಳೆಯ ಅಥವಾ ಗೆಳತಿಯ ಬಗ್ಗೆ ನೀವು ಎಷ್ಟರ ಮಟ್ಟಿಗೆ ಕಾಳಜಿ ತೆಗೆದುಕೊಳ್ಳಬಲ್ಲಿರಿ? ಇಂಥ e-ಕಾಲದಲ್ಲಿಯೂ ಹೀಗೆ ಕಾಳಜಿ ತೆಗೆದುಕೊಳ್ಳುವವರನ್ನು ನೋಡಿದರೆ ಮನಸು ಕರಗುವುದಿಲ್ಲವಾ? ವಿಡಿಯೋ ನೋಡಿ.

Viral : ಪರಸ್ಪರ ಕಾಳಜಿಯಿಂದ ಮಾತನಾಡಿಕೊಳ್ಳಲು ಒಂದಿಷ್ಟು ಏಕಾಂತವಿರಲೆಂದೋ, ನವಿರಾದ ಭಾವಗಳನ್ನು ಹಂಚಿಕೊಂಡು ಮನಸ್ಸನ್ನು ಉಲ್ಲಸಿತಗೊಳಿಸಿಕೊಳ್ಳಲೆಂದೋ ಜೋಡಿಗಳು ಡೇಟಿಂಗ್ ಹೋಗುವುದುಂಟು. ಹೀಗೆ ನದಿ ದಂಡೆಯ ಬಳಿ ತಮ್ಮ ಲೋಕದಲ್ಲಿ ತಾವಿರುವ ಈ ಜೋಡಿಯನ್ನು ಯಾರೋ ಕ್ಯಾಮೆರಾದಲ್ಲಿ ಹಿಡಿದಿಟ್ಟಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನ ‘ಘಂಟಾ’ ಎಂಬ ಮೀಮ್ ಪೇಜ್ ಹಂಚಿಕೊಂಡಿದೆ. 1,69,695 ವೀಕ್ಷಣೆಯನ್ನು ಕಂಡಿರುವ ಈ ವಿಡಿಯೋ ನೋಡಿ ‘ಸಚ್ಚಾ ಪ್ಯಾರ್’ ಎಂದಿದ್ದಾರೆ ನೆಟ್ಟಿಗರು. ಏಕೆಂದರೆ ಇದು ಅಪರೂಪದಲ್ಲಿ ಅಪರೂಪದ ದೃಶ್ಯ. ನದೀ ದಂಡೆಯ ಮೇಲೆ ಕುಳಿತು ತನ್ನ ಗೆಳತಿಯ ಕೂದಲಿನಿಂದ ಹೇನು ತೆಗೆಯುವುದೆಂದರೆ ಪ್ರೀತಿ ಮತ್ತು ಕಾಳಜಿ ಅಲ್ಲದೆ ಇನ್ನೇನು?
ಕೆಲವರು ಎಂಥ ಉಲ್ಲಾಸಮಯ ಕ್ಷಣ ಎಂದಿದ್ದರೆ ಇನ್ನೂ ಕೆಲವರು ಹಾಸ್ಯಪೂರಿತ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲ ಹುಡುಗಿಯರು ಇದ್ದರೆ ಇಂಥ ಹುಡುಗನಿರಬೇಕು ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ನಿಮಗಾಗಿ ಲೈಸಿಲ್ ಖರೀದಿಸುತ್ತೇನೆ’ ಎಂದು ಒಬ್ಬರು ಹೇಳಿದರೆ, ‘ಇಂಥ ಕಾಳಜಿಯುಳ್ಳ ಬಾಯ್ಫ್ರೆಂಡ್ ನನಗೂ ಬೇಕೆಂಬ ಆಸೆ ಉಂಟಾಗುತ್ತಿದೆ’ ಎಂದಿದ್ದಾರೆ.
View this post on Instagram
ಉಳಿದಂತೆ ಕೆಲವು ಕೆಟ್ಟ ಪ್ರತಿಕ್ರಿಯೆಗಳೂ ಇವೆ. ಎಲ್ಲವೂ ಅವರವರ ನೋಟ ಅವರವರ ಮಾತು ಅವರವರ ಅಭಿವ್ಯಕ್ತಿ. ಒಟ್ಟಾರೆಯಾಗಿ ಈ ಜಗತ್ತಿನಲ್ಲಿ ಒಂದು ದೃಶ್ಯವನ್ನು ಪ್ರೀತಿ ಮತ್ತು ಕಾಳಜಿಯ ಕಣ್ಣಿನಿಂದ ನೋಡುವ ಕಣ್ಣುಗಳು ಹೆಚ್ಚಬೇಕಿವೆ.








