Viral : ‘ದಿ ಅಮೇಜಿಂಗ್ ಟೈಗರ್ಸ್’ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಈ ಪೋಸ್ಟ್ ನೆಟ್ಟಿಗರಲ್ಲಿ ಅಚ್ಚರಿಯೊಂದಿಗೆ ಗಾಬರಿಯನ್ನೂ ಹುಟ್ಟಿಸಿದೆ. ಇಲ್ಲಿ ಬಸ್ ಚಾಲಕ ವಾಹನವನ್ನು ನಿಲ್ಲಿಸಿ ಹುಲಿಯನ್ನು ಕರೆದು ಕಿಟಕಿ ತೆರೆದು ಮಾಂಸದ ತುಂಡೊಂದನ್ನು ಕೊಡುತ್ತಾನೆ. ಅದು ಸಹಜವಾಗಿ ಒಂದೇ ನೆಗೆತಕ್ಕೆ ಆ ತುಂಡನ್ನು ಗಬಕ್ಕನೆ ನುಂಗಿ ಬಾಯೊರೆಸಿಕೊಂಡಂತೆ ಮಾಡುತ್ತದೆ. ಇಷ್ಟೇ ಸಾಕು ಈಗ ಹೋಗು ಎಂಬಂತೆ ಕಿಟಕಿ ಗಾಜನ್ನು ಎಳೆಯುತ್ತಾನೆ ಡ್ರೈವರ್. ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ 33,000 ಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ. ವಿಡಿಯೋಗೆ ಪ್ರತಿಕ್ರಿಯಿಸಿದವರು ಆಹಾ ಧೈರ್ಯವೇ ಎಂದು ಮೆಚ್ಚಿದ್ದಾರೆ. ಇನ್ನೂ ಕೆಲವರು ಅನೇಕ ಪ್ರಶ್ನೆಗಳನ್ನು ಡ್ರೈವರ್ ಗೆ ಕೇಳಿದ್ದಾರೆ. ಹೀಗೆಲ್ಲ ಮಾಡಿ ಕಾಡುಪ್ರಾಣಿಗಳಿಗೆ ತೊಂದರೆ ಕೊಡಬೇಡಿ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’
ಈ ವಿಡಿಯೋ ನೋಡಿದರೆ ಇದೊಂದು ಪರಿಚಿತ ಸಂಬಂಧವೆನ್ನಿಸುತ್ತದೆ ಅಥವಾ ಅರಣ್ಯ ಸಿಬ್ಬಂದಿಯೂ ಆಗಿರಬಹುದು. ಆದರೂ ಕಾಡುಪ್ರಾಣಿಗಳು ಪ್ರಾಣಿಗಳೇ. ಯಾವಾಗ ಹೇಗೆ ವರ್ತಿಸುತ್ತವೇ ಎಂದು ಹೇಳಲಾಗದು. ಈ ಕುರಿತು ಸಾಕಷ್ಟು ಪ್ರಕರಣಗಳನ್ನು ನೀವೆಲ್ಲ ನೋಡಿದ್ದೀರಿ, ಓದಿದ್ದೀರಿ. ಆದ್ದರಿಂದ ಈ ವಿಡಿಯೋದಲ್ಲಿ ತೋರಿಸಿದಂತೆ ಎಂದೂ ಅನುಕರಿಸಲು ಹೋಗಬೇಡಿ.