Viral Video: ಧೂಮಪಾನ ಮಾಡುವಂತೆ ನಟಿಸಿ ಹೊಗೆಯನ್ನು ಉಂಗುರದಂತೆ ತಿರುಗಿಸಿ ಬಿಟ್ಟ ವಧು! ಪಕ್ಕದಲ್ಲಿದ್ದ ವರನ ರಿಯಾಕ್ಷನ್ ನೋಡಿ

ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರಿಗೆ ವಿಡಿಯೋ ತಮಾಷೆಯಾಗಿದ್ದು ನಗುವ ಇಮೋಜಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Viral Video: ಧೂಮಪಾನ ಮಾಡುವಂತೆ ನಟಿಸಿ ಹೊಗೆಯನ್ನು ಉಂಗುರದಂತೆ ತಿರುಗಿಸಿ ಬಿಟ್ಟ ವಧು! ಪಕ್ಕದಲ್ಲಿದ್ದ ವರನ ರಿಯಾಕ್ಷನ್ ನೋಡಿ
ಧೂಮಪಾನ ಮಾಡುವಂತೆ ನಟಿಸಿ ಹೊಗೆಯನ್ನು ಉಂಗುರದಂತೆ ತಿರುಗಿಸಿ ಬಿಟ್ಟ ವಧು!
Edited By:

Updated on: Jul 30, 2021 | 12:32 PM

ವಿವಾಹ ಅಂದಾಕ್ಷಣ ಮೋಜು, ಮಸ್ತಿ ಇದ್ದಿದ್ದೇ. ಕುಟುಂಬ, ಸ್ನೇಹಿತರು(Friends) ಎಲ್ಲಾ ಸೇರುವ ಆ ದಿನ ಖುಷಿಯಿಂದ ಕೂಡಿರುತ್ತದೆ. ಆದರೆ ಕೆಲವು ವಿಲಕ್ಷಣ ಸನ್ನಿವೇಶಗಳು ಬೆರಗಾಗುವಂತೆ ಮಾಡುತ್ತದೆ. ಇದೀಗ ವೈರಲ್(Viral Video) ಆಗಿರುವ ಸುದ್ದಿಯೂ ಅಂಥದ್ದೆ. ಮದುವೆ ಮುಗಿಸಿ ಸ್ನೇಹಿರೊಂದಿಗೆ ಮಧು- ವರ ಕುಳಿತಿದ್ದಾರೆ. ಧೂಮಪಾನ(Smoke) ಮಾಡುವಂತೆ ನಟಿಸುತ್ತಾ ವಧು ಸ್ಟೈಲ್ ಆಗಿ ನಗುತ್ತಿದ್ದಾಳೆ. ವಿಡಿಯೋ ನೋಡಿತ್ತಿದ್ದಂತೆಯೇ ಆಶ್ಚರ್ಯವಾಗುವುದಂತೂ ಸತ್ಯ. ಪಕ್ಕದಲ್ಲಿ ಕುಳಿತಿದ್ದ ವರನ ರಿಯಾಕ್ಷನ್​ ಏನಾಗಿತ್ತು ಎಂಬುದನ್ನು ನೀವು ನೋಡಲೇ ಬೇಕು..

ಮದುವೆಯ ಎಲ್ಲಾ ಆಚರಣೆಗಳು ಮುಗಿದಿದೆ. ಕೊನೆಯಲ್ಲಿ ವಧು-ವರ ಅಕ್ಕ ಪಕ್ಕ ಕುಳಿತಿದ್ದಾರೆ. ಟೇಬಲ್ ಮೇಲೆ ವಿವಿಧಿ ತಿಂಡಿಗಳಿವೆ. ಎದುರಿಗೆ ಸ್ನೇಹಿತರು ಕುಳಿತಂತೆ ಅನಿಸುತ್ತಿದೆ. ವಧು ಧೂಮಪಾನ ಮಾಡಿದಂತೆಯೇ ಹೊಗೆಯನ್ನು ಉಂಗುರದಂತೆ ಸುರುಳಿಯಾಗಿ ಬಿಡಲು ಪ್ರಯತ್ನಿಸುತ್ತಿದ್ದಾಳೆ. ವಿಡಿಯೋ ಇದೀಗ ಸಕತ್ ವೈರಲ್ ಆಗಿದೆ.

ಆದರೆ ವಿಡಿಯೋದಲ್ಲಿ ಸ್ಪಷ್ಟವಾಗಿ ಗಮನಿಸುವಂತೆ ವಧು ಏನನ್ನೋ ತಿನ್ನುತ್ತಾಳೆ. ತಕ್ಷಣ ಬಾಯಿಯಿಂದ ಹೊಗೆ ಬಂದಿದೆ. ಪಕ್ಕದಲ್ಲಿರುವ ವರನೂ ಕೂಡಾ ಬಾಯಿಯಲ್ಲಿ ಏನನ್ನೋ ತಿನ್ನುತ್ತಿರುವುದನ್ನು ನೋಡಬಹುದು. ಬಿಸಿಯಾದ ಆಹಾರವನ್ನು ವಧು ಬಾಯಿಗೆ ಹಾಕಿದ್ದಾಳೆ. ಹೊಗೆ ಬರುವಂತೆ ವಿಡಿಯೋ ಎಡಿಟ್ ಮಾಡಲಾಗಿದೆ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸ್ಟೈಲ್ ಆಗಿ ಹೊಗೆ ಬಿಡುವಂತೆ ವಧು ಲುಕ್ ಕೊಟ್ಟಾಗ, ಪಕ್ಕದಲ್ಲಿದ್ದ ವರ ಸುಮ್ಮನಿರು ಎಂದು ಸನ್ನೆ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರಿಗೆ ವಿಡಿಯೋ ತಮಾಷೆಯಾಗಿದ್ದು ನಗುವ ಇಮೋಜಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ವಧು ಧೂಮಪಾನ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಜನರು ಮರೆಯಬಾರದು.

ಇದನ್ನೂ ಓದಿ:

Viral Video: ಫುಟ್‌ಬಾಲ್‌ ಒದ್ದಂತೆ ಸೇರು ಅಕ್ಕಿಯನ್ನು ಒದ್ದ ವಧು! ವಿಡಿಯೋ ನೋಡಿದ್ರೆ ನೀವೂ ನಗೋದು ಗ್ಯಾರಂಟಿ

Viral Video: ಹಾರ ಹಾಕುವಾಗ ತನ್ನನ್ನು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು; ತಿರುಗಿ ಆತ ಹೊಡೆದ್ದು ಯಾರಿಗೆ?..ವಿಚಿತ್ರ ಇದು