Viral Video: ಪಾನಿಪುರಿ ತಿನ್ನಲು ಹೋದ ಮದುಮಗಳ ವಿಡಿಯೋ ವೈರಲ್

ಈ ವೀಡಿಯೊವನ್ನು ಮದುಮಗಳೇ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Viral Video: ಪಾನಿಪುರಿ ತಿನ್ನಲು ಹೋದ ಮದುಮಗಳ ವಿಡಿಯೋ ವೈರಲ್
ಪಾನಿಪುರಿ ತಿನ್ನುತ್ತಿರುವ ವಧು
Updated By: ಸುಷ್ಮಾ ಚಕ್ರೆ

Updated on: Dec 31, 2021 | 1:11 PM

ಯುವಕರಿಗಿಂತಲೂ ಯುವತಿಯರಿಗೆ ಪಾನಿಪುರಿ, ಮಸಾಲಪುರಿ ಎಂದರೆ ತುಸು ಹೆಚ್ಚೇ ಪ್ರೀತಿ. ಇಲ್ಲೊಬ್ಬಳು ಮದುಮಗಳು ತನ್ನ ಮದುವೆಯ ರಿಸೆಪ್ಷನ್ ಮುಗಿಯುತ್ತಿದ್ದಂತೆ ಫುಡ್ ಕೌಂಟರ್​ನತ್ತ ಹೋಗಿ ಸೀದಾ ಪಾನಿಪುರಿ ಕೊಡುವವನ ಎದುರು ನಿಂತಿದ್ದಾಳೆ. ಪಾನಿಪುರಿ ಟೇಸ್ಟ್ ಮಾಡಲೆಂದು ಹೋದ ಆಕೆ ಆಮೇಲೆ ಏನು ಮಾಡಿದಳು ಎಂಬುದನ್ನು ನೀವೇ ವಿಡಿಯೋದಲ್ಲಿ ನೋಡಿ.

ಭಾರತದಲ್ಲಿನ ಎಲ್ಲಾ ಬೀದಿ ಆಹಾರಗಳಲ್ಲಿ, ಪಾನಿ ಪುರಿ ಎಲ್ಲರ ಮೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಪಾನಿ ಪುರಿಯನ್ನು ಇಷ್ಟಪಡದವರೇ ಇಲ್ಲ ಎನ್ನಬಹುದು. ಗರಿಗರಿ ಪೂರಿ, ಮಸಾಲೆಯ ಹೂರಣ, ಖಾರ-ಹುಳಿ ಹದವಾಗಿ ಬೆರೆತ ಪಾನಿಯನ್ನು ನೆನಸಿಕೊಂಡರೆ ಬಾಯಲ್ಲಿ ನೀರೂರದೆ ಇರಲು ಸಾಧ್ಯವೇ ಇಲ್ಲ. ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ವಧು ಮತ್ತು ವರರು ತಮ್ಮ ಮದುವೆಯಲ್ಲಿ ರುಚಿಕರವಾದ ಪಾನಿ ಪುರಿಗಾಗಿ ಕಾಯುತ್ತಿರುವುದನ್ನು ಕಾಣಬಹುದು. ಸುಂದರವಾಗಿ ಸಿಂಗಾರಗೊಂಡ ವಧುವಿನ ಕೈಗೆ ಪಾನಿಪುರಿಯನ್ನು ಕೊಡುತ್ತಿದ್ದಂತೆ ಅದನ್ನು ನೋಡಿದ ಆಕೆ ‘ಇದು ಗೋಧಿಯಿಂದ ಮಾಡಿದ ಪುರಿ. ನನಗೆ ಬೇಡ’ ಎಂದು ಗಂಡನಿಗೆ ಆ ಪಾನಿಪುರಿಯನ್ನು ಕೊಡುತ್ತಾಳೆ. ಆಕೆ ಹಾಗೆ ಹೇಳಿದ ಕೂಡಲೆ ಆಕೆಯ ಗೆಳೆಯರು ಮತ್ತು ಸಂಬಂಧಿಕರು ಜೋರಾಗಿ ನಗುತ್ತಾರೆ.

ಆಕೆ ಕೊಟ್ಟ ಪಾನಿಪುರಿಯನ್ನು ತೆಗೆದುಕೊಂಡು ಆಕೆಯ ಗಂಡ ಆಚೆ ಹೋಗುತ್ತಾನೆ. ಈ ವೀಡಿಯೊವನ್ನು ಮದುಮಗಳೇ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದಾದ ಸ್ವಲ್ಪ ಹೊತ್ತಿನ ನಂತರ ಆ ವಧು ತಡೆಯಲಾಗದೆ ತನ್ನ ಮೆಚ್ಚಿನ ಪಾನಿ ಪುರಿಯನ್ನು ತಿನ್ನುತ್ತಾಳೆ.

ಈ ವಿಡಿಯೋವನ್ನು ಸುಮಾರು 8.37 ಲಕ್ಷ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋಗೆ 20.2 ಸಾವಿರ ಲೈಕ್​ಗಳು ಸಿಕ್ಕಿವೆ. ಆಕೆಯ ಪಾನಿಪುರಿ ಪ್ರೀತಿಗೆ ಹಲವು ಪಾನಿಪುರಿ ಪ್ರಿಯರು ಕಮೆಂಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral Video: ಸಮೋಸಾಕ್ಕೆ ಜಾಮೂನ್​ ಸೇರಿಸಿ ತಿಂದ ಫುಡ್​ ಬ್ಲಾಗರ್​: ಕೆಟ್ಟ ರುಚಿ ಎಂದ ನೆಟ್ಟಿಗರು

Viral Video: ಉದ್ದಿನ ದೋಸೆ, ನೀರ್ ದೋಸೆಯೆಲ್ಲ ಹಳೇದಾಯ್ತು; ಫ್ರೂಟ್ ದೋಸೆ ಮಾಡೋದು ಹೇಗಂತ ಗೊತ್ತಾ?