ಜಾತ್ರೆ ಎಂದಾಕ್ಷಣ ರುಚಿಕರವಾದ ತಿನಿಸುಗಳನ್ನು ತಿನ್ನುವುದರೊಂದಿಗೆ ಉಯ್ಯಾಲೆ ಆಡುವುದೆಂದರೆ
ಸಾಕಷ್ಟು ಜನರಿಗೆ ಇಷ್ಟ. ಒಂದೆಡೆ ಮಕ್ಕಳು ಉಯ್ಯಾಲೆಯಿಂದ ಆಕರ್ಷಿತರಾದರೆ ಮತ್ತೊಂದೆಡೆ ಹಿರಿಯರು ಉಯ್ಯಾಲೆ ಆಡುವುದರ ಜೊತೆಗೆ ತಮ್ಮ ಬಾಲ್ಯದ ನೆನಪುಗಳನ್ನು ಮತ್ತೆ ಮರುಕಳಿಸುತ್ತಾರೆ. ಕೆಲವೊಮ್ಮೆ ಉಯ್ಯಾಲೆ ಮುರಿದು ಬಿದ್ದು ಸಾಕಷ್ಟು ಪ್ರಾಣಾಪಾಯಗಳು ಸಂಭವಿಸುವುದುಂಟು. ಇದೀಗಾ ಅಂತದ್ದೇ ಘಟನೆ ನಡೆದಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
@lyricaanderson ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆಗಸ್ಟ್ 07ರಂದು ಹಂಚಿಕೊಂಡಿರುವ ವಿಡಿಯೋ ಇಲ್ಲಿಯವರೆಗೆ 52.3 ಮಿಲಿಯನ್ ಅಂದರೆ 5ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: ನಾಯಿ ಮಾಡಿದ ಕಿತ್ತಾಪತಿಯಿಂದ ಹೊತ್ತಿ ಉರಿದ ಮನೆ; ವಿಡಿಯೋ ಇಲ್ಲಿದೆ ನೋಡಿ
ವಿಡಿಯೋದ ಪ್ರಾರಂಭದಲ್ಲಿ ಜಾತ್ರೆಯಲ್ಲಿ ಉಯ್ಯಾಲೆ ಆಡುತ್ತಾ ಸಂಭ್ರಮಿಸುತ್ತಿರುವುದನ್ನು ಕಾಣಬಹುದು. ಇದಕ್ಕಿದಂತೆ ಉಯ್ಯಾಲೆ ಬುಡದಿಂದ ಕಿತ್ತು ಹೋಗಿದ್ದು, ತಕ್ಷಣ ಸ್ಥಳದಲ್ಲಿದವರು ಧಾವಿಸಿ ಉಯ್ಯಾಲೆ ಬೀಳದಂತೆ ಹಿಡಿದುಕೊಂಡಿದ್ದಾರೆ. ವಿಡಿಯೋಗೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದು, ಜಾತ್ರೆಯಲ್ಲಿ ಇಂತಹ ಆಟವನ್ನು ಆಡುವ ಮೊದಲು ಜಾಗ್ರತೆಯಿಂದಿರಿ ಎಂದು ಬರೆದುಕೊಂಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ