Viral Video: ಸಖತ್ತಾಗಿ ಸ್ಟೆಪ್ ಹಾಕಿದ ಎಲಾನ್ ಮಸ್ಕ್ – ಡೊನಾಲ್ಡ್ ಟ್ರಂಪ್; AI ಡ್ಯಾನ್ಸ್ ವಿಡಿಯೋ ವೈರಲ್

ಎಲಾನ್ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ ಜೊತೆ ಡ್ಯಾನ್ಸ್ ಮಾಡುತ್ತಿರುವ ಎಐ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಅವರಿಬ್ಬರೂ ಬೀ ಗೀಸ್‌ನ ಐಕಾನಿಕ್ ಟ್ರ್ಯಾಕ್ ಸ್ಟೇಯಿನ್ ಅಲೈವ್‌ನ ಸ್ಟೆಪ್ ಹಾಕಿದ್ದಾರೆ.

Viral Video: ಸಖತ್ತಾಗಿ ಸ್ಟೆಪ್ ಹಾಕಿದ ಎಲಾನ್ ಮಸ್ಕ್ - ಡೊನಾಲ್ಡ್ ಟ್ರಂಪ್; AI ಡ್ಯಾನ್ಸ್ ವಿಡಿಯೋ ವೈರಲ್
ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ಡ್ಯಾನ್ಸ್
Follow us
ಸುಷ್ಮಾ ಚಕ್ರೆ
|

Updated on: Aug 17, 2024 | 4:17 PM

ಬಿಲಿಯನೇರ್ ಎಲಾನ್ ಮಸ್ಕ್ ಅವರು ಇಂದು ಅವರು ಮತ್ತು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬೀ ಗೀಸ್ ಅವರ ‘ಸ್ಟೇಯಿನ್’ ಅಲೈವ್’ ಹಾಡಿಗೆ ಗ್ರೂವ್ ಮಾಡುವ ಮತ್ತು ನೃತ್ಯದ ಹೆಜ್ಜೆಗಳನ್ನು ಪ್ರದರ್ಶಿಸುವ ಎಐ-ರಚಿಸಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮತ್ತು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಾಗ ತಮ್ಮ ದಿಟ್ಟ ಹೇಳಿಕೆಗಳೊಂದಿಗೆ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚೆಗೆ, ಅಮೆರಿಕಾ ಅಧ್ಯಕ್ಷೀಯ ಚುನಾವಣೆಗಳಿಗೆ ಮುಂಚಿತವಾಗಿ ಎಕ್ಸ್​ನಲ್ಲಿ ಸ್ನೇಹಪರ ಸಂದರ್ಶನಗಳಿಂದಾಗಿ ಇಬ್ಬರೂ ಟ್ರೆಂಡ್ ಆಗಿದ್ದರು. ಆದರೆ, ಇದು ಅವರ ಮಾತು ಮಾತ್ರವಲ್ಲ, ಟೆಕ್ ಬಿಲಿಯನೇರ್ ಎಲಾನ್ ಮಸ್ಕ್ ಇತ್ತೀಚೆಗೆ ರಿಯಲ್ ಎಸ್ಟೇಟ್ ಉದ್ಯಮಿಯೊಂದಿಗೆ AI ರಚಿತ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋವನ್ನು ಇದೀಗ ಡೊನಾಲ್ಡ್ ಟ್ರಂಪ್ ಕೂಡ ಶೇರ್ ಮಾಡಿಕೊಂಡಿದ್ದಾರೆ.

ಇದರಲ್ಲಿ ಇಬ್ಬರೂ ಫಾರ್ಮಲ್ ಸೂಟ್‌ಗಳನ್ನು ಧರಿಸಿ, ಶೂ ಧರಿಸಿಕೊಂಡು ಡ್ಯಾನ್ಸ್ ಮಾಡುತ್ತಿರುವಂತೆ ವಿನ್ಯಾಸಗೊಳಿಸಲಾಗಿದೆ. ಈ ಜೋಡಿಯು ತಮ್ಮ ಅದ್ಭುತವಾದ ನೃತ್ಯದ ಮೂಲಕ ಇಂಟರ್ನೆಟ್​ನಲ್ಲಿ ಟ್ರೆಂಟ್ ಸೃಷ್ಟಿಸಿದ್ದರು.

ಈ ವಿಡಿಯೋ ನೋಡಿದರೆ ನಿಮಗೆ ನಗದೇ ಇರಲು ಸಾಧ್ಯವೇ ಇಲ್ಲ. ಈ ಎಐ ನೃತ್ಯ ಭಾರೀ ವೈರಲ್ ಆಗಿದೆ.

ಇದನ್ನೂ ಓದಿ: Video: ಪಾಟ್ನಾ ಏರ್‌ಪೋರ್ಟ್‌ನಲ್ಲಿ ಹಾವು-ಮುಂಗುಸಿ ಕಾಳಗ; ವೈರಲ್‌ ಆಯ್ತು ರೋಚಕ ವಿಡಿಯೋ

ಎಲಾನ್ ಮಸ್ಕ್ ಸಾಮಾಜಿಕ ಮಾಧ್ಯಮದಲ್ಲಿ ಈ ಮೋಜಿನ ಡ್ಯಾನ್ಸ್ ಕ್ಲಿಪ್ ಅನ್ನು ಹಂಚಿಕೊಂಡಾಗಿನಿಂದ, ಇದು 133 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಇದೀಗ ಡೊನಾಲ್ಡ್ ಟ್ರಂಪ್ ಕೂಡ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, 50 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.

ಇತ್ತೀಚಿನ ತಿಂಗಳುಗಳಲ್ಲಿ ಡೀಪ್‌ಫೇಕ್ ವೀಡಿಯೊಗಳು ಹೆಚ್ಚುತ್ತಿವೆ. ಕೆಲವರು ವೀಕ್ಷಕರ ದಾರಿ ತಪ್ಪಿಸಲು ತಂತ್ರಜ್ಞಾನವನ್ನು ಬಳಸುತ್ತಾರೆ. ಆದರೆ, ಎಲಾನ್ ಮಸ್ಕ್​ನಂಥವರು ಈ ತಂತ್ರಜ್ಞಾನವನ್ನು ಮೋಜಿಗಾಗಿ ಬಳಸುತ್ತಿದ್ದಾರೆ.

ಇದನ್ನೂ ಓದಿ: Video Viral: ರೀಲ್ಸ್​ ಮಾಡಲು ಹೋಗಿ ಆಯತಪ್ಪಿ 6ನೇ ಮಹಡಿಯಿಂದ ಬಿದ್ದ ಬಾಲಕಿ; ವಿಡಿಯೋ ವೈರಲ್​​​

ನವೆಂಬರ್ 2024ರಲ್ಲಿ ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಎಲಾನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್ ಅವರ ಸ್ನೇಹವು ಉತ್ತುಂಗಕ್ಕೇರಿದೆ. ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರಿಸ್ ವಿರುದ್ಧ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಸದಸ್ಯ ಡೊನಾಲ್ಡ್​ ಟ್ರಂಪ್​ಗೆ ಎಲಾನ್ ಮಸ್ಕ್ ಸಾರ್ವಜನಿಕವಾಗಿ ಬೆಂಬಲ ನೀಡುತ್ತಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್