ಟರ್ಕಿ: ‘ನೀನೇ ನನ್ನನ್ನು ರಕ್ಷಿಸಿದ್ದು, ಈಗ ಹೊರಟು ನಿಂತರೆ?’ ಬೆಕ್ಕಿನ ವಿಡಿಯೋ ವೈರಲ್

| Updated By: ಶ್ರೀದೇವಿ ಕಳಸದ

Updated on: Feb 17, 2023 | 2:49 PM

Turkey : ಎಂಕಾಜ್​ ಎಂದು ಇದಕ್ಕೆ ಹೆಸರಿಟ್ಟಿದ್ದೇನೆ. ಇದರೊಂದಿಗೆ ಊಟ, ನಿದ್ರೆ ಹಂಚಿಕೊಂಡಿದ್ದೇನೆ. ಇದರ ಪೋಷಕರು ಸಿಗದಿದ್ದರೆ ನಾನೇ ಇದನ್ನು ಕರೆದೊಯ್ಯುತ್ತೇನೆ. ಇಷ್ಟೊಂದು ಮುದ್ದಾಗಿರುವ ಈ ಬೆಕ್ಕನ್ನು ಬಿಟ್ಟು ಹೋಗುವುದಾದರೂ ಹೇಗೆ?

ಟರ್ಕಿ: ‘ನೀನೇ ನನ್ನನ್ನು ರಕ್ಷಿಸಿದ್ದು, ಈಗ ಹೊರಟು ನಿಂತರೆ?’ ಬೆಕ್ಕಿನ ವಿಡಿಯೋ ವೈರಲ್
ಟರ್ಕಿ ಭೂಕಂಪದಲ್ಲಿ ಅವಶೇಷಗಳಡಿ ಸಿಲುಕಿದ ಬೆಕ್ಕನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ
Follow us on

Viral Video : ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ (Earthquake in Turkey) ಮಡಿದವರ ಸಂಖ್ಯೆ ಏರುತ್ತಲೇ ಇದೆ. ಜೊತೆಗೆ ಅವಶೇಷಗಳಡಿಯಿಂದ ಜನರನ್ನು ರಕ್ಷಿಸುತ್ತಿರುವ ಕಾರ್ಯಾಚರಣೆಯೂ. ಇಂಥ ಅವಘಡಗಳು ಸಂಭವಿಸಿದಾಗ ರಕ್ಷಣೆಯ ಆದ್ಯತೆ ಮನುಷ್ಯರಿಗೇ. ಆದರೆ ಪ್ರಾಣಿಗಳು? ಈ ಜೀವಸಂಕುಲ ನಮ್ಮ ಬದುಕಿನುದ್ದಕ್ಕೂ ನಮ್ಮೊಂದಿಗಿದ್ದು ನಮ್ಮನ್ನು ಭಾವನಾತ್ಮಕವಾಗಿ ಪೊರೆದಂಥವು. ಅವುಗಳ ರಕ್ಷಣೆಯೂ ನಮ್ಮದೇ ಅಲ್ಲವೆ? ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ.

ಫೆ. 6ರಂದು ಟರ್ಕಿಯಲ್ಲಿ ಸಂಭವಿಸಿದ ಈ ಭೂಕಂಪದಲ್ಲಿ ಈತನಕ ಸುಮಾರು 40,000ಕ್ಕಿಂತಲೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸಿರಿಯಾದಲ್ಲಿ ಸುಮಾರು 6,000 ಜನರು ಜೀವ ಕಳೆದುಕೊಂಡಿದ್ದಾರೆ. ಇನ್ನೂ ಯಾರಾದರೂ ಬದುಕಿದ್ದಾರಾ ಎನ್ನುವ ಸಾಧ್ಯತೆ ಮೆಲ್ಲಗೆ ಕರಗುತ್ತಿದೆ. ಆದರೂ…

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇಂಥ ಸಂದರ್ಭದಲ್ಲಿ ಟರ್ಕಿಯ ಅವಶೇಷಗಳಡಿ ಸಿಲುಕಿಕೊಂಡ ಬೆಕ್ಕೊಂದು ಅಗ್ನಿಶಾಮಕ ಪಡೆಯ ಈ ವ್ಯಕ್ತಿಯ ಕಣ್ಣಿಗೆ ಬಿದ್ದಿದೆ. ನಾಲ್ಕು ದಿನಗಳ ಕಾಲ ದಿಕ್ಕೆಟ್ಟ ಪರಿಸ್ಥಿತಿಯಲ್ಲಿದ್ದ ಬೆಕ್ಕು ಇವರನ್ನು ಕಂಡೊಡನೆ ಭುಜ ಏರಿ ಕುಳಿತುಬಿಟ್ಟಿದೆ. ಇಳಿದು ಹೋಗಲೊಲ್ಲೆ ಎಂದು ಹಟ ಹಿಡಿದಿದೆ. ರೆಡ್ಡಿಟ್​ನಲ್ಲಿ ಹಂಚಿಕೊಂಡ ಈ ವಿಡಿಯೋ ನೋಡಿದ ನೆಟ್ಟಿಗರು ಇವರಿಬ್ಬರ ಬಾಂಧವ್ಯ ಕಂಡು ಸಂತಸದಿಂದ ಹನಿಗಣ್ಣಾಗುತ್ತಿದ್ದಾರೆ.

ಇದನ್ನೂ ಓದಿ : ಕೋಟಿ ಕೊಟ್ಟರೂ ಸಿಗದ ಇಂಥ ಅಪೂರ್ವ ಕ್ಷಣಗಳು

‘ಈ ಬೆಕ್ಕಿಗೆ ಎಂಕಾಜ್​ ಎಂದು ಹೆಸರಿಟ್ಟಿದ್ದೇನೆ. ಅಂದರೆ ನರಕದಿಂದ ಇದು ಪಾರಾಗಿದೆ ಎಂಬ ಹಿನ್ನೆಲೆಯಲ್ಲಿ. ಇದು ನನ್ನೊಂದಿಗೆ ಊಟ, ನಿದ್ರೆ ಎಲ್ಲವನ್ನೂ ಹಂಚಿಕೊಂಡಿದೆ. ಇದರ ಪೋಷಕರನ್ನು ಹುಡುಕುವ ಪ್ರಯತ್ನವನ್ನಂತೂ ಮಾಡುತ್ತಿದ್ದೇನೆ ಆದರೆ ಇದು ನನ್ನನ್ನು ಬಿಟ್ಟು ಇಳಿಯುತ್ತಲೇ ಇಲ್ಲ. ಒಂದು ವೇಳೆ ಇದರ ಪೋಷಕರು ಸಿಗದಿದ್ದರೆ ನನ್ನೊಂದಿಗೆ ಇದನ್ನು ಕರೆದೊಯ್ಯುತ್ತೇನೆ. ಇಷ್ಟೊಂದು ಆಪ್ತವಾಗಿರುವ ಬೆಕ್ಕನ್ನು ಬಿಟ್ಟು ಹೋಗಲು ನನಗೂ ಮನಸ್ಸಿಲ್ಲ.’ ಎಂದಿದ್ಧಾರೆ ಈತ.

ಇದನ್ನೂ ಓದಿ : 100 ವರ್ಷಗಳ ನಂತರ ಲಂಡನ್​ ವಿಳಾಸಕ್ಕೆ ತಲುಪಿದ ಈ ಪತ್ರ

ಯೂ ಆರ್ ಗ್ರೇಟ್​ ಫೈರ್​​ಮ್ಯಾನ್​ ಎಂದು ನೆಟ್ಟಿಗರು ಬೆನ್ನು ತಟ್ಟುತ್ತಿದ್ದಾರೆ. ನಿಮಗಿಂತ ಉತ್ತಮ ಸ್ನೇಹಿತರು ಅದಕ್ಕೆ ಇನ್ನು ಸಿಗಲಿಕ್ಕಿಲ್ಲವೇನೋ, ನೀವೇ ಕರೆದೊಯ್ಯಿರಿ ಅದು ಭಯಗೊಂಡಿದೆ ಎಂದಿದ್ದಾರೆ ಅನೇಕರು. ನಿಮ್ಮ ಪರಿಶುದ್ಧ ಹೃದಯಕ್ಕೆ ಈ ಬೆಕ್ಕೇ ಸಾಕ್ಷಿ ನಿಮಗೆ ಸಲಾಮ್​ ಎಂದಿದ್ದಾರೆ ಇನ್ನೂ ಹಲವರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 2:47 pm, Fri, 17 February 23