Viral Video: ಜ್ಯುವೆಲರಿ ಶಾಪ್​ನಲ್ಲಿ ಚಿನ್ನ ಕದಿಯಲು ಖತರ್ನಾಕ್ ಉಪಾಯ ಮಾಡಿದ ಮಹಿಳೆ; ವಿಡಿಯೋ ವೈರಲ್

Shocking Video: ಜ್ಯುವೆಲ್ಲರಿ ಶಾಪ್‌ನಲ್ಲಿ ಇಬ್ಬರು ಮಹಿಳೆಯರು ಕುಳಿತುಕೊಂಡಿರುವಾಗ ಅವರಿಗೆ ಪುರುಷನೊಬ್ಬ ಚಿನ್ನಾಭರಣಗಳನ್ನು ತೋರಿಸುತ್ತಿದ್ದಾನೆ. ಆಗ ಆಕೆ ಯಾವ ರೀತಿ ಉಪಾಯದಿಂದ ಚಿನ್ನಾಭರಣವನ್ನು ಕದ್ದಳು ಎಂಬ ವಿಡಿಯೋ ಇಲ್ಲಿದೆ.

Viral Video: ಜ್ಯುವೆಲರಿ ಶಾಪ್​ನಲ್ಲಿ ಚಿನ್ನ ಕದಿಯಲು ಖತರ್ನಾಕ್ ಉಪಾಯ ಮಾಡಿದ ಮಹಿಳೆ; ವಿಡಿಯೋ ವೈರಲ್
ಚಿನ್ನ ಕದಿಯುತ್ತಿರುವ ಮಹಿಳೆ
Edited By:

Updated on: May 18, 2022 | 5:30 PM

ಯಾರಿಗೂ ಗೊತ್ತಾಗದಂತೆ ಕಳ್ಳತನ ಮಾಡುವುದೂ ಒಂದು ಕಲೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ (Social Media) ಉಲ್ಲಾಸದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮಹಿಳೆಯೊಬ್ಬರು ವಿಚಿತ್ರವಾದ ತಂತ್ರವನ್ನು ಬಳಸಿ ಆಭರಣದ ಅಂಗಡಿಯಿಂದ ಚಿನ್ನವನ್ನು ಕದಿಯುತ್ತಿರುವುದನ್ನು ಕಾಣಬಹುದು. ಜ್ಯುವೆಲ್ಲರಿ ಶಾಪ್‌ನಲ್ಲಿ (Jewellery Shop) ಇಬ್ಬರು ಮಹಿಳೆಯರು ಕುಳಿತುಕೊಂಡಿರುವಾಗ ಅವರಿಗೆ ಪುರುಷನೊಬ್ಬ ಚಿನ್ನಾಭರಣಗಳನ್ನು ತೋರಿಸುತ್ತಿದ್ದಾನೆ. ಕಪ್ಪು ಡ್ರೆಸ್ ಧರಿಸಿದ ಮಹಿಳೆ ಕೆಲವು ನೆಕ್ಲೇಸ್​ಗಳು ಮತ್ತು ಸಣ್ಣ ಚಿನ್ನದ ಆಭರಣಗಳನ್ನು ನೋಡುತ್ತಿರುತ್ತಾಳೆ.

ಆಗ ಅವರಿಗೆ ಬೇರೆ ಆಭರಣಗಳನ್ನು ತೋರಿಸಲೆಂದು ಆ ವ್ಯಕ್ತಿ ಹಿಂದೆ ತಿರುಗಿದಾಗ ಆ ಇಬ್ಬರಲ್ಲಿ ಒಬ್ಬಳು ಮಹಿಳೆ ಒಂದು ಸಣ್ಣ ಚಿನ್ನದ ಆಭರಣವನ್ನು ತೆಗೆದುಕೊಂಡು ಬಾಯಿಗೆ ಹಾಕಿಕೊಳ್ಳುತ್ತಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆ ಚಿನ್ನಾಭರಣವನ್ನು ನುಂಗಿದಳೋ ಅಥವಾ ಬಾಯಿಯಲ್ಲಿ ಬಚ್ಚಿಟ್ಟಿದ್ದಾಳೋ ಎಂಬುದು ಸ್ಪಷ್ಟವಾಗಿಲ್ಲ. (Source)

ಇದನ್ನೂ ಓದಿ
Shocking News: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಕಣ್ಣಿಗೆ ಕಚ್ಚಿದ ಇಲಿ; ಆಮೇಲೇನಾಯ್ತು?
Viral Video: ಶಾಲಾ ಸಮವಸ್ತ್ರದಲ್ಲಿಯೇ ಜಡೆ ಹಿಡಿದು ಹೊಡೆದಾಡಿದ ಬಾಲಕಿಯರು, ವಿಡಿಯೊ ವೈರಲ್
Viral News: ಮೆರವಣಿಗೆಗೆ ಬರದೆ ಕುಡಿದು ಗೆಳೆಯರೊಂದಿಗೆ ಡ್ಯಾನ್ಸ್​ ಮಾಡಿದ ವರ; ಬೇರೆಯವನನ್ನು ಮದುವೆಯಾದ ವಧು!
Viral News: ಕೆಟ್ಟ ಕನಸಿಗೆ ಹೆದರಿ ಕದ್ದ ದೇವರ ವಿಗ್ರಹಗಳನ್ನು ವಾಪಾಸ್ ತಂದಿಟ್ಟ ಕಳ್ಳರು; ಅಂಥದ್ದೇನಾಯ್ತು?

ಈ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ memes.bks ಎಂಬ ಪೇಜ್ ‘ದೀದಿ ತೋ ಸೋನಾ ನಿಗಲ್ ಗಯಿ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಇದು 12,000 ವೀಕ್ಷಣೆಗಳು ಮತ್ತು 1,200 ಲೈಕ್‌ಗಳನ್ನು ಪಡೆದುಕೊಂಡಿದೆ. ಈ ವಿಡಿಯೋ ಅಂಗಡಿಯಲ್ಲಿನ ಸಿಸಿಟಿವಿ ದೃಶ್ಯಾವಳಿಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ