ಸಾಮಾಜಿಕ ಜಾಲತಾಣ(Social Media) ಗಳಲ್ಲಿ ತಮಾಷೆಯ ವಿಡಿಯೋ(Funny Videos)ಗಳು ಸಾಕಷ್ಟು ವೈರಲ್ ಆಗುತ್ತಿರುತ್ತದೆ. ಇದೀಗಾ ವಿಡಿಯೋ ಒಂದು ವೈರಲ್ ಆಗಿದ್ದು ನಕ್ಕು ನಕ್ಕು ಹೊಟ್ಟೆ ಹುಣ್ಣಾಗುವುದಂತೂ ಖಂಡಿತಾ. ಮದುವೆ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಸಾಕಷ್ಟು ದಂಪತಿಗಳು ಜೋಡಿಯಾಗಿ ಕುಣಿಯುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಇಷ್ಟು ಜೋಡಿಗಳ ನಡುವೆ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಎತ್ತಿ ಕುಣಿಯಲು ಪ್ರಯತ್ನಿಸುತ್ತಾನೆ. ಆದರೆ ಆಕೆಯ ತೂಕಕ್ಕೆ ಇಬ್ಬರು ಕೆಳಗೆ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ತಮಾಷೆಯ ವೀಡಿಯೊವನ್ನು @HasnaZaruriHai ಎಂಬ ಬಳಕೆದಾರರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಕೇವಲ 15 ಸೆಕೆಂಡುಗಳ ಈ ವೀಡಿಯೊವನ್ನು ಇದುವರೆಗೆ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ನೂರಾರು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ.
जोश में अपनी औकात ना भूलें
😂😂😂😂 pic.twitter.com/jIRpCdOLP1— HasnaZarooriHai🇮🇳 (@HasnaZaruriHai) January 26, 2024
ಇದನ್ನೂ ಓದಿ: ಪ್ರತಿದಿನ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಾಳೆ ಈ ಮಹಿಳೆ
ಅದೇ ಸಮಯದಲ್ಲಿ, ವೀಡಿಯೊವನ್ನು ವೀಕ್ಷಿಸಿದ ನಂತರ, ಬಳಕೆದಾರರು ವಿವಿಧ ಆಸಕ್ತಿದಾಯಕ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ. ಒಬ್ಬ ಬಳಕೆದಾರನು ‘ಅವನು ತನ್ನ ಮಿತಿಯನ್ನು ಮೀರಿದ’ ಎಂದು ಹಾಸ್ಯಮಯವಾಗಿ ಬರೆದಿದ್ದಾರೆ, ಆದರೆ ಇತರ ಬಳಕೆದಾರರು ಸಹ ಇದೇ ರೀತಿಯ ಹಾಸ್ಯಗಳನ್ನು ಮಾಡುವ ಮೂಲಕ ವ್ಯಕ್ತಿಯನ್ನು ಗೇಲಿ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ