Viral Video : ಸಾಮಾಜಿಕ ಜಾಲತಾಣದಲ್ಲಿ ಪ್ರೇಮಿಗಳ ದಿನಾಚರಣೆಯ ವಿಡಿಯೋ, ಫೋಟೋಗಳು ತುಂಬಿ ತುಳುಕುತ್ತಿವೆ. ಪ್ರೇಮಿಸುವುದೇ ಒಂದು ಸಾಹಸ. ಇನ್ನು ಪ್ರೇಮವನ್ನೂ ಸಾಹಸದಿಂದಲೇ ವ್ಯಕ್ತಪಡಿಸುವುದು, ಅದಕ್ಕಿಂತಲೂ ಹೆಚ್ಚಿನ ಸಾಹಸ! ಇದೀಗ ದಕ್ಷಿಣ ಆಫ್ರಿಕಾದ ಬೆತ್ ನೀಲ್ ಮತ್ತು ಕೆನಡಾದ ಮೈಲ್ಸ್ ಕ್ಲೌಟಿಯರ್ ಎಂಬ ದಂಪತಿ ಮಾಲ್ಡೀವ್ಸ್ನ ಲಕ್ಸ್ ಸೌತ್ ಆರಿ ಅಟೋಲ್ ರೆಸಾರ್ಟ್ನ ಪೂಲ್ ಆಳದಲ್ಲಿ ದೀರ್ಘಚುಂಬನಗೈದು ಗಿನ್ನೀಸ್ ವಿಶ್ವ ದಾಖಲೆ (GWR) ಮಾಡಿದ್ದಾರೆ; ಇವರಿಬ್ಬರೂ 4 ನಿಮಿಷ 6 ಸೆಕೆಂಡುಗಳ ಕಾಲ ನೀರಿನಾಳದೊಳಗೆ ಲಿಪ್ ಲಾಕ್ (Lip Lock) ಮಾಡಿದ್ದರು. ವಿಡಿಯೋ ಇಲ್ಲಿದೆ.
13 ವರ್ಷಗಳ ಹಿಂದೆ ಇಟಾಲಿಯನ್ ಟಿವಿ ಷೋ, ಲೋ ಷೋ ಡೀ ರೆಕಾರ್ಡ್ನಲ್ಲಿ ಈ ಮೊದಲು 3 ನಿಮಿಷ 24 ಸೆಕೆಂಡುಗಳ ಕಾಲ ನೀರಿನಾಳದಲ್ಲಿ ಮುಳುಗಿ ಲಿಪ್ ಲಾಕ್ ದಾಖಲೆಯನ್ನು ಬೇರೆ ಜೋಡಿಯೊಂದು ಮಾಡಿತ್ತು. ಇದೀಗ ಬೆತ್ ಮತ್ತು ಮೈಲ್ಸ್ ಈ ದಾಖಲೆಯನ್ನು ಮುರಿದಿದ್ದಾರೆ. ವಿಶ್ವ ಗಿನ್ನೀಸ್ ದಾಖಲೆ ಪ್ರಕಾರ, ಈ ಬೆತ್ ಮತ್ತು ಮೈಲ್ಸ್ ಫೆ. 4ರಂದು ಬೆಳಗ್ಗೆ 7.30ಕ್ಕೆ ಈ ಸಾಹಸದ ಪೂರ್ವತಯಾರಿಗೆ ಇಳಿದು ಉಸಿರಾಟದ ಅಭ್ಯಾಸಗಳು, ನೀರಿನೊಳಗೆ ದೀರ್ಘಚುಂಬನ ಇತ್ಯಾದಿಯಲ್ಲಿ ತೊಡಗಿಕೊಂಡರು. ಆನಂತರ 4 ನಿಮಿಷ 6 ಸೆಕೆಂಡುಗಳ ಕಾಲ ದೀರ್ಘಚುಂಬನಗೈದು ವಿಶ್ವ ದಾಖಲೆ ಮಾಡಿದರು.
ಇದನ್ನೂ ಓದಿ : 161 ಕಿ.ಮೀ ಲಾಂಗ್ ಡ್ರೈವ್ ಹೋಗಿಬಂದೆ, ಆದರೆ ಕಾರ್ ನಮ್ಮದಲ್ಲ!
ಈ ಸಾಹಸವನ್ನು ವೀಕ್ಷಿಸಲು ಭಾರೀ ಜನಸಮೂಹವೇ ನೆರೆದಿತ್ತು. ಅವರೆಲ್ಲರಿಗೂ ನಾಲ್ಕು ನಿಮಿಷಗಳ ಕಾಲ ಮೌನವಾಗಿರುವಂತೆ ಕೇಳಿಕೊಳ್ಳಲಾಯಿತು. ಈತನಕ ಈ ವಿಡಿಯೋ ಅನ್ನು 10 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. 65,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ. ಅಕ್ವಾಮನ್ ಅಕ್ವಾಗರ್ಲ್ ಎಂದಿದ್ದಾರೆ ಅನೇಕರು. ಇದು ತುಂಬಾ ಅದ್ಭುತವಾಗಿದೆ ಎಂದಿದ್ದಾರೆ ಹಲವರು.
ಇದನ್ನೂ ಓದಿ : ದೇವಿ ಪ್ರತ್ಯಂಗಿರಾಳನ್ನು ಚೆನ್ನೈಗೆ ಕರೆತಂದ ಮೇಕಪ್ ಕಲಾವಿದ ದೀಪನ್; ವಿಡಿಯೋ ವೈರಲ್
ಈ ದಂಪತಿಗೆ ಮೊದಲ ನೋಟದಲ್ಲೇ ಪ್ರೀತಿಯಾಗಿದೆ. ಐದು ವರ್ಷಗಳ ಕಾಲ ಲಿವ್ಇನ್ನಲ್ಲಿದ್ದ ಇವರಿಗೆ ಒಂದೂವರೆ ವರ್ಷದ ಮಗಳಿದ್ದಾಳೆ. ಇವರಿಬ್ಬರೂ ತಮ್ಮ ಸಾಹಸದ ವಿಡಿಯೋಗಳನ್ನು @freedivingcouple ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:47 pm, Wed, 15 February 23