ಮೆಟ್ರೋಗಾಗಿ ಕಾಯುತ್ತಾ ನಿಲ್ಲುವ ಮಹಿಳೆಯರೇ ಹುಷಾರ್! ಈ ವಿಡಿಯೋ ನೋಡಿ

|

Updated on: Jun 06, 2023 | 2:31 PM

ಪ್ರತಿನಿತ್ಯ ಮೆಟ್ರೋ(Metro)ಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತವೇ ಇರುತ್ತವೆ. ಮೆಟ್ರೋದಲ್ಲಿ ಸ್ನಾನ ಮಾಡಿದ್ದು, ಬ್ರಷ್ ಮಾಡಿದ್ದು, ನೃತ್ಯ ಮಾಡಿದ್ದು ಹೀಗೆ ಹತ್ತು ಹಲವು ವಿಡಿಯೋಗಳು ಇವೆಲ್ಲವೂ ಮುಖದ ಮೇಲೆ ಒಮ್ಮೆ ನಗು ತರಿಸಿ ಮರೆತುಹೋಗುತ್ತವೆ.

ಮೆಟ್ರೋಗಾಗಿ ಕಾಯುತ್ತಾ ನಿಲ್ಲುವ ಮಹಿಳೆಯರೇ ಹುಷಾರ್! ಈ ವಿಡಿಯೋ ನೋಡಿ
ಮೆಟ್ರೋ
Follow us on

ಪ್ರತಿನಿತ್ಯ ಮೆಟ್ರೋ(Metro)ಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಮೆಟ್ರೋದಲ್ಲಿ ಸ್ನಾನ ಮಾಡಿದ್ದು, ಬ್ರಷ್ ಮಾಡಿದ್ದು, ನೃತ್ಯ ಮಾಡಿದ್ದು ಹೀಗೆ ಹತ್ತು ಹಲವು ವಿಡಿಯೋಗಳು ಇವೆಲ್ಲವೂ ಮುಖದ ಮೇಲೆ ಒಮ್ಮೆ ನಗು ತರಿಸಿ ಮರೆತುಹೋಗುತ್ತವೆ. ಆದರೆ ಇನ್ನೂ ಕೆಲವು ವಿಡಿಯೋಗಳು ತಲೆಯಲ್ಲಿ ಅಚ್ಚಳಿಯದೇ ಉಳಿದುಬಿಡುತ್ತದೆ, ಇಂತಹ ವಿಡಿಯೋಗಳನ್ನು ನೋಡಿದಾಗ ಗಾಬರಿಯಾಗುವುದಂತೂ ಸತ್ಯ. ಅಂತಹ ಒಂದು ಘಟನೆ ನಡೆದಿದ್ದು ಕೋಲ್ಕತ್ತಾದ ನೋವಾಪಾರಾ ಮೆಟ್ರೋ ನಿಲ್ದಾಣದಲ್ಲಿ.

ಸಿಸಿಟಿವಿ ದೃಶ್ಯಾವಳಿಯ ಪ್ರಕಾರ ಓರ್ವ ಮಹಿಳೆ ಹಾಗೂ ಆಕೆಯ ಹಿಂದೆ ವ್ಯಕ್ತಿಯೊಬ್ಬ ಮೆಟ್ರೋ ನಿಲ್ದಾಣದಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ, ಇನ್ನೇನು ಮೆಟ್ರೋ ಬರಲಿದೆ ಎನ್ನುವಾಗ ಆ ವ್ಯಕ್ತಿ ಮಹಿಳೆಯನ್ನು ಎಳೆದುಕೊಂಡು ಮೆಟ್ರೋ ಹಳಿಯ ಮೇಲೆ ಹಾರುತ್ತಾನೆ. ಅಲ್ಲಿದ್ದವರು ಚೀರಾಡುತ್ತಾ ಓಡಿ ಹೋಗಿರುವುದನ್ನು ನೀವು ನೋಡಬಹುದು.
ಈ ಘಟನೆ ಶನಿವಾರ ನಡೆದಿದ್ದು, ಇದೀಗ ವೈರಲ್ ಆಗಿದೆ. ಹಾರುವುದಾದರೆ ಒಬ್ಬನೇ ಹಾರಬಹುದಿತ್ತು, ಆ ಮಹಿಳೆಯ ಜತೆಗೆ ಹಾರಿದ್ದು ಏಕೆ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ, ಆ ಮಹಿಳೆ ವ್ಯಕ್ತಿಯ ಪತ್ನಿ ಎಂದು ಹೇಳಲಾಗಿದೆ.

ಹಳದಿ ಸಲ್ವಾರ್ ಧರಿಸಿದ ಮಹಿಳೆಯ ಹಿಂದೆ ಪುರುಷ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಎದುರಿನಿಂದ ಮೆಟ್ರೋ ಬರುತ್ತಿದೆ. ಮೆಟ್ರೋ ಹತ್ತಿರ ಬರುತ್ತಿದ್ದಂತೆಯೇ ಪುರುಷ ಮಹಿಳೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಟ್ರ್ಯಾಕ್ ಮೇಲೆ ಜಿಗಿದಿದ್ದಾನೆ. ಟ್ರ್ಯಾಕ್ ಮೇಲೆ ಜಿಗಿದ ನಂತರ, ಮಹಿಳೆ ತನ್ನನ್ನು ಪುರುಷನ ಹಿಡಿತದಿಂದ ಬಿಡಿಸಿಕೊಳ್ಳಲು ಕಷ್ಟಪಟ್ಟು ಪ್ರಯತ್ನಿಸುತ್ತಾಳೆ, ಆದರೆ ವಿಫಲಗೊಳ್ಳುತ್ತಾಳೆ ಮತ್ತು ಮೆಟ್ರೋ ಅವರ ಮೇಲೆ ಚಲಿಸುತ್ತದೆ.

ಮತ್ತಷ್ಟು ಓದಿ: Viral Video: ಪಶ್ಚಿಮ ಬಂಗಾಳದ ಕಲಾಶಿಕ್ಷಕಿಯ ಕೈಚಳವನ್ನೊಮ್ಮೆ ನೋಡಿ

ಕೋಲ್ಕತ್ತಾದಲ್ಲಿ ನಡೆದ ಘಟನೆ
ಈ ವಿಡಿಯೋವನ್ನು ಚಂದನ್ ಪಾಂಡೆ ಎಂಬುವವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆ ಕೋಲ್ಕತ್ತಾದ ನೋವಾಪಾರಾ ಮೆಟ್ರೋ ನಿಲ್ದಾಣದಿಂದ ನಡೆದಿದೆ ಎಂದು ಅವರು ಹೇಳಿದ್ದಾರೆ. ಈ ಘಟನೆಯ ನಂತರ ಮಹಿಳೆ ಮತ್ತು ಹಾಗೂ ಆ ವ್ಯಕ್ತಿಗೆ ಏನಾಯಿತು ಎಂಬುದರ ಕುರಿತು ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ಅನೇಕ ಬಳಕೆದಾರರು ಘಟನೆಯನ್ನು ಖಂಡಿಸಿದ್ದಾರೆ ಮತ್ತು ವ್ಯಕ್ತಿಯನ್ನು ದೂಷಿಸಿದ್ದಾರೆ.

ಮಹಿಳೆ ಸಾಯುವ ಮನಸ್ಥಿತಿಯಲ್ಲಿರಲಿಲ್ಲ, ಆತನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಳು ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ಈ ಘಟನೆ ಮೊದಲ ನೋಟಕ್ಕೆ ಕೊಲೆಯಂತೆ ಕಾಣುತ್ತದೆ. ಮಹಿಳೆ ಟ್ರ್ಯಾಕ್‌ನಿಂದ ಓಡಿಹೋಗಲು ಪ್ರಯತ್ನಿಸುತ್ತಿದ್ದಳು, ಆದರೆ ವ್ಯಕ್ತಿ ಅವಳನ್ನು ಹಿಡಿದಿದ್ದಾನೆ. ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ, ಇದು ಪ್ರೀತಿಯಂತೆ ಕಾಣುತ್ತಿಲ್ಲ, ಇಲ್ಲಿ ಆ ವ್ಯಕ್ತಿ ಮಹಿಳೆಯನ್ನು ಬಲವಂತವಾಗಿ ಕರೆದುಕೊಂಡು ಜಿಗಿಯುತ್ತಿರುವುದನ್ನು ಕಾಣಬಹುದು. ಏನೇ ಆಗಿರಲಿ ನೀವು ಮೆಟ್ರೋಗಾಗಿ ಕಾಯುತ್ತಿರುವಾಗ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳಿತು.

ಶನಿವಾರದ ಘಟನೆ
ಶನಿವಾರ ಸಂಜೆ 6.30ಕ್ಕೆ ಈ ಘಟನೆ ನಡೆದಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇಬ್ಬರು ಟ್ರ್ಯಾಕ್​ ಮೇಲೆ ಹಾರಿದಾಗ, ಚಾಲಕ ತಕ್ಷಣ ಬ್ರೇಕ್ ಹಾಕಿ ಮೆಟ್ರೋವನ್ನು ನಿಲ್ಲಿಸಿದ್ದಾರೆ, ಬಳಿಕ ಮೆಟ್ರೋ ಸಿಬ್ಬಂದಿ ಅವರನ್ನು ರಕ್ಷಣೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

 

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ