Viral Video: ತನ್ನ ನೆರಳ ಕಂಡು ಹೆದರಿದ ಪುಟ್ಟ ಕಂದಮ್ಮನ ವಿಡಿಯೋ ಇಲ್ಲಿದೆ ನೋಡಿ

|

Updated on: Jan 04, 2024 | 12:17 PM

'ಹೇ.. ನನ್ನ ಬೆನ್ನಟ್ಟಬೇಡ..! ನನ್ನ ನೀನೇಕೆ ಹಿಂಬಾಲಿಸುತ್ತಿರುವೆ' ಎಂದು ಪುಟ್ಟ ಕಂದಮ್ಮ ಹೆದರಿ ಓಡಿಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಈ ಮಗುವಿನ ಮುಗ್ಧತೆ ನಿಮ್ಮ ಮುಖದಲ್ಲಿ ನಗು ಮೂಡಿಸುವುದಂತೂ ಖಂಡಿತಾ. ವಿಡಿಯೋ ಇಲ್ಲಿದೆ ನೋಡಿ.

Viral Video: ತನ್ನ ನೆರಳ ಕಂಡು ಹೆದರಿದ ಪುಟ್ಟ ಕಂದಮ್ಮನ ವಿಡಿಯೋ ಇಲ್ಲಿದೆ ನೋಡಿ
Viral Video
Image Credit source: Twitter
Follow us on

ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಪ್ರತೀ ದಿನ ಸಾಕಷ್ಟು ವಿಡಿಯೋಗಳು ವೈರಲ್​​ ಆಗುತ್ತಿರುತ್ತವೆ. ಕೆಲವೊಂದು ವಿಡಿಯೋಗಳು ನೆಟ್ಟಿಗರ ಮನಗೆಲ್ಲುತ್ತದೆ. ಇದೀಗಾ ಪುಟ್ಟ ಬಾಲಕಿಯ ವಿಡಿಯೋವೊಂದು ಲಕ್ಷಾಂತರ ನೆಟ್ಟಿಗರ ಮನಕದ್ದಿದೆ. ವಿಡಿಯೋದಲ್ಲಿ ಮಗು ತನ್ನ ನೆರಳನ್ನು ಮೊದಲ ಸಲ ನೋಡಿದಾಗ ಶಾಕ್ ಆಗುತ್ತದೆ. ಆ ನೆರಳನ್ನು ನೋಡಿ.. ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ ಎಂದು ಭಾವಿಸಿ ತನ್ನ ನೆರಳಿಗೆ ಹೆದರಿ ಓಡಿಹೋಗುತ್ತದೆ. ಮಗುವಿನ ಮುಗ್ಧತೆಯನ್ನು ನೋಡಿ ನಿಮ್ಮ ಮುಖದಲ್ಲಿ ನಗು ಮೂಡಿಸುವುದಂತೂ ಖಂಡಿತಾ.

ವಿಡಿಯೋದಲ್ಲಿ ಮಗು ನೆರಳನ್ನು ಕಂಡು ಓಡಿಹೋಗುತ್ತಿರುವುದನ್ನು ಕಾಣಬಹುದು. ಜೊತೆಗೆ ತನ್ನನ್ನು ಯಾರೋ ಹಿಂದೆಯಿಂದ ಹಿಂಬಾಲಿಸಿಕೊಂಡು ಬರುತ್ತಿದ್ದಾರೆ ಎಂದು ಮಗು ಹೇಳುತ್ತಿರುವುದನ್ನು ಕಾಣಬಹುದು. ವಿಡಿಯೋದ ಕೊನೆಯಲ್ಲಿ ಮಗು ಹೆದರಿ ಓಡಿಹೋಗಿ ಬೀಳುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ನಿಮ್ಮ ಕಂಡು ಅನೇಕ ನೆಟ್ಟಿಗರು ‘ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದಂತಾಯಿತು’ ಎಂದು ಕಾಮೆಂಟ್​​​ನಲ್ಲಿ ಬರೆದುಕೊಂಡಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ:  ಕೇವಲ 15 ಸೆಕೆಂಡುಗಳಲ್ಲಿ ಕಾಡಿನೊಳಗೆ ಅಡಗಿರುವ ಜಿಂಕೆಯನ್ನು ಗುರುತಿಸಿ

ಈ ತಮಾಷೆಯ ವೀಡಿಯೊವನ್ನು @SadatayBOK ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅನೇಕ ಬಳಕೆದಾರರು ಈ ವೀಡಿಯೊಗೆ ತಮಾಷೆಯ ಕಾಮೆಂಟ್‌ಗಳನ್ನು ನೀಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ