ಸೈಬರ್ ಸೇಫ್​ ಟೀ; ಗೂಗಲ್​ ಇಂಡಿಯಾ ಝೊಮ್ಯಾಟೋ ಸೇರಿ ತಯಾರಿಸಿದ ‘ಚಹಾ’ ನಿಮಗಾಗಿ

| Updated By: ಶ್ರೀದೇವಿ ಕಳಸದ

Updated on: Feb 07, 2023 | 3:21 PM

Google : ನಿಮ್ಮ ಅಕೌಂಟ್​ ಸುರಕ್ಷಿತವಾಗಿ ಇರಬೇಕೆಂದರೆ ಎಂಥ ಪಾಸ್ವರ್ಡ್​ ಇರಬೇಕು. ಅದನ್ನು ಹೇಗೆ ರಚಿಸಬೇಕು ಎನ್ನುವ ಸರಳ ಮಾದರಿಯನ್ನು ಈ ಎರಡೂ ಕಂಪೆನಿಗಳು ಚಹಾ ಪಾಕವಿಧಾನದ ಮೂಲಕ ತಿಳಿಸಿವೆ. ನೋಡಿ ವಿಡಿಯೋ.

ಸೈಬರ್ ಸೇಫ್​ ಟೀ; ಗೂಗಲ್​ ಇಂಡಿಯಾ ಝೊಮ್ಯಾಟೋ ಸೇರಿ ತಯಾರಿಸಿದ ‘ಚಹಾ’ ನಿಮಗಾಗಿ
ಸೈಬರ್​ ಸೇಫ್​ ಟೀ
Follow us on

Viral Video : ನಮ್ಮ ಇಡೀ ಜೀವನವೇ ಡಿಜಿಟಲ್​ನೊಳಗೆ ಬೆಸೆದುಕೊಂಡಿದೆ. ಹೀಗಿರುವಾಗ ಸೈಬರ್ ಸೇಫ್ಟಿ ಬಗ್ಗೆ ಆತಂಕ ಆಗಿದಿರುತ್ತದೆಯೇ? ನೂರಾಎಂಟು ಪಾಸ್​ವರ್ಡ್​ಗಳನ್ನು ಸೃಷ್ಟಿಸುವುದು, ನೆನಪಿಟ್ಟುಕೊಳ್ಳುವುದು ಇದೆಲ್ಲಾ ಎಷ್ಟು ತಲೆನೋವಿನ ಕೆಲಸ. ಒಂದು ಮಾಡಲು ಹೋಗಿ ಇನ್ನೊಂದೇನೋ ಆಗುತ್ತಲೇ ಇರುತ್ತದೆ. ಇದೆಲ್ಲದೆ ಮಧ್ಯೆ ನಮ್ಮ ಅಕೌಂಟುಗಳು ಎಷ್ಟು ಸುರಕ್ಷಿತವಾಗಿವೆ ಎಂಬ ಆತಂಕ ಸದಾ ಕಾಡುತ್ತಲೇ ಇರುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಗೂಗಲ್​ ಇಂಡಿಯಾ, ಝೊಮ್ಯಾಟೋ ಸೇರಿ ‘ಸೈಬರ್ ಸೇಫ್ ಟೀ’ ಪಾಕವಿಧಾನದ ವಿಡಿಯೋ ಇದೀಗ ವೈರಲ್ ಆಗಿದೆ.

ಇಂದು ಎಲ್ಲವೂ ಒಂದು ಕ್ಲಿಕ್​ನಲ್ಲಿ! ಆದ್ದರಿಂದ ಸುರಕ್ಷತೆಗಾಗಿ ಭದ್ರವಾದ ಪಾಸ್​ವರ್ಡ್ ಸೃಷ್ಟಿಸುವುದು ಅತ್ಯಂತ ಅವಶ್ಯಕ. ಇದನ್ನು ಬರಹದಲ್ಲಿ, ಮಾತಿನಲ್ಲಿ ಹೇಳಿದರೆ ಸಾಕೆ? ಈಗಿನದು ದೃಶ್ಯಮಾಧ್ಯಮ. ಈ ಮಾಧ್ಯಮದ ಮೂಲಕ ಹೇಳಿದರೇ ಹೆಚ್ಚು ಜನರಿಗೆ ತಲುಪುತ್ತದೆ ಮತ್ತು ತಿಳಿಯುತ್ತದೆ ಎಂಬ ನಂಬಿಕೆಯಲ್ಲಿ ಗೂಗಲ್​ ಮತ್ತು ಝೊಮ್ಯಾಟೋ ಈ ಪರಿಕಲ್ಪನೆ ರೂಪಿಸಿರುವ ಸಾಧ್ಯತೆ ಇದೆ.

ಇದನ್ನೂ ಓದಿ : ನಿನ್ನನ್ನು ಬಿಟ್ಟುಕೊಡಲೊಲ್ಲೇ ಅಕ್ಕಾ; ವೈರಲ್ ಆಗುತ್ತಿರುವ ನಾಯಿಯ ಈ ವಿಡಿಯೋ

ನಿನ್ನೆ ಅಪ್​ಲೋಡ್ ಮಾಡಲಾದ ಈ ವಿಡಿಯೋ ಅನ್ನು ಈತನಕ 26,000 ಜನರು ಇಷ್ಟಪಟ್ಟಿದ್ದಾರೆ. ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಸಾಕಷ್ಟು ಜನರು ಸೃಜನಶೀಲವಾಗಿ ಈ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಪಾಸ್ವರ್ಡ್​ ಅನ್ನು ಊಟ,  ತಿಂಡಿಯಂತೆ ಭಾವಿಸಿ. ಅದನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದಿದ್ದಾರೆ ಒಬ್ಬರು. ಗ್ರೀನ್​ಟೀ ಕುಡಿಯುವವರು ವೀಕ್​ ಪಾಸ್ವರ್ಡ್​ ಹೊಂದಿರುತ್ತಾರೆ ಹಾಗಿದ್ದರೆ ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ : ಪುಟ್ಟಾ, ನಾವೇ ಹೀಗೆ ನಿಧಾನಕ್ಕೆ ರಸ್ತೆ ದಾಟಬೇಕು; ಆನೆಯಮ್ಮನ ಪ್ರಾತ್ಯಕ್ಷಿಕೆ ವಿಡಿಯೋ ವೈರಲ್

ಕಾಫಿಪ್ರಿಯರಿಗೆ ಈ ಪಾಸ್​ವರ್ಡ್ ​ಅಮಾನ್ಯ ಎಂದು ಒಬ್ಬರು. ನೀವು ತಯಾರಿಸಿದ ಈ ರೆಸಿಪಿ ಕೇವಲ ಭಾರತೀಯರಿಗೆ ಮಾತ್ರ ಎಂದು ಮತ್ತೊಬ್ಬರು. ಬೆಸ್ಟ್​ ಮಾರ್ಕೆಟಿಂಗ್​ ಅವಾರ್ಡ್​ ಝೊಮ್ಯಾಟೋಗೆ ಎಂದಿದ್ದಾರೆ ಇನ್ನೂ ಒಬ್ಬರು. ನೀವಿಬ್ಬರೂ ಸೇರಿ ಒಂದು ಕೋರ್ಸ್ ಅನ್ನೇ ಶುರುಮಾಡಿ ಇದಕ್ಕಾಗಿ ಎಂದು ಮತ್ತೊಬ್ಬರು ಹೇಳಿದ್ದಾರೆ.

ಈ ವಿಡಿಯೋ ನೋಡಿದ ನೀವು ನಿಮ್ಮ ಪಾಸ್ವರ್ಡ್​ ರೀಸೆಟ್ ಮಾಡಲು ಶುರು ಮಾಡುವಿರೋ ಹೇಗೆ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ