Viral Video : ಮಕ್ಕಳು ಒಂದು ವರ್ಷದವರಾಗುತ್ತಿದ್ದಂತೆ ಅವರಿಂದ ಗೋಡೆಯನ್ನು ರಕ್ಷಿಸುವುದೇ ದೊಡ್ಡ ಕೆಲಸವೆಂಬಂತೆ ಪೋಷಕರು ಚಿಂತೆಗೊಳಗಾಗುತ್ತಾರೆ. ಆದರೆ ವೈಜ್ಞಾನಿಕ ಹಿನ್ನೆಲೆಯಲ್ಲಿ ಮಕ್ಕಳನ್ನು ಗೀಚುವಿಕೆಯಿಂದ (Scribbling) ತಡೆಯುವುದು ತಪ್ಪು. ಗೀಚುವಿಕೆಗೂ ಮಕ್ಕಳ ಮೆದುಳಿನ ವಿಕಾಸಕ್ಕೂ ಪರಸ್ಪರ ಸಂಬಂಧವಿದೆ ಎನ್ನತ್ತದೆ ಮನೋವಿಜ್ಞಾನ. ಗೀಚುವಿಕೆಯಿಂದ ಉಂಟಾಗುವ ಅತೀ ಸೂಕ್ಷ್ಮ ಕರ್ಕಶ ಶಬ್ದವು ಮಕ್ಕಳ ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ಆದರೂ ಗೋಡೆಯ ಮೇಲೆ ಮಕ್ಕಳು ಗೀಚಿದಾಗ ಎಂಥ ಪೋಷಕರಿಗೂ ಕಿರಿಕಿರಿಯೇ. ಆದರೆ ಇದನ್ನೇ ಕಲಾತ್ಮಕ ದೃಷ್ಟಿಯಿಂದ ನೋಡುವುದನ್ನು ಬೆಳೆಸಿಕೊಂಡಲ್ಲಿ ಮಕ್ಕಳೊಂದಿಗೆ ಪೋಷಕರು ಖುಷಿಪಡುತ್ತಾರೆ. ಸೃಜನಶೀಲತೆಯ ಹುಟ್ಟು ಇಲ್ಲಿಂದಲೇ ಶುರುವಾಗುತ್ತದೆ.
Dad supports his daughter… and great art. pic.twitter.com/d3F6AXdlxB
ಇದನ್ನೂ ಓದಿ— Figen (@TheFigen_) January 18, 2023
ಈ ವಿಡಿಯೋದಲ್ಲಿ ಮಗಳು ಗೋಡೆ ಮೇಲೆ ಪುಟ್ಟದಾಗಿ ಏನೋ ಚಿತ್ರ ಬಿಡಿಸಿದ್ದಾಳೆ. ಆದರೆ ಕೋಪಗೊಳ್ಳದ ಕಲಾವಿದ ತಂದೆ ಇದನ್ನು ಅಚ್ಚರಿಪಡುವಂತೆ ಮಾರ್ಪಾಡು ಮಾಡಿದ್ಧಾನೆ. ಈತನಕ 11 ಮಿಲಿಯನ್ ಜನರು ಈ ವಿಡಿಯೋ ನೋಡಿದ್ದಾರೆ. 90,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಶಭಾಷ್ ಅಪ್ಪಾ, ಮನೆಗೊಬ್ಬರು ಇಂಥ ಒಬ್ಬ ಅಪ್ಪ ಇದ್ದರೆ ಸಾಕು, ಮಕ್ಕಳ ಮನಸು ಸೃಜನಶೀಲತೆಯಿಂದ ಅರಳತೊಡಗುತ್ತದೆ ಎಂದು ಬೆನ್ನು ತಟ್ಟಿದ್ದಾರೆ.
ಇದನ್ನೂ ಓದಿ : ಸೀರೆ ಉಟ್ಟುಕೊಂಡು ಪ್ಯಾರಾಗ್ಲೈಡಿಂಗ್ ಮಾಡಿದ 80ರ ಅಜ್ಜಿಯ ವಿಡಿಯೋ ವೈರಲ್
ಛೆ ನನಗೂ ಇಂಥ ಅಪ್ಪ ಇರಬೇಕಿತ್ತು. ಬಾಲ್ಯದಲ್ಲಿ ಸಾಕಷ್ಟು ಹೊಡೆತ ತಿಂದಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ಮಕ್ಕಳನ್ನು ಇಂಥ ಗೀಚುವಿಕೆಯಿಂದ ತಡೆಯುವುದಕ್ಕಿಂತ ಗೋಡೆಗಳಿಗೆ ಪ್ಲಾಸ್ಟರ್ ಆಫ್ ಪ್ಯಾರೀಸ್ನ ಶೀಟುಗಳನ್ನು ಅಂಟಿಸುವುದು ಒಳ್ಳೆಯದು ಎಂದಿದ್ಧಾರೆ ಹಲವರು. ಈ ಉಪಾಯ ಬಹಳ ಮುದ್ಧಾಗಿದೆ ಎಂದು ಅನೇಕರು ಹೇಳಿದ್ದಾರೆ.
ಈ ವಿಡಿಯೋ ನೋಡಿದ ಮೇಲೆ ನೀವು ಕೂಡ ಇಂಥ ಉಪಾಯಗಳನ್ನು ಕಂಡುಕೊಳ್ಳಬಹುದಲ್ಲವೆ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 5:02 pm, Sat, 21 January 23