Viral Video: ‘ನಾನು ಎರಡು ವರ್ಷದವಳಿದ್ಧಾಗ ನನ್ನ ಅಮ್ಮ ನನ್ನನ್ನು ಮನೆಯನ್ನೂ ಬಿಟ್ಟು ಹೊರಟುಹೋದಳು. ಅಪ್ಪ ಮತ್ತೊಂದು ಮದುವೆಯಾದ. ನಾನು ಏಳನೇ ಕ್ಲಾಸಿಗೆ ಬರುತ್ತಿದ್ದಂತೆ ಅಪ್ಪ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾರಂಭಿಸಿದ. ಪ್ರತೀ ರಾತ್ರಿ ನನ್ನ ಕೋಣೆಗೆ ಬರುತ್ತಿದ್ದ. ಇದು ಕೆಲ ಕಾಲ ಹಾಗೆಯೇ ಮುಂದುವರಿಯಿತು. ಕೊನೆಗೆ ನಾನಿದನ್ನು ಕುಟುಂಬದೆದುರು ಹೇಳಬೇಕಾಯಿತು. ಆದರೆ ಆಗ ಅವನು ತನ್ನ ತಪ್ಪನ್ನು ಒಪ್ಪಿಕೊಳ್ಳಲಿಲ್ಲ. ನಂತರ ಮಲತಾಯಿಯೂ (Stepmother) ಕಿರುಕುಳ ಕೊಡಲಾರಂಭಿಸಿದಳು. ಆಗ ನಾನು ಖಿನ್ನತೆಗೆ ಜಾರಿದೆ. ಎರಡು ವರ್ಷಗಳ ನಂತರ ನಾನು ಆ ಮನೆಯನ್ನು ಬಿಟ್ಟು ಹೊರಬಂದೆ. ಛಿದ್ರಗೊಂಡ ನನ್ನ ಬದುಕನ್ನು ಚೆನ್ನಾಗಿ ಕಟ್ಟಿಕೊಳ್ಳಲೇಬೇಕೆಂದು ನಿರ್ಧರಿಸಿ ತಲೆ ಎತ್ತಿ ನಿಂತೆ. ಕಷ್ಟಪಟ್ಟು ಪಿಎಚ್.ಡಿ ಪದವಿ ಪಡೆದೆ. ನಾನೀಗ ಪ್ರೊಫೆಸರ್. ನನ್ನ ಗೆಳೆಯ ಮಯೂರ ರೂಪೇಶನೊಂದಿಗೆ ಬಾಳಸಂಗಾತಿಯಾಗಲಿದ್ಧಾನೆ.’ ಪ್ರೊ. ರಿದ್ಧಿ ರಾಥೋರ್, ರಾಜಕೋಟ್
ಇದನ್ನೂ ಓದಿ : Viral Video: ಈ ವಿಡಿಯೋ ಖಂಡಿತ ಮುಂಬೈಯದ್ದೇ! ಎಂದ ನೆಟ್ಟಿಗರು, ನೀವೇನು ಹೇಳುತ್ತೀರಿ?
ಈ ವಿಡಿಯೋ ಅನ್ನು officialpeopleofindia ಇನ್ಸ್ಟಾಗ್ರಾಂ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ. 3 ಗಂಟೆಗಳ ಹಿಂದೆ ಮಾಡಿದ ಈ ಪೋಸ್ಟ್ ಅನ್ನು ಈತನಕ ಸುಮಾರು 42,000ಕ್ಕಿಂತಲೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ರಿದ್ಧಿಯ ಬದುಕಿನ ಬಗ್ಗೆ ಮರುಕ ಮತ್ತು ಆಕೆಯ ದಿಟ್ಟತನದ ಬಗ್ಗೆ ಶ್ಲಾಘಿಸಿದ್ದಾರೆ.
ನೀವು ಇನ್ನೂ ಅವರನ್ನು “ನನ್ನ ತಂದೆ” ಎಂದು ಕರೆಯುತ್ತೀರಿ! ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದಿದ್ದಾರೆ ಒಬ್ಬರು. ದೇವರೇ, ನಿಮ್ಮನ್ನು ಬಿಗಿಯಾಗಿ ತಬ್ಬಿಕೊಳ್ಳಬೇಕು ಎನ್ನಿಸುತ್ತಿದೆ. ಎಂಥ ಧೈರ್ಯಶಾಲಿ ಮತ್ತು ಬುದ್ಧಿವಂತ ಹುಡುಗಿ ನೀವು. ಇಂಥ ಸಂದರ್ಭದಲ್ಲಿಯೂ ಪಿಎಚ್.ಡಿ ಪೂರ್ಣಗೊಳಿಸಿದ್ದೀರಿ ಎಂದರೆ! ನಿಮಗೆ ಶುಭವಾಗಲಿ ಎಂದಿದ್ದಾರೆ ಇನ್ನೊಬ್ಬರು. ನಿಮ್ಮ ಆಘಾತವನ್ನು ಮಾಯವಾಗಿಸಲು ಸಾಧ್ಯವಿಲ್ಲ. ಆದರೆ ನಿಮ್ಮ ಭವಿಸ್ಯ ಉಜ್ವಲವಾಗಿದೆ. ನಿಮ್ಮನ್ನು ಗೌರವಿಸುವ ಪ್ರೀತಿಸುವ ಜನರಿಂದ ನೀವು ಆವರಿಸಲ್ಪಟ್ಟಿದ್ದೀರಿ, ಅದುವೇ ಶ್ರೀರಕ್ಷೆ ನಿಮಗೆ ಎಂದಿದ್ದಾರೆ ಮತ್ತೊಬ್ಬರು.
ಇದು ತುಂಬಾ ಹೃದಯ ವಿದ್ರಾವಕವಾಗಿದೆ, ಒಬ್ಬ ತಂದೆ ಹೀಗೆ ನಡದುಕೊಳ್ಳಬಲ್ಲರೆ? ಊಹಿಸಿಕೊಳ್ಳಲು ಅಸಾಧ್ಯ. ನಿಮಗೆ ಹೆಚ್ಚು ಶಕ್ತಿಯನ್ನು ದೇವರು ನೀಡಲಿ ಎಂದಿದ್ದಾರೆ ಒಬ್ಬರು. ನೀವು ಹೀಗೆ ತಲೆ ಎತ್ತಿ ನಿಂತಿದ್ದಕ್ಕೇ ಎಲ್ಲವೂ ಸಾಧ್ಯವಾಯಿತು. ಅನೇಕ ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ನರಳುತ್ತಿದ್ದಾರೆ. ಅವರಿಗೂ ನಿಮ್ಮಂತೆ ಶಕ್ತಿ ಬರಲಿ ಎಂದಿದ್ದಾರೆ ಅನೇಕರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 4:50 pm, Wed, 27 September 23