ಭಾರತದ ಮಹಿಳೆಯ ಸಾಂಪ್ರದಾಯಿಕ ಉಡುಗೆಯಾದ ಸೀರೆಗೆ ಮರುಳಾಗದವರೇ ಇಲ್ಲ. ಬೇರೆ ದೇಶಗಳಲ್ಲೂ ಸೀರೆಯನ್ನು ಆಧುನಿಕ ಫ್ಯಾಷನ್ ಆಗಿ ಬಳಸಲಾಗುತ್ತಿದೆ. ಸೀರೆಯನ್ನು ದೇಸಿ ಸ್ಟೈಲ್ನಲ್ಲಿ ಬೇಕಾದರೂ ಉಡಬಹುದು, ಮಾಡರ್ನ್ ಆಗಿಯೂ ಧರಿಸಬಹುದು. ಅನಾದಿ ಕಾಲದಿಂದಲೂ ಸೀರೆಯನ್ನು ಭಾರತೀಯರು ಸಾಂಪ್ರದಾಯಿಕವಾಗಿ ಉಡುತ್ತಿದ್ದಾರೆ. ಆದರೆ, ಸೀರೆಯುಟ್ಟ ಮಹಿಳೆಯೊಬ್ಬರಿಗೆ ರೆಸ್ಟೋರೆಂಟ್ ಒಂದರಲ್ಲಿ ಪ್ರವೇಶ ನಿರಾಕರಿಸಿದ ಘಟನೆಯೊಂದು ನಡೆದಿದೆ. ಸೀರೆಯುಟ್ಟಿದ್ದಾರೆ ಎಂಬ ಒಂದೇ ಕಾರಣಕ್ಕೆ ಮಹಿಳೆಗೆ ರೆಸ್ಟೋರೆಂಟ್ನೊಳಗೆ ಎಂಟ್ರಿಯಾಗಲು ಬಿಡದಿರುವ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆಗೂ ಕಾರಣವಾಗಿದೆ.
ಹಾಗಂತ ಇದು ನಡೆದಿರುವುದು ಬೇರಾವುದೋ ದೇಶದಲ್ಲಲ್ಲ. ಬೇರೆ ದೇಶದ ಮಾಲ್, ವಿಮಾನ ನಿಲ್ದಾಣದಲ್ಲಿ ಕೆಲವೆಡೆ ಸೀರೆಯುಟ್ಟವರನ್ನು ತಪಾಸಣೆ ಮಾಡಿದ ಘಟನೆಗಳು ಈ ಹಿಂದೆ ನಡೆದಿವೆ. ಸೀರೆಯೊಳಗೆ ಏನಾದರೂ ವಸ್ತುವನ್ನು ಕದ್ದು ಸಾಗಿಸಬಹುದು ಎಂಬ ಅನುಮಾನ ಈ ನಡೆಗೆ ಕಾರಣ. ಆದರೆ, ಈ ಬಾರಿ ದಕ್ಷಿಣ ದೆಹಲಿಯ ರೆಸ್ಟೋರೆಂಟ್ನಲ್ಲಿ ಸೀರೆಯುಟ್ಟ ಮಹಿಳೆಗೆ ನೋ ಎಂಟ್ರಿ ಎನ್ನುವ ಮೂಲಕ ಸಿಬ್ಬಂದಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Saree is not allowed in Aquila restaurant as Indian Saree is now not an smart outfit.What is the concrete definition of Smart outfit plz tell me @AmitShah @HardeepSPuri @CPDelhi @NCWIndia
Please define smart outfit so I will stop wearing saree @PMishra_Journo #lovesaree pic.twitter.com/c9nsXNJOAO— anita choudhary (@anitachoudhary) September 20, 2021
ದೆಹಲಿಯ ಅನ್ಸಾಲ್ ಪ್ಲಾಜಾದಲ್ಲಿರುವ ರೆಸ್ಟೋರೆಂಟ್- ಬಾರ್ ಒಂದಕ್ಕೆ ಸೀರೆಯುಟ್ಟ ಮಹಿಳೆಗೆ ಪ್ರವೇಶ ನಿರಾಕರಿಸಲಾಗಿದೆ. ಸ್ಮಾರ್ಟ್ ಕ್ಯಾಷುವಲ್ ಡ್ರೆಸ್ಕೋಡ್ ಅನ್ನು ಅನುಸರಿಸಿಲ್ಲ ಎಂಬ ಕಾರಣಕ್ಕೆ ಸೀರೆಯುಟ್ಟ ಮಹಿಳೆಗೆ ಆ ರೆಸ್ಟೋರೆಂಟ್ ಒಳಗೆ ಹೋಗಲು ಅವಕಾಶ ಕೊಟ್ಟಿಲ್ಲ. ಸೀರೆ ಸ್ಮಾರ್ಟ್ ಔಟ್ಫಿಟ್ ಅಲ್ಲ ಎಂದಿರುವ ರೆಸ್ಟೋರೆಂಟ್ ಸಿಬ್ಬಂದಿಯ ವಿಡಿಯೋ ವೈರಲ್ ಆಗಿದ್ದು, ಹಲವರು ಈ ವರ್ತನೆಗೆ ಕಿಡಿ ಕಾರಿದ್ದಾರೆ.
ಭಾರತದಲ್ಲಿಯೇ ಸೀರೆಗೆ ಮಾನ್ಯತೆ ಇಲ್ಲವೆಂದರೆ ಹೇಗೆ? ಎಂದು ಹಲವು ಮಹಿಳೆಯರು ಇನ್ಸ್ಟಾಗ್ರಾಂನಲ್ಲಿ ಆಕ್ಷೇಪ ಹೊರಹಾಕಿದ್ದಾರೆ. ಟ್ವಿಟ್ಟರ್ನಲ್ಲೂ ಈ ವಿಡಿಯೋ ವೈರಲ್ ಆಗಿದೆ. ಸೀರೆಯುಟ್ಟ ಮಹಿಳೆ ಈ ವಿಡಿಯೋವನ್ನು ಹಂಚಿಕೊಂಡಿದ್ದು, ‘ನನಗೆ ಸೀರೆಯೆಂದರೆ ಇಷ್ಟ. ಹೀಗಾಗಿ, ಸೀರೆಯುಟ್ಟು ರೆಸ್ಟೋರೆಂಟ್ಗೆ ಹೋಗಿದ್ದೆ. ಇಲ್ಲಿಯವರೆಗೂ ನಾನು ಸೀರೆ ಬಹಳ ಗೌರವಪೂರ್ವಕವಾದ, ಡೀಸೆಂಟ್ ಆದ ಉಡುಗೆ ಎಂದುಕೊಂಡಿದ್ದೆ. ಆದರೆ, ರೆಸ್ಟೋರೆಂಟ್ ಸಿಬ್ಬಂದಿ ನನ್ನ ಕಣ್ಣು ತೆರೆಸಿದರು ಎಂದು ಆಕೆ ಬೇಸರ ಹೊರಹಾಕಿದ್ದಾರೆ.
Legally perhaps this restaurant is safe as a private place can impose their dress code on patrons.However the fact that #saree is not considered appropriate attire for any place in our country is disturbing,to say the least. We have a messed up concept of what’s “modern” & “cool” https://t.co/Q7W4E5m4pE
— Smita Barooah (@smitabarooah) September 22, 2021
ಇದನ್ನೂ ಓದಿ: Viral Video: ಬೇಕರಿ ತಿಂಡಿ ಪ್ರಿಯರೇ ಎಚ್ಚರ; ಈ ಶಾಕಿಂಗ್ ವಿಡಿಯೋ ನೋಡಿದರೆ ರಸ್ಕ್ ಮುಟ್ಟೋಕೂ ಅಸಹ್ಯ ಪಡ್ತೀರ!
(Viral Video Delhi restaurant denies entry to woman wearing saree women says assault on Indian Culture)