Viral Video: ಬೆಂಗಳೂರಿನ ಟ್ರಾಫಿಕ್​ನಲ್ಲಿ ಕಾರಿನ ಟಾಪ್​ನಲ್ಲಿ ಕುಳಿತ ನಾಯಿಯ ವಿಡಿಯೋ ವೈರಲ್; ನೆಟ್ಟಿಗರ ಆಕ್ರೋಶ

|

Updated on: Feb 07, 2023 | 6:41 PM

Bengaluru News: ಬೆಂಗಳೂರಿನಲ್ಲಿ ಚಲಿಸುವ ಕಾರಿನ ಸನ್​ರೂಫ್ ಮೇಲೆ ನಾಯಿಯೊಂದು ಕುಳಿತಿರುವ ವಿಡಿಯೋ ಇಂಟರ್​ನೆಟ್​ನಲ್ಲಿ ವೈರಲ್ ಆಗಿದೆ.

Viral Video: ಬೆಂಗಳೂರಿನ ಟ್ರಾಫಿಕ್​ನಲ್ಲಿ ಕಾರಿನ ಟಾಪ್​ನಲ್ಲಿ ಕುಳಿತ ನಾಯಿಯ ವಿಡಿಯೋ ವೈರಲ್; ನೆಟ್ಟಿಗರ ಆಕ್ರೋಶ
ಬೆಂಗಳೂರಿನಲ್ಲಿ ಕಾರಿನ ಟಾಪ್​ನಲ್ಲಿ ಕುಳಿತಿರುವ ನಾಯಿ
Follow us on

ಬೆಂಗಳೂರು: ಸಾಮಾಜಿಕ ಮಾಧ್ಯಮಗಳು (Social Media) ಈಗ ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿದೆ. ಪ್ರತಿದಿನ ನಾವು ನಮ್ಮ ಮೊಬೈಲ್ ಫೋನ್ (Mobile) ಅಥವಾ ಕಂಪ್ಯೂಟರ್ ಸ್ಕ್ರೀನ್​ನಲ್ಲಿ ವೈರಲ್ ವಿಡಿಯೋಗಳನ್ನು (Viral Video)  ನೋಡುತ್ತಿರುತ್ತೇವೆ. ಇವುಗಳಲ್ಲಿ ಕೆಲವು ವಿಡಿಯೋಗಳು ನಮ್ಮ ಮುಖದಲ್ಲಿ ನಗುವನ್ನು ಮೂಡಿಸಿದರೆ, ಇನ್ನು ಕೆಲವು ಜನರನ್ನು ಕೆರಳಿಸುತ್ತವೆ. ಜನರು ಯಾವುದೇ ನಿಯಮಗಳನ್ನು ಉಲ್ಲಂಘಿಸುವುದನ್ನು ಕಂಡರೆ ಅದರ ಫೋಟೋ ಮತ್ತು ವೀಡಿಯೊಗಳನ್ನು ತೆಗೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾರೆ. ಇದರಿಂದ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸುಲಭವಾಗುತ್ತಿದೆ. ಅದೇ ರೀತಿಯ ಘಟನೆಯೊಂದು ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಬೆಂಗಳೂರಿನಲ್ಲಿ ಚಲಿಸುವ ಕಾರಿನ ಸನ್​ರೂಫ್ ಮೇಲೆ ನಾಯಿಯೊಂದು ಕುಳಿತಿರುವ ವಿಡಿಯೋ ಇಂಟರ್​ನೆಟ್​ನಲ್ಲಿ ವೈರಲ್ ಆಗಿದೆ. ಕಾರಿನ ಟಾಪ್​ನಲ್ಲಿ ನಾಯಿ ಕುಳಿತಿರುವ ವಿಡಿಯೋವನ್ನು ಹಿಂದಿನ ವಾಹನದಲ್ಲಿದ್ದ ಕೆಲವರು ರೆಕಾರ್ಡ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ರಸ್ತೆಯಲ್ಲಿ ಮೂರ್ಛೆ ಹೋಗಿದ್ದ ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್

ಈ ವಿಡಿಯೋವನ್ನು Forever Bengaluru ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊವನ್ನು ಕೆಲವು ದಿನಗಳ ಹಿಂದೆ ಈ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ ಆದರೆ, ಈ ಘಟನೆ ನಿಜವಾಗಿ ಯಾವಾಗ ಸಂಭವಿಸಿತು ಎಂಬುದು ಸ್ಪಷ್ಟವಾಗಿಲ್ಲ. ಇದು ಹಳೆಯ ವಿಡಿಯೋವಾಗಿರುವ ಸಾಧ್ಯತೆಯೂ ಇದೆ. ಆದರೆ ಈ ವಿಡಿಯೋ ವೈರಲ್ ಆಗಿದ್ದು, ಇಂಟರ್ನೆಟ್ ಬಳಕೆದಾರರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೀಡಿಯೊದಲ್ಲಿ ಫೋರ್ಡ್ ಐಕಾನ್ ಸೆಡಾನ್ ಟಾಪ್​ನಲ್ಲಿ ನಿಂತಿರುವ ನಾಯಿಯೊಂದಿಗೆ ಕಾರಿನಲ್ಲಿ ಹೋಗುತ್ತಿರುವುದನ್ನು ಕಾಣಬಹುದು. ಹಿಂದೆ ಮತ್ತೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. 71 ಸಾವಿರಕ್ಕೂ ಹೆಚ್ಚು ಜನರು ಈಗಾಗಲೇ ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ಈ ವಿಡಿಯೋಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: 3 ದಿನಗಳ ಹಿಂದೆಯೇ ಆತ್ಮಹತ್ಯೆ‌ ಮಾಡಿಕೊಂಡಿದ್ದ ವ್ಯಕ್ತಿಯ ಸೆಲ್ಪೀ ವಿಡಿಯೋ ವೈರಲ್

ಚಲಿಸುತ್ತಿರುವ ಕಾರಿನ ಮೇಲೆ ನಾಯಿ ಏಕೆ ಕುಳಿತಿದೆ ಎಂಬುದಕ್ಕೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ತಮ್ಮ ಮಜಕ್ಕಾಗಿ ನಾಯಿಯನ್ನು ಈ ರೀತಿ ಬಳಸಿಕೊಳ್ಳುತ್ತಿರುವುದಕ್ಕೆ ಶ್ವಾನ ಪ್ರಿಯರು ಕೋಪಗೊಂಡಿದ್ದಾರೆ. ನಾಯಿಗೆ ಗಾಬರಿಯಾಗಿ ರಸ್ತೆಗೆ ಹಾರಿದರೆ ಏನು ಗತಿ? ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ