Viral Video : ಚಾಕು, ಕತ್ತರಿ, ಟ್ರಿಮ್ಮರ್ ಇದೆಲ್ಲ ಬೇಡವಂತೆ. ಒಂದು ಚಮಚ ಸಾಕು ನನ್ನ ಮಗನ ಕೂದಲು ಕತ್ತರಿಸಲು, ನೋಡಿ ಹೇಗೆ ಮ್ಯಾಜಿಕ್ ಮಾಡುತ್ತೇನೆ ಎನ್ನುತ್ತಿದ್ದಾನೆ ಈ ಅಪ್ಪ. ನೆಟ್ಟಿಗರು ಕಣ್ಣಕಣ್ಣು ಬಿಟ್ಟುಕೊಂಡು ಒಮ್ಮೆ ಚಮಚವನ್ನು ಇನ್ನೊಮ್ಮೆ ತಮ್ಮ ತಲೆಯನ್ನು ಸವರಿಕೊಳ್ಳುತ್ತ ಕುಳಿತಿದ್ದಾರೆ. ಈ ಅಪ್ಪ ಮಗ ಅಮೆರಿಕದಲ್ಲಿ ವಾಸಿಸುತ್ತಿದ್ದು, ಮನೆಯಲ್ಲಿ ಕುಳಿತುಕೊಂಡೇ ಜಗತ್ತಿನ ಮಂದಿ ತಮ್ಮತ್ತ ಹೊರಳಿ ನೋಡುವ ಹಾಗೆ ಮ್ಯಾಜಿಕ್ ಮಾಡಿದ್ದಾರೆ.
ಚಮಚದ ಏಣಿನಿಂದ ಈತ ಸರಾಗವಾಗಿ ಮಗನ ಕೂದಲನ್ನು ಕತ್ತರಿಸುವುದನ್ನು ನೋಡುತ್ತಿದ್ದರೆ ಅದು ಚಮಚ ಎಂದು ನಂಬಲು ಆಗುವುದೇ ಇಲ್ಲ. ಐದು ದಿನಗಳ ಹಿಂದೆ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು ಲಕ್ಷಾಂತರ ಜನರು ಇಷ್ಟಪಟ್ಟಿದ್ದಾರೆ. 6 ಮಿಲಿಯನ್ ಜನರು ನೋಡಿದ್ದಾರೆ. ತಂದೆ ಈ ಅದ್ಭುತ ಕೌಶಲ್ಯವನ್ನು ಶ್ಲಾಘಿಸಿದ್ದಾರೆ. ಅನೇಕರು ಈ ಚಮಚವನ್ನು ಅವನು ಹರಿತಗೊಳಿಸಿರುವ ಸಾಧ್ಯತೆ ಇದೆ ಎಂದಿದ್ದಾರೆ. ಇಲ್ಲಾ ಇದರಲ್ಲಿ ಏನೋ ತಂತ್ರವಿದೆ, ಸುಲಭವಾಗಿ ಕಣ್ಣಿಗೆ ಕಾಣದು ಎಂದಿದ್ದಾರೆ ಕೆಲವರು. ಇಲ್ಲ ಇದೊಂದು ಪ್ರತಿಭೆ ಎಂದಿದ್ದಾರೆ ಇನ್ನೂ ಕೆಲವರು.
ಇದನ್ನೂ ಓದಿ : 1963ರಲ್ಲಿ ಪ್ರಕಟವಾದ ಈ ಲೇಖನದಲ್ಲಿ ಇಂದಿನ ಸ್ಮಾರ್ಟ್ಫೋನ್ಗಳ ಬಗ್ಗೆ ಉಲ್ಲೇಖ
ಇದನ್ನು ಹೇಗೆ ಮಾಡಿದಿರಿ ಎನ್ನುವುದನ್ನು ವಿವರಿಸಿ, ಅದ್ಭುತವಾಗಿದೆ ಎಂದು ಒಬ್ಬರು ಕೇಳಿದ್ದಾರೆ. ನೀವು ಟ್ರಿಮ್ಮರ್ ಖರೀದಿಸುವ ಅಗತ್ಯವೂ ಇಲ್ಲ ಹಾಗಿದ್ದರೆ! ಉಳಿತಾಯದ ಉಪಾಯ ಚೆನ್ನಾಗಿದೆ ಎಂದಿದ್ದಾರೆ ಮತ್ತೊಬ್ಬರು. ನಿಮ್ಮ ಕೈಗಳಲ್ಲಿ ಮಾಂತ್ರಿಕ ಶಕ್ತಿ ಇದೆ ಎಂದು ಮಗದೊಬ್ಬರು ಹೇಳಿದ್ದಾರೆ. ಈ ಚಮಚವನ್ನು ವೈಬ್ರೇನಿಯಂನಿಂದ ಮಾಡಲಾಗಿದೆ ಅನ್ನಿಸುತ್ತದೆ ಎಂದಿದ್ದಾರೆ ಮತ್ತೊಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋ ನೋಡಲು ಕ್ಲಿಕ್ ಮಾಡಿ