ನಮ್ಮ ಹಪ್ಪಳವನ್ನು ‘ಏಷ್ಯನ್ ನಾಚೋಸ್’ ಎಂದು ಮಾರಾಟ ಮಾಡುತ್ತಿರುವ ಮಲೇಷಿಯನ್ ರೆಸ್ಟೋರೆಂಟ್
Papad : ಅಲ್ಲಿ ಒಂದು ಪ್ಲೇಟ್ ಏಷಿಯನ್ ನಾಚೋಸ್ ಅಂದರೆ ನಮ್ಮ ಹಪ್ಪಳದ ಬೆಲೆ ರೂ. 500. ನಮ್ಮ ಪಾಕಶಾಲೆಯ ಮೇಲೆ ಅವರು ಅಪರಾಧ ಗೈಯ್ಯುತ್ತಿದ್ಧಾರೆ ಎಂದು ನೆಟ್ಟಗರು ಒಂದೇ ಸಮ...
Viral News : ನಮ್ಮ ಮಕ್ಕಳಿಗೆ ಈಗಾಗಲೇ ನಾವು ತ್ರಿಕೋನಾಕಾರದಲ್ಲಿ ಚಪಾತಿ, ರೊಟ್ಟಿ ಕತ್ತರಿಸಿ ಅದರ ಮೇಲೆ ಪಲ್ಯ ಹಾಕಿ ಇದು ಪಿಝಾ ಎಂದು ಹೇಳುತ್ತಿದ್ದೇವೆ. ಬನ್ಗಳ ಹೊಟ್ಟೆಯಲ್ಲಿ ಪಲ್ಯ ಹಾಕಿ ಇದು ಬರ್ಗರ್ ಎನ್ನುತ್ತಿದ್ದೇವೆ. ಎಷ್ಟು ದಿನ ಮಕ್ಕಳು ಇದನ್ನು ನಂಬುತ್ತಾರೆ ಎನ್ನುವುದು ನಮಗೆ ಗೊತ್ತಿರುವ ಸತ್ಯವೇ. ಆದರೆ, ಇದು ನಾಳೆ ಯಾವುದೋ ಒಂದು ಇಂಟರ್ನ್ಯಾಷನಲ್ ಬ್ರ್ಯಾಂಡಿಂಗ್ ಕಂಪೆನಿಗೆ ಗೊತ್ತಾದರೆ, ಇದನ್ನೇ ರೀಬ್ರ್ಯಾಂಡಿಂಗ್ ಮಾಡಿ ಲಾಭ ಮಾಡಿಕೊಳ್ಳುವುದರಲ್ಲಿ ಅಚ್ಚರಿಯೇನಿಲ್ಲ. ಏಕೆಂದರೆ ಇದೀಗ ವೈರಲ್ ಆಗುತ್ತಿರುವ ಈ ಪೋಸ್ಟ್ ನೋಡಿ. ಮಲೇಷಿಯಾದ ರೆಸ್ಟೋರೆಂಟ್ ನಮ್ಮ ಹಪ್ಪಳವನ್ನು ‘ಏಷ್ಯನ್ ನಾಚೋಸ್’ ಎಂದು ಮಾರುತ್ತಿದೆ. ಒಂದು ಏಷ್ಯನ್ ನಾಚೋಸ್ ಬೆಲೆ 25 ಮಲೇಷಿಯನ್ ರಿಂಗಿಟ್ಗಳು. ಅಂದರೆ ನಮ್ಮ ಲೆಕ್ಕದಲ್ಲಿ ರೂ. 500!
I went to Bob’s in Bangalore, ordered special chips, they sent this lol pic.twitter.com/RGggWUCIjH
ಇದನ್ನೂ ಓದಿ— Sonali Shelar (@sonalishelar) January 23, 2023
ಈ ಪೋಸ್ಟ್ ಅನ್ನು 5 ಲಕ್ಷಕ್ಕೂ ಹೆಚ್ಚು ಜನರು ನೋಡಿದ್ಧಾರೆ. 9,000ಕ್ಕಿಂತಲೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾವಿರಾರು ಜನರು ರೀಟ್ವೀಟ್ ಮಾಡಿದ್ದಾರೆ. ನೆಟ್ಟಿಗರು ಈ ರೆಸ್ಟೋರೆಂಟ್ ಅನ್ನು, ಸ್ನಿಚ್ ಬೈ ದಿ ಥೀವ್ಸ್ ಎಂದು ಕರೆಯುತ್ತಿದ್ದಾರೆ. ಮೆಣಸು ಹಾಕಿದ ಹೆಸರುಬೇಳೆ ಹಪ್ಪಳವನ್ನು ಅವರು ಬ್ಲ್ಯಾಕ್ ಸ್ಪಾಟೆಡ್ ನಾಚೋಸ್ ಎಂದು ಕರೆದರೂ ಅಚ್ಚರಿ ಏನಿಲ್ಲ ಎಂದು ತಮಾಷೆ ಮಾಡಿದ್ದಾರೆ ಒಬ್ಬರು.
ಇದನ್ನೂ ಓದಿ : ತೆಂಗಿನ ಚಹಾ? ಪಾತ್ರೆ ಇಲ್ಲವಾದರೆ ಕಳಿಸುತ್ತಿದ್ದೆವಲ್ಲ ಎನ್ನುತ್ತಿರುವ ನೆಟ್ಟಿಗರು
ನಾನಿಲ್ಲಿ ಎರಡು ರೂಪಾಯಿಗೆ ಮಸಾಲಾಪುಡಿ ಹಾಕಿದ ಹಪ್ಪಳ ತಿಂದು ಸಂತೃಪ್ತನಾಗಿದ್ದೇನೆ ಎಂದು ಒಬ್ಬರು ಹೇಳಿದ್ದಾರೆ. ಮೆಕ್ಸಿಕನ್ನರು, ಭಾರತೀಯರು ಇದನ್ನು ನೋಡಿ ಸಾಕಷ್ಟು ಬೇಸರ ಮಾಡಿಕೊಂಡರೆ ಅಚ್ಚರಿ ಏನಿಲ್ಲ ಬಿಡಿ ಎಂದಿದ್ದಾರೆ ಮತ್ತೊಬ್ಬರು. ಇದನ್ನು ನೋಡಿ ನಾವು ಮನೆಯಲ್ಲಿ ಹಪ್ಪಳವನ್ನು ನಾಚೋಸ್ ಎನ್ನಲು ಶುರು ಮಾಡಿದ್ದೇವೆ. ನನ್ನ ತಾಯಿಯೂ ಹಾಂ ತಗೋ ನಾಚೋಸ್ ಎನ್ನಲು ಕಲಿತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : ‘ಅಮ್ಮನ ತಟ್ಟೆ’ 24 ವರ್ಷಗಳ ನಂತರ ಗೊತ್ತಾದ ತಟ್ಟೆಯ ರಹಸ್ಯ; ಭಾವುಕರಾದ ನೆಟ್ಟಿಗರು
ಕೌಲಾಲಂಪುರದಲ್ಲಿ ಇತ್ತೀಚೆಗೆ ಚಿಕನ್ ಖಾದ್ಯ ತಿಂದೆ. ಆದರೆ ಇಷ್ಟೊಂದು ತುಟ್ಟಿಯಾಗಿರಲಿಲ್ಲ ಎಂದಿದ್ದಾರೆ ಮತ್ತೊಬ್ಬರು. ಬೆಂಗಳೂರಿನ ಬಾಬ್ಸ್ಗೆ ಹೋಗಿ ಸ್ಪೆಷಲ್ ಚಿಪ್ಸ್ ಆರ್ಡರ್ ಮಾಡಿದೆ. ಅದಕ್ಕೆ ಅವರು ತಟ್ಟೆ ತುಂಬಾ ಅಕ್ಕಿ ಸಂಡಿಗೆ ಹಾಕಿ ಕೊಟ್ಟರು ಎಂದು ಫೋಟೋ ಹಾಕಿದ್ದಾರೆ ಮಗದೊಬ್ಬರು.
ಏನಂತೀರಿ ನೀವು ಇನ್ನು…
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:11 pm, Tue, 24 January 23