1963ರಲ್ಲಿ ಪ್ರಕಟವಾದ ಈ ಲೇಖನದಲ್ಲಿ ಇಂದಿನ ಸ್ಮಾರ್ಟ್​ಫೋನ್​ಗಳ ಬಗ್ಗೆ ಉಲ್ಲೇಖ

Smart Phone : ‘1960ರಲ್ಲಿ ನನ್ನ ತಂದೆ ನ್ಯಾಷನಲ್​ ಜಿಯಾಗ್ರಫಿಕ್ ಸೊಸೈಟಿಯ ಮ್ಯೂಸಿಯಂಗೆ ಕರೆದೊಯ್ದಿದ್ದರು. ಭವಿಷ್ಯದಲ್ಲಿ ನಾವು ವ್ಯಕ್ತಿಯನ್ನು ನೋಡುತ್ತಲೇ ಮಾತನಾಡುವುದು ಹೇಗೆ ಎನ್ನುವುದರ ಪ್ರಾತ್ಯಕ್ಷಿಕೆ ಅದಾಗಿತ್ತು.’ 

1963ರಲ್ಲಿ ಪ್ರಕಟವಾದ ಈ ಲೇಖನದಲ್ಲಿ ಇಂದಿನ ಸ್ಮಾರ್ಟ್​ಫೋನ್​ಗಳ ಬಗ್ಗೆ ಉಲ್ಲೇಖ
1963ರಲ್ಲಿ ಪ್ರಕಟವಾದ ಲೇಖನದಲ್ಲಿ ಇಂದಿನ ಮೊಬೈಲ್​ಗಳ ಬಗ್ಗೆ ಉಲ್ಲೇಖ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Jan 24, 2023 | 2:41 PM

Viral News : ಸ್ಮಾರ್ಟ್​ ಫೋನ್​ಗಳಿಲ್ಲದೆ ನಮ್ಮ ಜೀವನವನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಸಾಧ್ಯವೇ ಇಲ್ಲವಲ್ಲ? ಫೋನ್​ ಕಾಲ್​, ಮೆಸೇಜ್​ಗಳಿಗಷ್ಟೇ ಸೀಮಿತವಾಗಿದ್ದ ಮೊಬೈಲ್​ ಹೇಗೆ ನಮ್ಮನ್ನು ಇಡೀಯಾಗಿ ಆವರಿಸಿಕೊಂಡಿದೆ ಎನ್ನುವುದನ್ನು ಬರೆಯುತ್ತ ಹೋದರೆ ಅದೊಂದು ದೊಡ್ಡ ಸಂಶೋಧನಾ ಪ್ರಬಂಧವೇ. ಇದೀಗ ವೈರಲ್ ಆಗಿರುವ ಈ ಪೋಸ್ಟ್ ನೋಡಿ. 1963ರಲ್ಲಿ ಮ್ಯಾನ್ಸ್​ಫೀಲ್ಡ್​ ನ್ಯೂಸ್​ ಜರ್ನಲ್​ನಲ್ಲಿ ಪ್ರಕಟವಾದ ಲೇಖನವಿದು. ಆಗಿನ ಕಾಲದಲ್ಲಿ ಸ್ಮಾರ್ಟ್​ಫೋನ್​ ಎಂದರೆ ಏನು ಗ್ರಹಿಕೆ ಇತ್ತು ಎನ್ನುವುದನ್ನು ಇದು ಒಳಗೊಂಡಿದೆ. ಮೊಬೈಲ್​ಫೋನ್​ ಅನ್ನು ನಿಮ್ಮ ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡಬಹುದು ಎಂಬ ಭವಿಷ್ಯವನ್ನು ಆಗಲೇ ನುಡಿಯಲಾಗಿತ್ತು!

ಮುಂಬರುವ ದಿನಗಳಲ್ಲಿ ನೀವು ಚಲಿಸುತ್ತಲೇ ಫೋನ್ ಕರೆಗಳನ್ನು ಸ್ವೀಕರಿಸಬಹುದು, ಇನ್ನೊಬ್ಬರಿಗೆ ಫೋನ್​ ಮಾಡಿ ಮಾತನಾಡಬಹುದು. ಎಲ್ಲಿಯೂ ನೀವು ಫೋನ್​ ಅನ್ನು ನಿಮ್ಮ ಜೇಬಿನಲ್ಲಿಯೇ ಇಟ್ಟುಕೊಂಡು ಓಡಾಡಬಹುದು ಎಂಬ ಸಾರಾಂಶ ಈ ಲೇಖನದ್ದು. ಈ ಲೇಖನವನ್ನು ಟ್ವಿಟರ್ ಖಾತೆದಾರರೊಬ್ಬರು ಜನವರಿ 23ರಂದು ಹಂಚಿಕೊಂಡಿದ್ದಾರೆ. ಈತನಕ ಸುಮಾರು 90,000 ಜನರು ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ನಮ್ಮ ಹಪ್ಪಳವನ್ನು ‘ಏಷ್ಯನ್​ ನಾಚೋಸ್​’ ಎಂದು ಮಾರಾಟ ಮಾಡುತ್ತಿರುವ ಮಲೇಷಿಯನ್​ ರೆಸ್ಟೋರೆಂಟ್​

1960ರಲ್ಲಿ ನನ್ನ ತಂದೆ ನ್ಯಾಷನಲ್​ ಜಿಯಾಗ್ರಫಿಕ್ ಸೊಸೈಟಿಯ ಮ್ಯೂಸಿಯಂಗೆ ಕರೆದೊಯ್ದಿದ್ದರು. ಅಲ್ಲಿ ನಾನು ನೋಡಿದ ಒಂದು ಅದ್ಭುತ ನನಗಿನ್ನೂ ನೆನಪಿದೆ. ಭವಿಷ್ಯದಲ್ಲಿ ನಾವು ವ್ಯಕ್ತಿಯನ್ನು ನೋಡುತ್ತಲೇ ಮಾತನಾಡುವುದು ಹೇಗೆ ಎನ್ನುವುದರ ಪ್ರಾತ್ಯಕ್ಷಿಕೆ ಅದಾಗಿತ್ತು. ಮುಂದಿನ 60 ವರ್ಷಗಳಲ್ಲಿ ಈ ತಾಂತ್ರಿಕ ಪ್ರಗತಿ ನಮ್ಮ ಮುಂದಿನ ಪೀಳಿಗೆಯನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬ ಕುತೂಹಲ ಮತ್ತು ಆತಂಕ ಜೊತೆಜೊತೆಗೇ ಇದೆ ಎಂದು ಅನೇಕರು ಹೇಳಿದ್ದಾರೆ.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 2:40 pm, Tue, 24 January 23