Viral Video : ಆಲಿಯಾ ಭಟ್ ‘ಪಟಖಾ ಗುಡ್ಡಿ’ ಹಾಡಿಗೆ ಜರ್ಮನ್ ಬೆಡಗಿಯರ ನೃತ್ಯ
Aliya Bhatt : ಭಾರತೀಯ ಸಿನೆಮಾ ಹಾಡುಗಳಿಗೆ ಮನಸೋತು ಆಗಾಗ ಹೀಗೆ ರೀಲ್ ಮಾಡುವ ವಿದೇಶಿಯರ ಹುಚ್ಚು ಹೆಚ್ಚುತ್ತಲೇ ಇದೆ. ಜರ್ಮನಿಯ ಈ ಬೆಡಗಿಯರ ಈ ನೃತ್ಯ ನೋಡಿ.

Viral : ಬಾಲಿವುಡ್ ಸಿನೆಮಾ ಮತ್ತು ಹಾಡುಗಳ ಮೇಲೆ ಇತ್ತೀಚೆಗೆ ವಿದೇಶಿಯರಿಗೆ ವ್ಯಾಮೋಹ ಹೆಚ್ಚುತ್ತಿದೆ. ಸೂಪರ್ ಹಿಟ್ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋಗಳು ಆಗಾಗ ಅಂತರ್ಜಾಲದಲ್ಲಿ ಹರಿದಾಡುತ್ತಿರುತ್ತವೆ. ಜರ್ಮನಿಯ ಹುಡುಗಿಯರಿಬ್ಬರು ಇತ್ತೀಚೆಗೆ ಎ.ಆರ್. ರೆಹಮಾನ್ ಅವರಿಂದ ಸಂಗೀತ ಸಂಯೋಜನೆಗೊಂಡ ಹಾಡಿಗೆ ಬೀದಿಯಲ್ಲಿ ನೃತ್ಯ ಮಾಡಿದ್ದಾರೆ. ಜರ್ಮನಿಯ ಪಾಡರ್ಬಾರ್ನ್ನ ಪಾಲಿನಾ ಪಲೀವಾ, ಎಮೀಲಿಯಾ ಅವರೇ ಆ ಬೆಡಗಿಯರು. ಇನ್ಸ್ಟಾಗ್ರಾಂ ರೀಲ್ನಲ್ಲಿ ಅಲಿ ಅಲಿ ಅಲಿ ಅಲಿ ಶೀರ್ಷಿಕೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. 2014ರಲ್ಲಿ ಅಲಿಯಾ ಭಟ್ ನಟಿಸಿದ ಹೈವೇ ಚಿತ್ರದ ಪಟಖಾ ಗುಡ್ಡಿ ಹಾಡಿಗೆ ಇವರು ಹೆಜ್ಜೆ ಹಾಕಿರುತ್ತಾರೆ. ಈ ಹಾಡನ್ನು ಹಾಡಿದವರು ಜ್ಯೋತಿ ಮತ್ತು ಸುಲ್ತಾನ್ ನೂರಾನ್.
ಇದನ್ನೂ ಓದಿView this post on Instagram
ಈ ಎರಡು ರೀಲ್ಗಳು ಮಿಲಿಯನ್ಗಟ್ಟಲೆ ವೀಕ್ಷಣೆಗೆ ಒಳಪಟ್ಟಿವೆ. 1,70,000 ಲೈಕ್ಗಳೊಂದಿಗೆ ವೈರಲ್ ಆಗಿದೆ. ಈ ಬೆಡಗಿಯರು ತಮ್ಮದೇ ಶೈಲಿಯಲ್ಲಿ ನೃತ್ಯ ಸಂಯೋಜನೆ ಮಾಡಿ ಜರ್ಮನ್ನಿನ ಬೀದಿಯಲ್ಲಿ ನರ್ತಿಸಿದ್ದಾರೆ. ನೆಟ್ಮಂದಿ ಇವರ ನೃತ್ಯಕ್ಕೆ ಮನಸೋತು ಪ್ರೋತ್ಸಾಹದ ಮಾತುಗಳನ್ನಾಡಿದ್ದಾರೆ. ಭಾರತೀಯ ಸಿನೆಮಾ ಸಂಗೀತದ ತಾಕತ್ತೇ ಅದು. ಯಾರನ್ನೂ ತನ್ನ ಮಾಂತ್ರಿಕ ಸ್ಪರ್ಶದಿಂದ ಹಿಡಿದಿಡುವುದಲ್ಲದೆ ಹೀಗೆ ಅಲ್ಲಲ್ಲಿ ಮೈಮರೆತು ಕುಣಿಯುವಂತೆಯೂ ಮಾಡುತ್ತದೆ.
ಮತ್ತಷ್ಟು ಟ್ರೆಂಡಿಂಗ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:34 am, Sat, 6 August 22




