Viral Video: ಎಟಿಎಂನಿಂದ ಹಣ ಪಡೆದು ಖುಷಿಯಿಂದ ಕುಣಿದು ಕುಪ್ಪಳಿಸಿದ ಹುಡುಗಿ; ಭರ್ಜರಿ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್

ಹುಡುಗಿ ಎಟಿಎಂ ಮುಂದೆ ನಿಂತು ನೃತ್ಯ ಮಾಡಲು ಕಾರಣ ಏನೆಂಬುದು ತಿಳಿದಿಲ್ಲವಾದರೂ, ಹಣ ನೋಡುತ್ತಿದ್ದಂತೆಯೇ ಹುಡುಗಿ ಖುಷಿಯಿಂದ ಭರ್ಜರಿ ಸ್ಟೆಪ್ ಹಾಕಿದ್ದಾಳೆ ಎಂಬ ಊಹೆಗಳು ಕೇಳಿ ಬಂದಿವೆ.

Viral Video: ಎಟಿಎಂನಿಂದ ಹಣ ಪಡೆದು ಖುಷಿಯಿಂದ ಕುಣಿದು ಕುಪ್ಪಳಿಸಿದ ಹುಡುಗಿ; ಭರ್ಜರಿ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್
ಎಟಿಎಂನಿಂದ ಹಣ ಪಡೆದ ಹುಡುಗಿ ಸಕತ್​ ಸ್ಟೆಪ್​ ಹಾಕುತ್ತಿರುವ ದೃಶ್ಯವಿದು
Edited By:

Updated on: Oct 03, 2021 | 9:01 AM

ಸಾಮಾನ್ಯವಾಗಿ ಖುಷಿಯಾದಾಗಲೆಲ್ಲಾ ಡಾನ್ಸ್ ಮಾಡಿಯೇ ಬಿಡೋಣ ಅನ್ನಿಸುತ್ತೆ. ಕೆಲವರು ಖುಷಿಯನ್ನು ಹೊರಹಾಕುವ ರೀತಿಯಿದು. ಅಂತಹ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತವೆ. ಅವುಗಳಲ್ಲಿ ಕೆಲವು ದೃಶ್ಯಗಳು ನೋಡಲು ಮಜವಾಗಿರುತ್ತವೆ. ಖುಷಿಯಲ್ಲಿದ್ದ ಇಲ್ಲೋರ್ವ ಹುಡುಗಿ ಭರ್ಜರಿ ಡಾನ್ಸ್ ಮಾಡಿದ್ದಾಳೆ. ಹಣ ತೆಗೆಯಲು ಹೋದ  ಹುಡುಗಿ ನಿಂತಲ್ಲಿಯೇ ಸ್ಟೆಪ್ ಹಾಕುತ್ತಿದ್ದಾಳೆ. ಹಳೆಯ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ.

ಇನ್​ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 12 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹುಡುಗಿ ಎಟಿಎಂ ಮುಂದೆ ನಿಂತು ನೃತ್ಯ ಮಾಡಲು ಕಾರಣ ಏನೆಂಬುದು ತಿಳಿದಿಲ್ಲವಾದರೂ, ಹಣ ನೋಡುತ್ತಿದ್ದಂತೆಯೇ ಹುಡುಗಿ ಖುಷಿಯಿಂದ ಭರ್ಜರಿ ಸ್ಟೆಪ್ ಹಾಕಿದ್ದಾಳೆ ಎಂಬ ಊಹೆಗಳು ಕೇಳಿ ಬಂದಿವೆ.

ಹುಡುಗಿ ಬ್ಲ್ಯಾಕ್ ಕಲರ್ ಡ್ರೆಸ್ ಧರಿಸಿದ್ದಾಳೆ. ಎಟಿಎಂ ಕಾರ್ಡ್ ಹಾಕಿ ಹಣ ಪಡೆಯುತ್ತಿದ್ದಂತೆಯೇ ಖುಷಿಯಿಂದ ನತ್ಯ ಮಾಡಿದ್ದಾಳೆ. ವಿಡಿಯೋ ಕೊನೆಯಲ್ಲಿ ಎಟಿಎಂಗೆ ತಲೆ ಬಾಗಿ ಕೃತಜ್ಞತೆ ಹೇಳಿರುವುದನ್ನು ದೃಶ್ಯದಲ್ಲಿ ನೋಡಬಹುದು. ಅಭಿಪ್ರಾಯ ತಿಳಿಸಿದ ನೆಟ್ಟಿಗರಲ್ಲಿ ಕೆಲವರು ಈಕೆಯ ಮೊದಲ ಸಂಬಳವಿರಬಹುದು ಎಂದು ಹೇಳಿದ್ದಾರೆ. ಇನ್ನು ಕೆಲವರು ಶಾಪಿಂಗ್​ಗಾಗಿ ಹೊರಟಿದ್ದಾಳೆ ಎಂದೂ ಸಹ ಭಾವಿಸಿದ್ದಾರೆ. ಒಟ್ಟಿನಲ್ಲಿ ಹುಡುಗಿಯ ನೃತ್ಯ ಇದೀಗ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಬಾಲಕಿಯ ತೊಡೆಯ ಮೇಲೆ ನಿದ್ರಿಸುತ್ತಿರುವ 20 ಅಡಿ ಉದ್ದದ ಹೆಬ್ಬಾವು; ವಿಡಿಯೋ ನೋಡಿ ದಂಗಾದ ನೆಟ್ಟಿಗರು

Viral Video: ಸಿಟ್ಟಿನಲ್ಲಿ ಸರ್ಕಾರಿ ಬಸ್ಸಿಗೆ ಗುದ್ದಿದ ಆನೆ! ಗ್ಲಾಸ್ ಪುಡಿ ಪುಡಿ; ವಿಡಿಯೋ ನೋಡಿ

Published On - 9:00 am, Sun, 3 October 21