Viral Video : ಕಾರಿಗೆ ಚಿಪ್ಸ್ ಪ್ಯಾಕೆಟ್​​​​ನಿಂದ ಅಲಂಕಾರ, ಮಂಟಪಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಮದುಮಗ

ವಧು ವರರ ವಾಹನಗಳನ್ನು ವಿಶೇಷವಾಗಿ ಅಲಂಕಾರ ಮಾಡಿರುವುದನ್ನು ನೋಡಿರಬಹುದು. ಆದರೆ ಇಲ್ಲೊಬ್ಬ ಮದುಮಗನು ಕುರುಕುರೆ ಚಿಪ್ಸ್ ಪ್ಯಾಕೆಟ್ ಮೂಲಕ ಅಲಂಕರಿಸಿದ ಕಾರಿನಲ್ಲಿ ಮದುವೆ ಮಂಟಪಕ್ಕೆ ಬಂದಿದ್ದಾನೆ. ಈ ವಿಡಿಯೋವೊಂದು ಸದ್ಯಕ್ಕೆ ನೆಟ್ಟಿಗರ ಗಮನ ಸೆಳೆಯುತ್ತಿದೆ.

Viral Video : ಕಾರಿಗೆ ಚಿಪ್ಸ್ ಪ್ಯಾಕೆಟ್​​​​ನಿಂದ ಅಲಂಕಾರ, ಮಂಟಪಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಮದುಮಗ
Updated By: ಅಕ್ಷಯ್​ ಪಲ್ಲಮಜಲು​​

Updated on: Apr 06, 2024 | 11:27 AM

ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಕೆಲ ಮದುವೆಗಳು ವಿಶೇಷತೆಗಳಿಂದ ಸದ್ದು ಮಾಡುತ್ತವೆ. ಕೆಲ ಜೋಡಿಗಳು ಅದ್ದೂರಿಯಾಗಿ ಮದುವೆಯಾದರೆ, ಇನ್ನು ಕೆಲವರು ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ತಮ್ಮ ಮದುವೆ ವಿಶೇಷತೆಗೆ ಸಾಕ್ಷಿಯಾಗಲಿ ಎಂದು ಬಯಸುವವರೇ ಹೆಚ್ಚು. ಹೀಗಾಗಿ ವಧು ವರರು ಮದುವೆ ಮಂಟಪಕ್ಕೆ ಮೆರವಣಿಗೆಯ ಮೂಲಕ ಇಲ್ಲವಾದರೆ ಕಾರು, ಬುಲೆಟ್ ಬೈಕ್, ಸೈಕಲ್, ಜೆಸಿಬಿ ಹೀಗೆ ವಿಭಿನ್ನವಾಗಿ ಎಂಟ್ರಿ ಕೊಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮದುಮಗನು ಕುರುಕುರೆ ಚಿಪ್ಸ್ ಪ್ಯಾಕೆಟ್ ನಿಂದ ಅಲಂಕರಿಸಿದ ಕಾರಿನ ಮೂಲಕ ಮದುವೆ ಮಂಟಪಕ್ಕೆ ಆಗಮಿಸಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಸತ್ಪಾಲ್ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಮಾರುತಿ ಎರ್ಟಿಗಾ ಕಾರನ್ನು ಕುರುಕುರೆ ಚಿಪ್ಸ್ ಪ್ಯಾಕೆಟ್ ಮೂಲಕ ಅಲಂಕರಿಸಿರುವುದನ್ನು ನೋಡಿರಬಹುದು. ಬಣ್ಣ ಬಣ್ಣದ ಚಿಪ್ಸ್ ಪ್ಯಾಕೆಟ್ ನಿಂದ ಕಾರನ್ನು ಅಲಂಕರಿಸಲಾಗಿದ್ದು ಈ ಕಾರಿನಲ್ಲಿ ಕುಳಿತ ವರ ಮಂಟಪಕ್ಕೆ ಆಗಮಿಸಿದ್ದಾನೆ. ಇದನ್ನು ನೋಡಿದ ಕುಟುಂಬಸ್ಥರು, ಆಪ್ತರು ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದು ಏನು? ಚಿತ್ರ ಹೇಳಲಿದೆ ನಿಮ್ಮ ವ್ಯಕ್ತಿತ್ವ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ. ಬಳಕೆದಾರರೊಬ್ಬರು, ‘ಹುಡುಗನಿಗೆ ಚಿಪ್ಸ್ ಅಂಗಡಿ ಇರಬೇಕು, ಇಲ್ಲಾ ಚಿಪ್ಸ್ ಡೀಲರ್ ಆಗಿರಬೇಕು’ ಎಂದಿದ್ದಾರೆ. ಮತ್ತೊಬ್ಬರು, ‘ಒಳ್ಳೆ ಐಡಿಯಾ ಕೊಟ್ಟಿದ್ದೀರಿ, ಮುಂದಿನ ಮದುವೆಗಳಲ್ಲಿ ಈ ರೀತಿ ಅಲಂಕಾರ ಮಾಡುತ್ತೇವೆ’ ಎಂದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ