ಮದುವೆಯೆಂದರೆ ಸಂಭ್ರಮ, ಖುಷಿ, ಸಡಗರ. ಆದರೆ, ಮದುವೆಯ ಸಂಭ್ರಮದಲ್ಲಿ ಕೆಲವೊಮ್ಮೆ ಅವಘಡಗಳು ಕೂಡ ನಡೆದುಬಿಡುತ್ತವೆ. ಉತ್ತರ ಪ್ರದೇಶದ (Uttar Pradesh) ಸೋನಭದ್ರ ಜಿಲ್ಲೆಯ ಬ್ರಹ್ಮನಗರದಲ್ಲಿ ತನ್ನ ಮದುವೆಯ ಸಂಭ್ರಮದಲ್ಲಿದ್ದ ವರ ಮದುವೆಯ ಮೆರವಣಿಗೆ ವೇಳೆ ಖುಷಿಗಾಗಿ ಗಾಳಿಯಲ್ಲಿ ಗುಂಡು (Firing) ಹಾರಿಸಿದ್ದಾನೆ. ಈ ಗುಂಡು ಆತನ ಗೆಳೆಯನಿಗೆ ತಾಗಿ ಆತ ಸಾವನ್ನಪ್ಪಿದ್ದಾನೆ. ಇದರಿಂದಾಗಿ ಸಂಭ್ರಮ ತುಂಬಿದ್ದ ಮದುವೆಮನೆಯಲ್ಲಿ (Wedding Celebration) ಸೂತಕಛಾಯೆ ಆವರಿಸಿದೆ. ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಾಗಿದ್ದ ವರ ಇದೀಗ ಕೊಲೆಯ ಆರೋಪದಲ್ಲಿ ಜೈಲು ಸೇರಿದ್ದಾನೆ!
ಈ ಆಘಾತಕಾರಿ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವರ ಮನೀಶ್ ಮಧೇಶಿಯಾ ತನ್ನ ಮದುವೆಯ ಮೆರವಣಿಗೆಯ ವೇಳೆ ರಥದ ಮೇಲೆ ಬರುವಾಗ ಸಂಭ್ರಮಾಚರಣೆಯ ಅಂಗವಾಗಿ ಗುಂಡು ಹಾರಿಸಿದ್ದಾನೆ. ಈ ಸಂದರ್ಭದಲ್ಲಿ ಆತ ಹಾರಿಸಿದ ಗುಂಡು ಸೈನಿಕನಾಗಿದ್ದ ಆತನ ಸ್ನೇಹಿತ ಬಾಬು ಲಾಲ್ ಯಾದವ್ ಅವರಿಗೆ ತಗುಲಿದೆ. ವರ ಗಾಳಿಯಲ್ಲಿ ಗುಂಡು ಹಾರಿಸಲು ಬಳಸಿದ ಗನ್ ಕೂಡ ಬಾಬು ಲಾಲ್ ಯಾದವ್ ಅವರದ್ದು. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
दूल्हे ने की हर्ष फायरिंग, आर्मी के जवान की हुई मौत। यूपी के @sonbhadrapolice राबर्ट्सगंज का #ViralVideo #earthquake #breastislife #fearwomen #Afghanistan pic.twitter.com/7laX9OUIqD
— RAHUL PANDEY (@BhokaalRahul) June 23, 2022
ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದ ಬಾಬು ಲಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ಕುಟುಂಬದವರು ಎಫ್‌ಐಆರ್ ದಾಖಲಿಸಿದ್ದು, ಕೊಲೆ ಮಾಡಿದ ಆರೋಪದಲ್ಲಿ ವರನನ್ನು ಬಂಧಿಸಲಾಗಿದೆ. ಗುಂಡಿನ ದಾಳಿಗೆ ಬಳಸಿದ್ದ ಬಂದೂಕನ್ನೂ ವಶಪಡಿಸಿಕೊಳ್ಳಲಾಗಿದೆ.
थाना रॉबर्ट्सगंज क्षेत्रान्तर्गत आशीर्वाद वाटिका मे आयोजित वैवाहिक कार्यक्रम में दूल्हा मनीष मद्धेशिया नि0 रॉबर्ट्सगंज, सोनभद्र द्वारा की गयी हर्ष फायरिंग में गोली लगने से एक व्यक्ति (सेना में कार्यरत) बाबूलाल यादव की मृत्य हो गयी जिसके सम्बन्ध में #DIG/SP SBR द्वारा दी गयी बाइट- pic.twitter.com/gS5QnfM28s
— Sonbhadra Police (@sonbhadrapolice) June 22, 2022
ಮದುವೆ ಮತ್ತು ದೇಗುಲ ಸೇರಿದಂತೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಲೈಸನ್ಸ್ ಪಡೆದ ಬಂದೂಕುಗಳಿದ್ದರೂ ಸಹ ಸಂಭ್ರಮದಿಂದ ಗುಂಡು ಹಾರಿಸುವುದು ಭಾರತದಲ್ಲಿ ಕ್ರಿಮಿನಲ್ ಅಪರಾಧವಾಗಿದೆ.
Published On - 11:47 am, Fri, 24 June 22