Viral Video: ಮಂಟಪದಲ್ಲೇ ವರನ ತಲೆಯಿಂದ ಕೆಳಗೆ ಬಿತ್ತು ವಿಗ್; ಮದುವೆಯೇ ಬೇಡವೆಂದ ವಧು!

| Updated By: ಸುಷ್ಮಾ ಚಕ್ರೆ

Updated on: May 23, 2022 | 5:02 PM

ಆತನ ತಲೆಯಲ್ಲಿ ಕೂದಲಿಲ್ಲ ಎಂಬುದನ್ನು ವಧುವಿನ ಮನೆಯವರಿಂದ ಮುಚ್ಚಿಡಲಾಗಿತ್ತು. ವರನಿಗೆ ತಲೆ ಬೋಳಾಗಿದೆ ಎಂದು ತಿಳಿದ ತಕ್ಷಣ ವಧು ಈ ಮದುವೆಯಾಗಲು ನಿರಾಕರಿಸಿದಳು.

Viral Video: ಮಂಟಪದಲ್ಲೇ ವರನ ತಲೆಯಿಂದ ಕೆಳಗೆ ಬಿತ್ತು ವಿಗ್; ಮದುವೆಯೇ ಬೇಡವೆಂದ ವಧು!
ಪ್ರಾತಿನಿಧಿಕ ಚಿತ್ರ
Follow us on

ಭಾರತದಲ್ಲಿ ಮದುವೆ ಮನೆಯಲ್ಲಿ ಅನೇಕ ಹೈಡ್ರಾಮಾಗಳು ನಡೆಯುತ್ತಲೇ ಇರುತ್ತದೆ. ವರ ತಡವಾಗಿ ಬಂದ ಎಂದು ಮದುವೆಯನ್ನು (Marriage) ಕ್ಯಾನ್ಸಲ್ ಮಾಡಿದ ವಧು, ವರ ಕುಡಿಯುತ್ತಾನೆಂದು ಮಂಟಪದಿಂದ ಕೆಳಗಿಳಿದು ಹೋದ ವಧು ಹೀಗೆ ನಾನಾ ಕಾರಣದಿಂದ ಮಂಟಪದಲ್ಲೇ ಮದುವೆ ನಿಂತುಹೋದ ಉದಾಹರಣೆಗಳಿವೆ. ಇದೀಗ ಉತ್ತರ ಪ್ರದೇಶದ (Uttar Pradesh) ಉನ್ನಾವೋದಲ್ಲಿ ಯುವತಿಯೊಬ್ಬಳು ವಿಚಿತ್ರ ಕಾರಣದಿಂದಾಗಿ ತನ್ನ ಮದುವೆಯನ್ನು ರದ್ದು ಮಾಡಿಕೊಂಡಿದ್ದಾಳೆ.

ಆ ಮದುವೆಯಲ್ಲಿ ಮದುವೆಯ ಅರ್ಧದಷ್ಟು ಶಾಸ್ತ್ರಗಳು ಪೂರ್ಣಗೊಂಡಿತ್ತು. ವರ ಮಂಟಪಕ್ಕೆ ಕಾಲಿಡುವ ಮೊದಲು ಆತನಿಗೆ ತಲೆ ತಿರುಗಿ ಕೆಳಗೆ ಬಿದ್ದಿದ್ದ. ಆತನನ್ನು ಸಮಾಧಾನಪಡಿಸಿ, ಆತ ಸುಧಾರಿಸಿಕೊಂಡ ಬಳಿಕ ಮಂಟಪಕ್ಕೆ ಕರೆತರಲಾಯಿತು. ಈ ವೇಳೆ ಆತನಿಗೆ ಹಾರ ಹಾಕುವಾಗ ಆತನ ತಲೆಯಿಂದ ವಿಗ್ ಕೆಳಗೆ ಬಿದ್ದಿತು. ಆತನ ತಲೆಯಲ್ಲಿ ಕೂದಲಿಲ್ಲ, ಆತನದ್ದು ಬೋಳು ತಲೆ ಎಂಬುದು ಬಯಲಾಯಿತು.

ಆತನ ತಲೆಯಲ್ಲಿ ಕೂದಲಿಲ್ಲ ಎಂಬುದನ್ನು ವಧುವಿನ ಮನೆಯವರಿಂದ ಮುಚ್ಚಿಡಲಾಗಿತ್ತು. ವರನಿಗೆ ತಲೆ ಬೋಳಾಗಿದೆ ಎಂದು ತಿಳಿದ ತಕ್ಷಣ ವಧು ಈ ಮದುವೆ ಸಮಾರಂಭದಲ್ಲಿ ಮುಂದುವರಿಯಲು ನಿರಾಕರಿಸಿದಳು. ಆಕೆಯ ಮನೆಯವರು ಆಕೆಯನ್ನು ಓಲೈಸಲು ನೋಡಿದರೂ ಕೇಳದ ಆಕೆ ತಾನು ಈ ಮದುವೆಯಾಗುವುದಿಲ್ಲ ಎಂದು ಹಠ ಹಿಡಿದಳು.

ಇದನ್ನೂ ಓದಿ
Shocking Video: ಮಂಗಾಟವಾಡಲು ಬೋನಿನ ಬಳಿ ಬಂದ ಯುವಕನ ಕೈ ಕಚ್ಚಿದ ಸಿಂಹ; ಭಯಾನಕ ವಿಡಿಯೋ ವೈರಲ್
Viral News: ಮೌಂಟ್ ಎವರೆಸ್ಟ್​ ಬೇಸ್ ಕ್ಯಾಂಪ್ ಹತ್ತಿದ 10 ವರ್ಷದ ಬಾಲಕಿ ರಿದಮ್!
Viral Video: ಕೋತಿಗೆ ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದಿಯಲು ಸಹಾಯ ಮಾಡಿದ ನಾಯಿ; ಕ್ಯೂಟೆಸ್ಟ್​​ ವಿಡಿಯೋ ಇಲ್ಲಿದೆ
Viral News: ದಾಖಲೆಯ 1,100 ಕೋಟಿಗೆ ಹರಾಜಾಯ್ತು 67 ವರ್ಷ ಹಿಂದಿನ ಮರ್ಸಿಡಿಸ್ ಬೆಂಜ್!

ಇದನ್ನೂ ಓದಿ: Viral News: ಮೆರವಣಿಗೆಗೆ ಬರದೆ ಕುಡಿದು ಗೆಳೆಯರೊಂದಿಗೆ ಡ್ಯಾನ್ಸ್​ ಮಾಡಿದ ವರ; ಬೇರೆಯವನನ್ನು ಮದುವೆಯಾದ ವಧು!

ಬಳಿಕ ಈ ವಿಷಯ ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿತು. ಆದರೂ ಪೊಲೀಸರ ಮಧ್ಯಸ್ಥಿಕೆಯ ನಂತರವೂ ವಧು ದೃಢವಾಗಿಯೇ ಇದ್ದಳು. ನಂತರ ಪಂಚಾಯತಿ ನಡೆಸಿ ಮದುವೆಗೆ 5.66 ಲಕ್ಷ ರೂ. ಖರ್ಚು ಮಾಡಿದ್ದೇವೆ ಎಂದು ಬಾಲಕಿಯ ಮನೆಯವರು ತಿಳಿಸಿದ್ದಾರೆ. ಕೊನೆಗೆ ವರನ ಕಡೆಯವರು ಅವರ ಬೇಡಿಕೆಗೆ ಸಮ್ಮತಿಸಿ ವಧುವಿನ ತಂದೆಗೆ ಹಣವನ್ನು ವಾಪಾಸ್ ನೀಡಿದರು. (Source)

“ಆತ ತನ್ನ ತಲೆಯಲ್ಲಿ ಕೂದಲಿಲ್ಲ ಎಂಬ ವಿಷಯವನ್ನು ಮೊದಲೇ ಹೇಳಿದ್ದರೆ ನಾವು ವಧುವನ್ನು ಮಾನಸಿಕವಾಗಿ ಸಿದ್ಧಪಡಿಸಬಹುದಿತ್ತು. ಇದರಿಂದ ಅವಳಿಗೆ ಆಘಾತಕ್ಕೊಳಗಾಗುತ್ತಿರಲಿಲ್ಲ. ಮದುವೆಯು ಸುಳ್ಳಿನ ಮೇಲೆ ಉಳಿಯುತ್ತದೆ ಎಂದು ನೀವು ನಿರೀಕ್ಷಿಸಬಾರದು. ಆತ ಈ ವಿಷಯವನ್ನು ಮುಚ್ಚಿಟ್ಟಿದ್ದು ತಪ್ಪು” ಎಂದು ವಧುವಿನ ಚಿಕ್ಕಪ್ಪ ಹೇಳಿದ್ದಾರೆ.

ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:00 pm, Mon, 23 May 22