ಮಹಿಳೆಯರ ಒಳಉಡುಪು ಧರಿಸಿ ನಡುರಸ್ತೆಯಲ್ಲೇ ರೀಲ್ಸ್​ ಮಾಡಲು ಹೊರಟ ಯುವಕನಿಗೆ ಬಿತ್ತು ಸ್ಥಳೀಯರಿಂದ ಧರ್ಮದೇಟು

ಹರಿಯಾಣದ ಪಾಣಿಪತ್‌ನಲ್ಲಿ ಕಿಕ್ಕಿರಿದ ಮಾರುಕಟ್ಟೆಯಲ್ಲಿ ಮಹಿಳೆಯರ ಒಳಉಡುಪು ಧರಿಸಿ ರೀಲ್ಸ್ ಮಾಡಲು ಯತ್ನಿಸಿದ ಯುವಕನನ್ನು ಸ್ಥಳೀಯರು ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುವಕನ ಅಶ್ಲೀಲ ಕೃತ್ಯದಿಂದ ಮಾರುಕಟ್ಟೆಯಲ್ಲಿದ್ದ ಮಹಿಳೆಯರಿಗೆ ಮುಜುಗರ ಉಂಟಾಗಿದ್ದು, ಸ್ಥಳೀಯ ಪುರುಷರೆಲ್ಲ ಸೇರಿ ಯುವಕನಿಗೆ ಧರ್ಮದೇಟು ನೀಡಿದ್ದಾರೆ.

ಹರಿಯಾಣ: ಕಿಕ್ಕಿರಿದ ಮಾರುಕಟ್ಟೆಯಲ್ಲಿ ಮಹಿಳೆಯರ ಒಳಉಡುಪು ಧರಿಸಿ ರೀಲ್ಸ್​​​ ಮಾಡಲು ಮುಂದಾಗಿದ್ದ ಯುವಕನಿಗೆ ಸ್ಥಳೀಯರು ಸೇರಿ ಮನಬಂದಂತೆ ಥಳಿಸಿರುವ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ. ಯುವಕ ಮಹಿಳೆಯರ ಬ್ರಾ ಹಾಗೂ ಲಂಗ ಧರಿಸಿ ಆಶ್ಲೀಲವಾಗಿ ನೃತ್ಯ ಮಾಡಲು ಪ್ರಾರಂಭಿಸುತ್ತಿದ್ದಂತೆ ಕೋಪಗೊಂಡ ಸ್ಥಳೀಯ ಮಾರಾಟಗಾರರು ಯುವಕನನ್ನು ಹಿಡಿದು ಥಳಿಸಿದ್ದಾರೆ.

ಈ ಘಟನೆಯು ಪಾಣಿಪತ್‌ನ ಇನ್ಸಾರ್ ಮಾರ್ಕೆಟ್‌ನಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಕಿಕ್ಕಿರಿದು ತುಂಬಿದ್ದ ಮಾರುಕಟ್ಟೆಯ ಮಧ್ಯದಲ್ಲಿ ಈತನ ಅಶ್ಲೀಲ ಕೃತ್ಯದಿಂದ ಮಾರುಕಟ್ಟೆಯಲ್ಲಿದ್ದ ಮಹಿಳೆಯರಿಗೆ ಮುಜುಗರ ಉಂಟಾಗಿದ್ದು, ಸ್ಥಳೀಯ ಪುರುಷರೆಲ್ಲ ಸೇರಿ ಧರ್ಮದೇಟು ನೀಡಿದ್ದಾರೆ.

ಇದನ್ನೂ ಓದಿ: 13 ಅಡಿಯ ಬೃಹತ್ ಮೊಸಳೆಯನ್ನು ತನ್ನ ಭುಜದ ಮೇಲೆ ಹೊತ್ತು ಸಾಗಿದ ವ್ಯಕ್ತಿ

ಮಾರುಕಟ್ಟೆಯಲ್ಲಿ ಇರುವ ಜನಸಮೂಹದ ಮುಂದೆ ಯುವಕ ಸ್ತ್ರೀಯರ ಒಳ ಉಡುಪನ್ನು ಮಾತ್ರ ಧರಿಸಿ ಅರೆಬೆತ್ತಲೆಯಾಗಿದ್ದು, ಸ್ಥಳೀಯ ಮಾರಾಟಗಾರರು ಯುವಕನಿಗೆ ಚಪ್ಪಲಿಯಿಂದ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಯುವಕ ಅಂಗಡಿಯವರಲ್ಲಿ ಕ್ಷಮೆಯಾಚಿಸಿ ತನ್ನನ್ನು ಬಿಟ್ಟುಬಿಡುವಂತೆ ಮನವಿ ಮಾಡುವುದನ್ನು ಸಹ ಕಾಣಬಹುದು. ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ವರದಿಯಾಗಿಲ್ಲ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:45 am, Wed, 27 November 24