ಪಟಾಕಿ ಶಬ್ದಕ್ಕೆ ಬೆಚ್ಚಿ ವರನನ್ನೇ ಹೊತ್ತು ಓಡಿದ ಕುದುರೆ; ಮುಂದೇನಾಯ್ತು? ಇಲ್ಲಿದೆ ವೈರಲ್ ವಿಡಿಯೋ

ಕುದುರೆ ಏರಿ ವರ ಕುಳಿತಿದ್ದ. ಅಲ್ಲಿದ್ದವರು ಚಿಕ್ಕದಾಗಿ ಪಟಾಕಿ ಸಿಡಿಸಿದರು. ಅಷ್ಟೇ, ವರನನ್ನು ಹೊತ್ತು ನಿಂತಿದ್ದ ಕುದುರೆ ಭಯ ಬಿತ್ತು. ಮದುವೆ ಗಂಡನ್ನು ಹೊತ್ತೇ ಕುದರೆ ಓಡಿದೆ.

ಪಟಾಕಿ ಶಬ್ದಕ್ಕೆ ಬೆಚ್ಚಿ ವರನನ್ನೇ ಹೊತ್ತು ಓಡಿದ ಕುದುರೆ; ಮುಂದೇನಾಯ್ತು? ಇಲ್ಲಿದೆ ವೈರಲ್ ವಿಡಿಯೋ
ವರನನ್ನು ಹತ್ತಿ ಓಡಿದ ಕುದುರೆ
Edited By:

Updated on: May 15, 2022 | 9:01 PM

ಮದುವೆ ಎಂಬುದು ಪ್ರತಿ ವ್ಯಕ್ತಿಯ ಬಾಳಲ್ಲೂ ತುಂಬಾನೇ ವಿಶೇಷ. ಆ ದಿನವನ್ನು ವಿಶೇಷವಾಗಿ ಇರಬೇಕು ಎನ್ನುವ ಕಾರಣಕ್ಕೆ ಸಾಕಷ್ಟು ಖರ್ಚು ಮಾಡಲಾಗುತ್ತದೆ. ಲಕ್ಷಾಂತರ ರೂಪಾಯಿ ವೆಚ್ಛ ಮಾಡಿ ಅದ್ದೂರಿ ಮದುವೆ ಮಾಡಲಾಗುತ್ತದೆ. ವರನನ್ನು ಕುದುರೆಯ ಮೇಲೆ ಕರೆತರಲಾಗುತ್ತದೆ. ಪಟಾಕಿ (Crackers) ಸಿಡಿಸಲಾಗುತ್ತದೆ. ಆದರೆ, ಇದೆರಡೂ ಕೆಲಸವನ್ನು ಒಟ್ಟಿಗೆ ಮಾಡಬಾರದು. ಹಾಗೆ ಮಾಡಿದರೆ ಈ ವರನಿಗೆ ಆದ ಗತಿಯೇ ಆಗುತ್ತದೆ. ಸದ್ಯ, ಸೋಶಿಯಲ್ ಮೀಡಿಯಾದಲ್ಲಿ (Social Media) ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಏನಾಯ್ತು ಎಂಬುದನ್ನು ನಾವು ಇಲ್ಲಿ ವಿವರಿಸುತ್ತಿದ್ದೇವೆ.

ಅದೊಂದು ಅದ್ದೂರಿ ಮದುವೆ. ಆ ಮದುವೆ ನೋಡೋಕೆ ನೆಂಟರಿಷ್ಟರು ಬಂದು ಸೇರಿದ್ದರು. ವರ ಕುದುರೆ ಏರಿ ಬಂದಿದ್ದ. ಈ ಸುಂದರ ಕ್ಷಣವನ್ನು ಸೆರೆ ಹಿಡಿಯೋಕೆ ಕ್ಯಾಮೆರಾ ಹಿಡಿದು ಅನೇಕರು ನೆರೆದಿದ್ದರು. ಒಟ್ಟಿನಲ್ಲಿ ಅದೊಂದು ಸುಂದರ ಮದುವೆ ಆಗುವುದರಲ್ಲಿತ್ತು. ಆದರೆ, ಕ್ಷಣಮಾತ್ರದಲ್ಲಿ ಎಲ್ಲವೂ ಬದಲಾಗಿತ್ತು! ಒಂದು ಪಟಾಕಿಯಿಂದ ಮದುವೆಯ ಚಿತ್ರಣವೇ ಬದಲಾಗಿತ್ತು.

ಇದನ್ನೂ ಓದಿ
ಲೋಕಲ್​ ಟ್ರೇನ್​ನಲ್ಲಿ ಗಡದ್ದಾಗಿ ನಿದ್ರಿಸುತ್ತಲೇ ಕೆಳಕ್ಕೆ ಬಿದ್ದ ವ್ಯಕ್ತಿ; ಇಲ್ಲಿದೆ ವೈರಲ್ ವಿಡಿಯೋ
Guinness World Record: 75ರ ಹರೆಯದಲ್ಲಿ ಶೀರ್ಷಾಸನ ಮಾಡಿ ವಿಶ್ವ ದಾಖಲೆ ಬರೆದ ವ್ಯಕ್ತಿ; ವಿಡಿಯೋ ಇಲ್ಲಿದೆ
ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಬದುಕುಳಿಯಿತು ಕಾಡಾನೆ ಜೀವ: ನೆಟ್ಟಿಗರಿಂದ ಎಲ್ಲೆಡೆ ಶ್ಲಾಘನೆ
Best Smartphone: ಮೇ ತಿಂಗಳಲ್ಲಿ ನೀವು ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್​​ಫೋನ್​ಗಳು ಇಲ್ಲಿದೆ ನೋಡಿ

ಕುದುರೆ ಏರಿ ವರ ಕುಳಿತಿದ್ದ. ಅಲ್ಲಿದ್ದವರು ಚಿಕ್ಕದಾಗಿ ಪಟಾಕಿ ಸಿಡಿಸಿದರು. ಅಷ್ಟೇ, ವರನನ್ನು ಹೊತ್ತು ನಿಂತಿದ್ದ ಕುದುರೆ ಭಯ ಬಿತ್ತು. ಮದುವೆ ಗಂಡನ್ನು ಹೊತ್ತೇ ಕುದುರೆ ಓಡಿದೆ. ಅದ್ಯಾವ ಮಟ್ಟಿಗೆ ಕುದುರೆ ಓಡಿದೆ ಎಂದರೆ ಅದನ್ನು ಹಿಡಿಯೋಕೆ ಅಲ್ಲಿದ್ದ ಯಾರ ಬಳಿಯಿಂದಲೂ ಸಾಧ್ಯವಾಗಿಲ್ಲ.

ಕುದುರೆ ಓಡುವ ವೇಗ ನೋಡಿ ಎಲ್ಲರೂ ಶಾಕ್​ ಆಗಿದ್ದಾರೆ. ಮದುವೆ ಕಾರ್ಯಕ್ರಮಕ್ಕೆ ಬಂದವರೆಲ್ಲರೂ ತಲೆಮೇಲೆ ಕೈ ಹೊತ್ತು ಕೂತಿದ್ದಾರೆ. ಮುಂದೇನಾಯಿತು? ವರ ಹಿಂದಿರುಗಿ ಬಂದನೇ? ಮದುವೆ ನಡೆಯಿತೇ ಎನ್ನುವ ಮಾಹಿತಿ ಸಿಕ್ಕಿಲ್ಲ.

ಈ ವಿಡಿಯೋಗಳು ಟ್ರೋಲ್ ಪೇಜ್​ನಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಘಟನೆ ನಡೆದಿದ್ದು ಎಲ್ಲಿ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ‘ಮದುವೆ ಆಗಬೇಕಿದ್ದ ವರನಿಗೆ ಹೀಗೆ ಆಗಬಾರದಿತ್ತು’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ಹೀಗಾಗುತ್ತದೆ ಎಂದು ಊಹಿಸಿದ್ದೆ’ ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.