ಇದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ಜೊತೆಗೆ ಚರ್ಚೆಗೂ ಗ್ರಾಸವಾಗಿದೆ. ವಿಡಿಯೋದಲ್ಲಿ ಆಸ್ಪತ್ರೆ ತನ್ನಷ್ಟಕ್ಕೆ ಮುಖ್ಯ ದ್ವಾರ ಓಪನ್ ಆಗುತ್ತದೆ. ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಅದೃಶ್ಯ ವ್ಯಕ್ತಿಯೊಂದಿಗೆ ಮಾತನಾಡುವುದನ್ನು ಈ ಕಾಣಬಹುದು. ಅರ್ಜೆಂಟೀನಾದ ಆಸ್ಪತ್ರೆಯೊಂದರಲ್ಲಿ ಪ್ರೇತ ರೋಗಿಯ ಜೊತೆಗೆ ಈ ಸಿಬ್ಬಂದಿ ಮಾತನಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಸಿಸಿಟಿವಿಯ ತುಣುಕನಲ್ಲಿ ವಿಲಕ್ಷಣ ದೃಶ್ಯವನ್ನು ನೀವು ಕಾಣುಬಹದು, ಯಾವುದೇ ರೋಗಿಯು ಕಾಣುವುದಿಲ್ಲ, ಆದರೆ ಸಿಬ್ಬಂದಿಗೆ ಮಾತ್ರ ಕಾಣುತ್ತಾರೆ. ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ಹೆಚ್ಚು ಶೇರ್ ಮಾಡಲಾಗಿದೆ ಮತ್ತು ಲಕ್ಷಾಂತರ ವೀಕ್ಷಣೆ ಮಾಡಿದ್ದಾರೆ.
ಈ ತುಣುಕನ್ನು ಬೆಳಿಗ್ಗೆ 3 ಗಂಟೆಗೆ ಬ್ಯೂನಸ್ ಐರಿಸ್‌ನಲ್ಲಿರುವ ಖಾಸಗಿ ಯೋಗಕ್ಷೇಮ ಕೇಂದ್ರವಾದ ಫಿನೊಚಿಯೆಟೊ ಸ್ಯಾನಟೋರಿಯಂನಲ್ಲಿ ಸೆರೆಹಿಡಿಯಲಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಸ್ವಯಂಚಾಲಿತ ಪ್ರವೇಶ ಬಾಗಿಲು ತೆರೆದಾಗ ಒಬ್ಬ ಸಿಬ್ಬಂದಿ ಕುಳಿತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಆದರೆ ದೃಶ್ಯಗಳಲ್ಲಿ ಸ್ಪಷ್ಟವಾಗಿ ಯಾರು ಪ್ರವೇಶ ಮಾಡಿದ್ದರೆ ಎಂದು ತೋರಿಸುವುದಿಲ್ಲ. ಭದ್ರತಾ ಸಿಬ್ಬಂದಿ ಯಾರೋ ಪ್ರವೇಶಿಸುವುದನ್ನು ನೋಡಿದ್ದಾನೆ ನಂತರ ಕ್ಲಿಪ್‌ಬೋರ್ಡ್ ತೆಗೆಯುತ್ತಾನೆ, ಅದೃಶ್ಯ ರೋಗಿಯ ಬಳಿಗೆ ಹೋಗಿ ಅವನೊಂದಿಗೆ ಮಾತನಾಡಲು ಮತ್ತು ವಿವರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದನು. ಒಂದು ಬಾರಿ ಈ ವಿಡಿಯೋ ನೋಡಿದರೆ ಭಯ ಉಂಟು ಮಾಡುವುದು ಖಂಡಿತ.
ಇದನ್ನು ಓದಿ: ವ್ಯಕ್ತಿಯೋರ್ವನಿಗೆ ಕಾಡುತ್ತಿರುವ ದೇವರಿಗೆ ಬಿಟ್ಟ ಕೋಣ! ಕೊಪ್ಪಳದಲ್ಲೊಂದು ವಿಚಿತ್ರ ಘಟನೆ
ಇಂಡಿಯಾ ಟುಡೇ ಈ ವೀಡಿಯೊದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದೆ. ಡೈಲಿ ಸ್ಟಾರ್ ವರದಿಯ ಪ್ರಕಾರ, ದೃಶ್ಯಗಳನ್ನು ಹಿಂತಿರುಗಿ ನೋಡಿದರೆ, ರೋಗಿಯು ಹಿಂದಿನ ದಿನ ಈ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವ್ಯಕ್ತಿ ಎಂದು ಹೇಳಿದೆ. ಈ ವೀಡಿಯೊವನ್ನು ನೋಡಿದ ನಂತರ ಕೆಲವು ಬಳಕೆದಾರರು ಭಯಭೀತರಾಗಿ ಕಮೆಂಟ್ ಮಾಡಿದ್ದಾರೆ, ಇನ್ನೂ ಕೆಲವರು ಈ ವಿಡಿಯೋವನ್ನು ನೋಡಿ ತಮಾಷೆಯಾಗಿರಬಹುದು ಎಂದು ಹೇಳಿದ್ದಾರೆ. ಇದು ಬಹಳ ವಿಚಿತ್ರವಾಗಿದೆ. ಒಂದೋ ಸಿಬ್ಬಂದಿ ಕ್ಯಾಮೆರಾದ ಮುಂದೆ ಜೋಕ್ ಆಡುತ್ತಿದ್ದಾರೆ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ