Viral Video: ಆಮೆಯನ್ನು ರಕ್ಷಿಸಲು ಮನುಷ್ಯರ ಬಳಿ ಸಹಾಯ ಕೇಳಿದ ಶಾರ್ಕ್​?!

|

Updated on: May 30, 2023 | 3:24 PM

Turtle : ಈ ವಿಡಿಯೋ ಅನ್ನು ಈತನಕ 2.7 ಮಿಲಿಯನ್​ ಜನರು ನೋಡಿದ್ದಾರೆ. ಕೊನೇಪಕ್ಷ ಈ ಶಾರ್ಕ್​ಗಾದರೂ ಕರುಣೆ ಇದೆಯಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೆ ವಾಸ್ತವ ಏನಿದೆ ಎನ್ನುವುದು ನಿಮಗಾದರೂ ತಿಳಿಯಬಹುದೆ?

Viral Video: ಆಮೆಯನ್ನು ರಕ್ಷಿಸಲು ಮನುಷ್ಯರ ಬಳಿ ಸಹಾಯ ಕೇಳಿದ ಶಾರ್ಕ್​?!
ಶಾರ್ಕ್​ ಮತ್ತು ಗಾಯಗೊಂಡ ಆಮೆ
Follow us on

Turtle : ದೈತ್ಯದೇಹಿ ಶಾರ್ಕ್​ಗೆ (Shark)​ ಆಮೆಯನ್ನು (Toutle) ಕಬಳಿಸುವ ಬದಲು ರಕ್ಷಿಸುವ ಆಲೋಚನೆ ಬಂದಿದ್ದಾದರೂ ಹೇಗೆ? ಆಹಾರ ಸರಪಳಿಯಲ್ಲಿ ಏನು ವ್ಯತ್ಯಾಸವಾಗುತ್ತಿದೆ ಹಾಗಿದ್ದರೆ? ಸಮುದ್ರದಾಳದಲ್ಲಿರುವ ಜೀವಸಂಕುಲವೂ ಸಹಾಯ, ಸಹಾನುಭೂತಿಯಂಥ ಗುಣಗಳನ್ನು ರೂಢಿಸಿಕೊಳ್ಳುತ್ತಿದೆಯೋ ಹೇಗೆ? ಅಥವಾ ಇದೊಂದು ಪವಾಡವೆ? ಹೀಗೆ ನಿಮ್ಮ ತಲೆಯಲ್ಲಿ ಪ್ರಶ್ನೆಗಳು ದಾಂಗುಡಿ ಇಡುತ್ತಿರಬಹುದು. ​ಈ ಕೆಳಗಿನ ವಿಡಿಯೋ ನೋಡಿ ಹಾಗಿದ್ದರೆ.

ಶಾರ್ಕ್​ ಈ ಆಮೆಯ ಬೆನ್ನಟ್ಟಿಕೊಂಡು ಬರುವಾಗ ಆಮೆ ಎದುರಾದ ದೋಣಿಯನ್ನು ಏರಲು ಪ್ರಯತ್ನಿಸಿದೆ. ದೋಣಿಯಲ್ಲಿರುವ ಹುಡುಗರಿಬ್ಬರು ಈ ಆಮೆಯನ್ನು ರಕ್ಷಿಸಿದ್ದಾರೆ. ಉಸಿರಾಡಲು ಕಷ್ಟಪಡುತ್ತಿದ್ದ ಆಮೆಯನ್ನು ಗಮನಿಸಿ ಅದರ ಕುತ್ತಿಗೆಗೆ ಯಾರೋ ಕಟ್ಟಿದ್ದ ದಪ್ಪ ಹಗ್ಗಗಳನ್ನು ಚಾಕುವಿನಿಂದ ಕತ್ತರಿಸಿದ್ದಾರೆ. ಸೀಳಿದ ಕುತ್ತಿಗೆಗೆ ಅರಿಷಿಣ ಪುಡಿ ಸವರಿದ್ದಾರೆ. ಆದರೆ ಇಷ್ಟೊಂದು ಆಳವಾದ ಗಾಯಕ್ಕೆ ಒಳಗಾದ ಆಮೆ ಬದುಕುವುದೆ?

ಇದನ್ನೂ ಓದಿ : Viral: ಅತ್ತೆ ಸೊಸೆ ಒಂದೇ ಸೀರೆ; ಇದು ನಿಜಕ್ಕೂ ಆರ್ಥಿಕ ಹಿಂಜರಿಕೆ ಎನ್ನುತ್ತಿರುವ ನೆಟ್ಟಿಗರು

ಈ ವಿಡಿಯೋ ಅನ್ನು ಈತನಕ 2.7 ಮಿಲಿಯನ್​ ಜನರು ನೋಡಿದ್ದಾರೆ. ಕೊನೇಪಕ್ಷ ಈ ಶಾರ್ಕ್​ಗಾದರೂ ಕರುಣೆ ಇದೆಯಲ್ಲ ಎಂದು ಕೆಲವರು ಹೇಳಿದ್ದಾರೆ. ಶಾರ್ಕ್​ ಆಮೆಯನ್ನು ರಕ್ಷಿಸಲು ಮನುಷ್ಯನ ಸಹಾಯ ಕೇಳಿದೆ ಎಂದು ಹೇಗೆ ಹೇಳುತ್ತೀರಿ? ಶಾರ್ಕ್​ ಆಮೆಯನ್ನು ತಿನ್ನಲು ಬೆನ್ನಟ್ಟಿಕೊಂಡು ಬಂದಿರಬಹುದಲ್ಲವೆ? ಎಂದು  ಕೆಲ ಜನ ಕೇಳಿದ್ದಾರೆ.

ಇದನ್ನೂ ಓದಿ : Viral Video; ಮೊಸರಿನೊಂದಿಗೆ ಗುಲಾಬ್​ ಜಾಮೂನ್​! ನೆಟ್ಟಿಗರಿಗೆ ಬೈಗಳುಗಳು ಸಾಲುತ್ತಿಲ್ಲ

ಶಾರ್ಕ್​ಗೆ ಕೊನೆಯಲ್ಲಿ ಅನ್ನಿಸಿರಬಹುದು, ಆಮೆಯ ಸೂಪ್​ ಔಟ್ ಆಫ್ ಫ್ಯಾಷನ್ ಆಗಿದೆಯೆಂದು. ಹಗ್ಗವನ್ನು ಕತ್ತರಿಸಿದ ಮೇಲೆ ಶಾರ್ಕ್​ ಬಂದು ಆಮೆಯನ್ನು ತಿನ್ನಲು ಎತ್ತಿಕೊಂಡು ಹೋಯಿತು. ಆಮೆ ಯಾವ ಸಹಾಯವನ್ನೂ ಕೇಳಿಕೊಂಡು ಬಂದಿಲ್ಲ, ಆಮೆಯನ್ನು ಹಿಡಿದು ತಿನ್ನಲು ಕಷ್ಟಪಡುತ್ತಿದೆ ಎನ್ನುವುದು ಅತ್ಯಂತ ಸ್ಪಷ್ಟವಾಗಿದೆ. ಏನಾಗಿದೆ ನಿಮಗೆ ಇಂಥ ವಿಡಿಯೋಗಳ ಮೂಲಕ ನೀವು ಪ್ರಚಾರ ಪಡೆದುಕೊಳ್ಳಲು ಹವಣಿಸುತ್ತೀರಿ? ಅಂತೆಲ್ಲ ಪ್ರತಿಕ್ರಿಯಸಿದ್ದಾರೆ ಅನೇಕರು.

ಇದನ್ನು ನೋಡಿದ ನೀವು ಏನು ಹೇಳುತ್ತೀರಿ?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ