Viral Video: ಬಿಸಿ ಎಣ್ಣೆಯೊಳಗೆ ಕೈ ಹಾಕಿ ಪಕೋಡ ಮಾಡಿದ ವ್ಯಾಪಾರಿ; ಶಾಕಿಂಗ್ ವಿಡಿಯೋ ಇಲ್ಲಿದೆ

ಮುಂಬೈನ ಫುಡ್ ಬ್ಲಾಗರ್ ಒಬ್ಬರು ಈ ವೀಡಿಯೊವನ್ನು ರೆಕಾರ್ಡ್ ಮಾಡಿ ಅದನ್ನು Instagramನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಣ್ಣ ವಿಡಿಯೋ ಕ್ಲಿಪ್ 1 ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ.

Viral Video: ಬಿಸಿ ಎಣ್ಣೆಯೊಳಗೆ ಕೈ ಹಾಕಿ ಪಕೋಡ ಮಾಡಿದ ವ್ಯಾಪಾರಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬಿಸಿ ಎಣ್ಣೆಗೆ ಕೈ ಹಾಕಿ ಪಕೋಡ ಮಾಡಿದ ವ್ಯಾಪಾರಿ
Edited By:

Updated on: Dec 31, 2021 | 7:06 PM

ಅಡುಗೆ ಮಾಡುವಾಗ ಬಿಸಿಯಾದ ಪಾತ್ರೆ ಅಥವಾ ಬಿಸಿ ಎಣ್ಣೆ ತಾಗಿದರೇ ಚರ್ಮವೆಲ್ಲ ಕೆಂಪಾಗಿ ಉರಿಯತೊಡಗುತ್ತದೆ. ಅಂಥದ್ದರಲ್ಲಿ ಇಲ್ಲೊಬ್ಬ ಬೀದಿ ಬದಿಯ ವ್ಯಾಪಾರಿ ಬಾಣಲೆಯಲ್ಲಿ ಕುದಿಯುತ್ತಿರುವ ಎಣ್ಣೆಗೆ ಕೈ ಹಾಕಿ ಪಕೋಡವನ್ನು ತೆಗೆದಿದ್ದಾನೆ. ಆತ ಪಕೋಡ ಮಾಡಲು ಸೌಟಿನ ಬದಲು ಕೈಯನ್ನೇ ಬಳಸುವ ವಿಡಿಯೋ ಭಾರೀ ವೈರಲ್ ಆಗಿದೆ. ಈರುಳ್ಳಿ ಪಕೋಡವನ್ನು ಕರಿಯುವಾಗ ಕಾದ ಎಣ್ಣೆಯಲ್ಲಿ ಕೈ ಅದ್ದಿರುವ ಬೀದಿ ತಿನಿಸು ವ್ಯಾಪಾರಿಯ ವಿಡಿಯೋ ನೋಡಿ ಸಾಮಾಜಿಕ ಜಾಲತಾಣ ಬಳಕೆದಾರರು ಶಾಕ್ ಆಗಿದ್ದಾರೆ.

ಮುಂಬೈನ ಫುಡ್ ಬ್ಲಾಗರ್ ಒಬ್ಬರು ಈ ವೀಡಿಯೊವನ್ನು ರೆಕಾರ್ಡ್ ಮಾಡಿ ಅದನ್ನು Instagramನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಣ್ಣ ವಿಡಿಯೋ ಕ್ಲಿಪ್ 1 ಮಿಲಿಯನ್ ಜನರಿಂದ ವೀಕ್ಷಿಸಲ್ಪಟ್ಟಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಜೈಪುರದ ಕಿಸಾನ್ ಪಕೋಡ್ ವಾಲಾ ಎಂಬ ಹೆಸರಿನ ರಸ್ತೆಬದಿಯ ಸ್ಟಾಲ್‌ನಲ್ಲಿ ವ್ಯಾಪಾರಿಯೊಬ್ಬರು ಬಾಣಲೆಯಲ್ಲಿ ಪಕೋಡವನ್ನು ಕರಿಯುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

ಕಾದ ಎಣ್ಣೆಯಲ್ಲಿ ಪಕೋಡ ಹಾಕಿ ಅದರಲ್ಲಿ ಕೈ ಅದ್ದಿರುವ ವ್ಯಾಪಾರಿಯ ಕೈಗಳಿಗೆ ಯಾವುದೇ ತೊಂದರೆಯೂ ಆಗಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ವಿಡಿಯೋದ ಕೊನೆಯಲ್ಲಿ ಆ ಫುಡ್ ಬ್ಲಾಗರ್ ಪಕೋಡಾಗಳನ್ನು ಸವಿಯುವುದನ್ನು ಕಾಣಬಹುದು.

ಇದನ್ನೂ ಓದಿ: Viral Video: ಕ್ರಿಸ್​ಮಸ್​ ಆಚರಿಸಿದ್ದೇಕೆಂದು ಗಲಾಟೆ ಮಾಡಿದ ಬಜರಂಗದಳದವರಿಗೆ ಬಿಸಿ ಮುಟ್ಟಿಸಿದ ಮಹಿಳೆ; ವಿಡಿಯೋ ವೈರಲ್

Viral Video: ಉದ್ದಿನ ದೋಸೆ, ನೀರ್ ದೋಸೆಯೆಲ್ಲ ಹಳೇದಾಯ್ತು; ಫ್ರೂಟ್ ದೋಸೆ ಮಾಡೋದು ಹೇಗಂತ ಗೊತ್ತಾ?