Viral Video: ಪುಟ್ಟ ಬಾಲಕ ಏಣಿ ಇಳಿಯುವ ವೇಗ ನೋಡಿ ಬೆರಗಾದ ನೆಟ್ಟಿಗರು; ವಿಡಿಯೋ ಫುಲ್ ವೈರಲ್

ಅತಿ ವೇಗದಲ್ಲಿ ಏಣಿಯ ಸಹಾಯದಿಂದ ಕೆಳಗಿಳಿದು ಬಂದ ಪುಟ್ಟ ಬಾಲಕನನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

Viral Video: ಪುಟ್ಟ ಬಾಲಕ ಏಣಿ ಇಳಿಯುವ ವೇಗ ನೋಡಿ ಬೆರಗಾದ ನೆಟ್ಟಿಗರು; ವಿಡಿಯೋ ಫುಲ್ ವೈರಲ್
ಅತಿ ವೇಗದಲ್ಲಿ ಏಣಿಯಿಂದ ಕೆಳಗಿಳಿದು ಬಂದ ಪುಟ್ಟ ಬಾಲಕ
Edited By:

Updated on: Oct 24, 2021 | 10:32 AM

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತವೆ. ಕೆಲವು ಆಶ್ಚರ್ಯಗೊಳ್ಳುವ ವಿಡಿಯೋಗಳು ಹೆಚ್ಚು ಇಷ್ಟವಾಗುತ್ತವೆ. ಪುಟ್ಟ ಬಾಲಕರ ಸಾಹಸದ ವಿಡಿಯೊಗಳನ್ನು ನೋವು ಆಗಾಗ ನೋಡುತ್ತಿರಬಹುದು. ಆದರೆ ಇಲ್ಲೋರ್ವ ಬಾಲಕ ಏಣಿ ಇಳಿಯುತ್ತಿರುವ ವೇಗ ನೋಡಿ ಹಲವರು ಆಶ್ಚರ್ಯಗೊಂಡಿದ್ದಾರೆ. ವೇಗದಲ್ಲಿ ಏಣಿ ಇಳಿದು ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ಬಾಲಕ ನಡೆದು ಸಾಗುತ್ತಾನೆ.

ಬಾಲಕ ಏಣಿಯ ಮೇಲೇರಿದ್ದಾನೆ. ಕೆಳಗಿಳಿಯಲು ಹೊಸ ವಿಧಾನವನ್ನು ಅನುಸರಿಸಿ ವೇಗದಲ್ಲಿ ಕೆಳಗಿಳಿದಿದ್ದಾನೆ. ಕೆಲವರು ಏಣಿ ಏರುವುದನ್ನು ಚಿಕ್ಕ ಮಕ್ಕಳಿಗೆ ಅಭ್ಯಾಸ ಮಾಡಿಸಬೇಡಿ ಎಂದು ಹೇಳಿದ್ದಾರೆ. ಇನ್ನು ಕೆಲವರು ಬಾಲಕನ ಕೌಶಲ್ಯ ನೋಡಿ ಬೆರಗಾಗಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ನೋಡುವಂತೆ ಬಾಲಕ ಏಣಿಯ ಮೇಲೆ ಆರಾಮವಾಗಿ ಕುಳಿತಿದ್ದಾನೆ. ಆತನ ಮುಖದಲ್ಲಿ ಯಾವುದೇ ಭಯ ಕಾಣುತ್ತಿಲ್ಲ. ವೇಗದಲ್ಲಿ ಸರಸರನೆ ಏಣಿ ಇಳಿದು ಕೆಳ ಬಂದಿದ್ದಾನೆ. ಯಾವುದೇ ಆತಂಕವಿಲ್ಲದೇ ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ನಡೆದು ಸಾಗುತ್ತಿದ್ದಾನೆ.

ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡಾಗಿನಿಂದ 84 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಗಳು ಲಭ್ಯವಾಗಿವೆ. ಹಲವರು ತಮಾಷೆಯ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ. ಈತ ಲಿಫ್ಟ್​ಗಿಂತಲೂ ವೇಗದಲ್ಲಿ ಕೆಳಗಿಳಿದುಬಿಟ್ಟ ಎಂದು ಓರ್ವರು ಹೇಳಿದ್ದಾರೆ. ಇನ್ನು ಕೆಲವರು ಬಾಲಕ ತುಂಬಾ ಚುರುಕಾಗಿದ್ದಾನೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋವನ್ನು ಹಲವರು ಮೆಚ್ಚಿಕೊಂಡಿದ್ದು ದೃಶ್ಯ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ:

Viral Video: ಬಾತುಕೋಳಿಯ ಮೂನ್ ವಾಕ್ ನೋಡಿದ್ದೀರಾ? ಇಲ್ಲಿದೆ ನೋಡಿ ವಿಡಿಯೊ

Viral Video: ಮೇಲೇರಲು ಸಹಾಯ ಮಾಡಿದ ಈ ಇರುವೆಗೆ ಕೊನೆಗೆ ಏನು ಉಳಿಯಿತು?; ಬದುಕಿನ ಪಾಠ ಹೇಳುವ ಈ ವಿಡಿಯೋ ನೋಡಿ