ಪ್ರತಿಯೊಂದು ಹೆಣ್ಣಿಗೂ ಅಪ್ಪ ಎಂದರೆ ತುಂಬಾ ಇಷ್ಟ, ಹೆಣ್ಮುಕ್ಕಳ ಜೀವನದ ಪ್ರಮುಖ ಹಂತ ಕೂಡ ಹೌದು, ಬಾಲ್ಯದಲ್ಲಿ ಹೆಣ್ಮಕ್ಕಳು ತನ್ನ ತಂದೆಯ ಜೊತೆಗೆ ಕಳೆದ ಅದೆಷ್ಟೋ ಕ್ಷಣಗಳನ್ನು ಈ ವಿಡಿಯೋ ನೆನಪಿಸಿಬಹುದು. ಬಾಲ್ಯದಲ್ಲಿ ಯಾವೆಲ್ಲ ಪ್ರಯೋಗ ಮಾಡಬೇಕು ಅದನೆಲ್ಲಾ ಅಪ್ಪನ ಮೇಲೆ ಪ್ರಯೋಗ ಮಾಡುತ್ತೇವೆ. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಕ್ಯೂಟ್ ಆಗಿ ವೈರಲ್ ಆಗಿರುವ ವೀಡಿಯೊ.
ಹೌದು ಪುಟ್ಟು ಹುಡುಗಿ ತನ್ನ ತಂದೆಗೆ ಮೇಕಪ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದರೆ. ಇದೀಗ ಈ ವಿಡಿಯೋ 2 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ನಿಮ್ಮ ಭಾವನಾತ್ಮಕ ಕ್ಷಣವನ್ನು ಈ ವಿಡಿಯೋ ನೆನಪಿಸಬಹುದು. ನೀವು ತುಂಬಾ ಒತ್ತಡ ಅಥವಾ ಬೇಜಾರಾಗಿದ್ದರೆ ಈ ವೀಡಿಯೊ ನೋಡಿದರೆ ಖಂಡಿತ ನಿಮ್ಮ ಮುಖದಲ್ಲಿ ನಗುವನ್ನು ಬರುವುದು.
ಈ ಪುಟ್ಟ ಹುಡುಗಿ ತನ್ನ ತಂದೆಗೆ ಮೇಕಪ್ ಮಾಡುತ್ತಿದ್ದೇನೆ ಎಂದು ಹೇಳುವ ಮೂಲಕ ಈ ವೀಡಿಯೊ ಪ್ರಾರಂಭವಾಗುತ್ತದೆ. ನಂತರ ಕ್ಯಾಮರಾವನ್ನು ತಂದೆಯ ಕಡೆಗೆ ತರುತ್ತಾಳೆ. ಈ ವಿಡಿಯೋದಲ್ಲಿ ಆಕೆಯ ತಂದೆ ಮಂಚದ ಮೇಲೆ ಮಲಗಿರುವುದನ್ನು ಕಾಣಬಹುದು. ವಿಡಿಯೋ ರೆಕಾರ್ಡ್ ಮಾಡುತ್ತಿರುವ ತಾಯಿ, ತಮ್ಮ ಮಗಳು ಪತಿಯ ಕಣ್ಣಿಗೆ ಮಾಡಿದ ಮೇಕಪ್ನ್ನು ಹತ್ತಿರದಿಂದ ತೋರಿಸುತ್ತಾರೆ. ತಾಯಿಯು ತನ್ನ ಮಗಳ ಮೇಕಪ್ ಮಾಡುವುದನ್ನು ಕಲಿತ್ತಿದ್ದಾಳೆ ಎಂದು ಹೇಳುತ್ತಾರೆ.
ಇದನ್ನು ಓದಿ: Viral Video: ನೀವು ಈ ವಿಡಿಯೋವನ್ನು ನೋಡಿದ್ರೆ ಒಂದು ಬಾರಿ ಭಾವುಕರಾಗಿ ನಿಮ್ಮ ಶಿಕ್ಷಕರನ್ನು ನೆನಪಿಸಿಕೊಳ್ಳುತ್ತೀರ
ಈ ವಿಡಿಯೋವನ್ನು ನೋಡಿ ಅನೇಕರು ಸೂಪರ್ ಸೋ ಕ್ಯೂಟ್ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಮ್ಮ ತಂದೆಯ ಜತೆಗೆ ಕಳೆದ ನೆನಪುಗಳನ್ನು ಇಲ್ಲಿ ಮೆಲುಕು ಹಾಕಿಕೊಂಡಿದ್ದಾರೆ. ಈ ವಿಡಿಯೋ ಅಪ್ಪ- ಮಗಳ ಪ್ರೀತಿಗೆ ಸಾಕ್ಷಿ ಎಂದು ಬರೆದುಕೊಂಡಿದ್ದಾರೆ. ದೊಡ್ಡವರಿಗಿಂತ ಚೆನ್ನಾಗಿ ಮೇಕಪ್ ಮಾಡುತ್ತಾಳೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇದು ಹೇಗೆ ಸಾಧ್ಯ ಎಂದು ಕಮೆಂಟ್ ಮಾಡಿದ್ದಾರೆ.