‘ಕೋರ್ಟಿನಲ್ಲಿದ್ದಾಗ ಮಹಿಳಾ ವಕೀಲರು ಕೂದಲನ್ನು ಸರಿ ಮಾಡಿಕೊಳ್ಳಬಾರದು’ ಪುಣೆ ಕೋರ್ಟ್ ನೋಟೀಸ್
Pune : ‘ವಾಹ್! ವಕೀಲೆಯರನ್ನು ಇದೀಗ ಯಾರು ತಡವಿದ್ದಾರೆ ಮತ್ತು ಏಕೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಹೆಣ್ಣುಮಕ್ಕಳೆಲ್ಲ ಇನ್ನೂ ಯಾವಾಗ ಅಸ್ತಿತ್ವಹೀನರಾಗಿರುತ್ತೀರಿ ಎಂದು ಕೇಳುವುದೊಂದು ಬಾಕಿ’ ಲೇಖಕಿ ಮಿನಿ ನಾಯರ್.
Viral : ಪುಣೆ ಜಿಲ್ಲಾ ನ್ಯಾಯಾಲಯದ ರಿಜಿಸ್ಟ್ರಾರ್ ನೀಡಿದ ನೋಟೀಸ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ವಕೀಲೆಯರು ನ್ಯಾಯಾಲಯದೊಳಗೆ ಕರ್ತವ್ಯ ನಿರತರಾಗಿದ್ದಾಗ ತಮ್ಮ ಕೂದಲನ್ನು ಸರಿ ಮಾಡಿಕೊಳ್ಳಬಾರದು. ಇದರಿಂದ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅಡ್ಡಿ ಉಂಟಾಗುತ್ತದೆ. ಇದು ಪದೇಪದೆ ಗಮನಕ್ಕೆ ಬಂದಿದ್ದರಿಂದ ಈ ನೋಟೀಸ್ ನೀಡಲಾಗಿದೆ ಎನ್ನುವುದು ಈ ನೋಟೀಸ್‌ನ ಸಾರಾಂಶ. ಪುಣೆಯ ಕ್ರಿಮಿನಲ್ ಲಾಯರ್ ವಿಜಯಲಕ್ಷ್ಮೀ ಖೋಪಡೆ, ‘ಈ ನೋಟೀಸ್‌ನ ಒಟ್ಟಾರೆ ಹೂರಣವೇನು? ಪದೇಪದೆ ಕೂದಲು ಮುಖದ ಮೇಲೆ ಆವರಿಸುತ್ತಿದ್ದರೆ, ಅದನ್ನು ಆದಷ್ಟು ಬೇಗ ಸರಿ ಮಾಡಿಕೊಳ್ಳಿ ಎಂದು ಹೇಳಬಹುದೇ ಹೊರತು ಹೀಗೆ ಆದೇಶ ನೀಡುವುದು ಸರಿಯಲ್ಲ. ಈ ಆದೇಶಕ್ಕೆ ಮಾನದಂಡವೇನು?’ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಒಳಗೊಂಡಂತೆ ಸಾಮಾಜಿಕ ಮಾಧ್ಯಮದಲ್ಲಿ ಈಗಾಗಲೇ ಭಾರೀ ಚರ್ಚೆ ಶುರುವಾಗಿದೆ. ‘ವಾಹ್! ಈಗ ನೋಡಿ ವಕೀಲೆಯರನ್ನು ಯಾರು ತಡವಿದ್ದಾರೆ ಮತ್ತು ಏಕೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ನೀವು ಹೆಣ್ಣುಮಕ್ಕಳು ಇನ್ನೂ ಯಾವಾಗ ಅಸ್ತಿತ್ವಹೀನರಾಗಿರುತ್ತೀರಿ ಎಂದು ಅವರು ಕೇಳುವುದೊಂದು ಬಾಕಿ ಇದೆ’ ಎಂದಿದ್ಧಾರೆ ಲೇಖಕಿ ಮಿನಿ ನಾಯರ್ ತಮ್ಮ ಟ್ವೀಟ್ನಲ್ಲಿ.
Wow now look ! Who is distracted by women advocates and why ! pic.twitter.com/XTT4iIcCbx
— Indira Jaising (@IJaising) October 23, 2022
ಇನ್ನೊಬ್ಬರು, ‘ಅಂದರೆ ಮಹಿಳೆಯರೆಲ್ಲ ತಲೆಯನ್ನು ಬೋಳಿಸಿಕೊಳ್ಳಬೇಕೆ?’ ಎಂದು ಕೇಳಿದ್ಧಾರೆ ಅಚ್ಚರಿಯಿಂದ. ಖ್ಯಾತ ಛಾಯಾಗ್ರಾಹಕ ಅತುಲ್ ಕಸಬೇಕರ್, ‘ಮಹಿಳೆಯರ ಈ ನಡೆಯಿಂದ ಈ ಮಟ್ಟಿಗೆ ಪುರುಷರು ಧಿಕ್ಕೆಟ್ಟಿರುವುದು ಭಾರೀ ಆಸಕ್ತಿಕರವಾಗಿದೆ’ ಖಾಲಿದಾ ಪರ್ವೀನ್ ಎನ್ನುವವರು, ‘ನಿಜಕ್ಕೂ ಇದು ಭಾರೀ ತಮಾಷೆಯಾಗಿದೆ. ಸಾಮಾನ್ಯವಾಗಿ ಪುರುಷರ ಕೈ ಸದಾ ತಲೆಗೂದಲಲ್ಲೇ ಇರುತ್ತದೆ. ಯಾವಾಗಲೂ ಅವರು ತಮ್ಮ ಪ್ಯಾಂಟ್ ಜೋಬಿನಲ್ಲಿ ಸಣ್ಣ ಬಾಚಣಿಕೆ ಇಟ್ಟುಕೊಂಡಿರುತ್ತಾರೆ’ ಎಂದಿದ್ದಾರೆ.
ಅಕ್ಟೋಬರ್ 20 ರಂದು ಈ ನೋಟೀಸ್ ಹೊರಬೀಳುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಈ ಚರ್ಚೆ ಪ್ರತಿಭಟನೆ ಸ್ವರೂಪ ಪಡೆದುಕೊಂಡಿತ್ತು. ಎರಡು ದಿನಗಳ ನಂತರ ಸದ್ದಿಲ್ಲದಂತೆ ಈ ನೋಟೀಸ್ ಹಿಂಪಡೆಯಲಾಯಿತು. ಯಾರನ್ನೂ ನೋಯಿಸುವ ಮತ್ತು ಯಾರ ಭಾವನೆಯನ್ನೂ ಅವಮಾನಿಸುವ ಉದ್ದೇಶ ಈ ನೋಟೀಸ್ಗೆ ಇರಲಿಲ್ಲ. ಬದಲಾಗಿ ನ್ಯಾಯಾಲಯದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ ಈ ನೋಟೀಸ್ ನೀಡಲಾಗಿತ್ತು ಎನ್ನುವುದು ಅನಾಮಧೇಯ ಅಧಿಕಾರಿಯೊಬ್ಬರಿಂದ ತಿಳಿದುಬಂದಿದೆ.
ಆಗಾಗ ಜಗತ್ತಿನಲ್ಲಿ ಏನೆಲ್ಲ ತಮಾಷೆ ನಡೆಯುತ್ತವೆ ನಿಜ. ಆದರೆ ಕೋರ್ಟಿನಲ್ಲಿಯೂ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 12:54 pm, Tue, 25 October 22